ಲಾಕ್‌ಡೌನ್ ವೇಳೆ ಪೊಲೀಸರಿಂದ ಲಾಠಿಚಾರ್ಜ್ ಆರೋಪ; ಎಲ್ಲಾ ಪೊಲೀಸರ ಮೇಲೆ ವಿಚಾರಣೆ ಸಾಧ್ಯವಿಲ್ಲ: ಹೈಕೋರ್ಟ್
ಆರೋಪಕ್ಕೆ ಪೂರಕವಾಗಿ ಯಾವುದೇ ದಾಖಲೆ ಒದಗಿಸಿಲ್ಲ. ಹಲ್ಲೆ ನಡೆಸಿದರೆ ಖಾಸಗಿ ದೂರು ದಾಖಲಿಸಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ತಿಳಿಸಿದೆ. ಅಷ್ಟೇ ಅಲ್ಲದೆ, 1 ಸಾವಿರ ರೂಪಾಯಿ ದಂಡ ವಿಧಿಸಿ ಪಿಐಎಲ್ ವಜಾಗೊಳಿಸಿದೆ.
ಬೆಂಗಳೂರು: ಲಾಕ್‌ಡೌನ್ ವೇಳೆ ಪೊಲೀಸರಿಂದ ಲಾಠಿಚಾರ್ಜ್ ಆರೋಪಕ್ಕೆ ಸಂಬಂಧಿಸಿ ಪೊಲೀಸರ ವಿರುದ್ಧ ಎಫ್ಐಆರ್ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಲಾಗಿದೆ. ₹1,000 ದಂಡ ವಿಧಿಸಿ ವಕೀಲ ಬಾಲಕೃಷ್ಣನ್ ಅರ್ಜಿ ವಜಾ ಮಾಡಲಾಗಿದೆ. ಪೊಲೀಸರು ಬಾಯಿಮಾತಿನಲ್ಲಿ ಹೇಳಿದರೆ ಕೇಳುತ್ತಾರಾ? ನಮ್ಮ ಜನರು ಅಷ್ಟು ನಾಗರಿಕರಾಗಿದ್ದಾರಾ? ಕೊವಿಡ್‌ನಿಂದ ಎಷ್ಟು ಪೊಲೀಸರು ಸತ್ತಿದ್ದಾರೆ ತಿಳಿದಿದೆಯೇ? ಎಂದು ನ್ಯಾಯಪೀಠ ಪ್ರಶ್ನಿಸಿ, ಅರ್ಜಿ ವಜಾಗೊಳಿಸಿದೆ.
ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ, ನ್ಯಾಯಮೂರ್ತಿ ಎಂ. ನಾಗಪ್ರಸನ್ನರಿದ್ದ ಪೀಠ ಹೀಗೆ ಪ್ರಶ್ನೆ ಮಾಡಿದೆ. ಪೊಲೀಸರು ತಮ್ಮ ಖುಷಿಗಾಗಿ ಲಾಠಿ ಎತ್ತುವುದಿಲ್ಲ. ಕೆಲವು ಪೊಲೀಸರಿಗೆ ನೀರು, ಊಟವೂ ಸಿಗುತ್ತಿಲ್ಲ. ಪ್ರಪಂಚವೇ ಕೊವಿಡ್ ಸೋಂಕಿನಿಂದ ನರಳುತ್ತಿದೆ. ಜನ ಮನೆಯಲ್ಲಿರಲೆಂದು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ. ಪೊಲೀಸರಿಗೆ ಜೀವ ಭಯವಿದ್ದರೂ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಪೊಲೀಸರು ಶಿಸ್ತುಬದ್ಧ ಅಧಿಕಾರಿಗಳು. ಒಂದೆರಡು ಕಡೆ ಪೊಲೀಸರು ಚೌಕಟ್ಟು ಮೀರಿರಬಹುದು. ಅದಕ್ಕಾಗಿ ಎಲ್ಲಾ ಪೊಲೀಸರ ಮೇಲೆ ವಿಚಾರಣೆ ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಆರೋಪಕ್ಕೆ ಪೂರಕವಾಗಿ ಯಾವುದೇ ದಾಖಲೆ ಒದಗಿಸಿಲ್ಲ. ಹಲ್ಲೆ ನಡೆಸಿದರೆ ಖಾಸಗಿ ದೂರು ದಾಖಲಿಸಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ತಿಳಿಸಿದೆ. ಅಷ್ಟೇ ಅಲ್ಲದೆ, 1 ಸಾವಿರ ರೂಪಾಯಿ ದಂಡ ವಿಧಿಸಿ ಪಿಐಎಲ್ ವಜಾಗೊಳಿಸಿದೆ.
ಇದಕ್ಕೂ ಮೊದಲು, ಲಾಕ್‌ಡೌನ್ ಜಾರಿಗೊಳಿಸುವಾಗ ಪೊಲೀಸರು ಸಾರ್ವಜನಿಕರ ಮೇಲೆ ಲಾಠಿಚಾರ್ಜ್ ಮಾಡುವುದು ಸೂಕ್ತವಲ್ಲ. ಕರ್ತವ್ಯದ ವೇಳೆ ಪೊಲೀಸರು ಸಮತೋಲನ ತಪ್ಪಬಾರದು. ಇಂತಹ ಘಟನೆಗಳಾಗದಂತೆ ಎಚ್ಚರವಹಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿತ್ತು. ಲಾಕ್‌ಡೌನ್ ಜಾರಿ ಮಾಡುವಾಗ ಸಾರ್ವಜನಿಕರ ಮೇಲೆ ಲಾಠಿ ಬಳಸದೇ ಪೊಲೀಸರು ಸಂಯಮದಿಂದ ವರ್ತಿಸಬೇಕು. ಕೆಲವೆಡೆ ಕೊವಿಡ್ ಸೋಂಕಿತರಿಗೂ ಲಾಠಿಚಾರ್ಜ್ ಮಾಡಿದ ವರದಿಯಿದೆ. ಪೊಲೀಸರು ಸಾರ್ವಜನಿಕರ ಮೇಲೆ ಇಂತಹ ವರ್ತನೆ ಪ್ರದರ್ಶಿಸಬಾರದು ಎಂದ ಕೋರ್ಟ್, ಸಂಯಮ ಪ್ರದರ್ಶಿಸಲು ಪೊಲೀಸರಿಗೆ ಸೂಚನೆ ನೀಡಿತ್ತು. ಜತೆಗೆ ಪೊಲೀಸರಿಗೆ ಸೂಕ್ತ ಮಾರ್ಗಸೂಚಿ ನೀಡಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಇದನ್ನೂ ಓದಿ: ಶಿರೂರು ಮಠಕ್ಕೆ ನೂತನ ಯತಿಯಾಗಿ ಅಪ್ರಾಪ್ತರ ನೇಮಕಕ್ಕೆ ಆಕ್ಷೇಪ; ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು
ಲಿವ್ ಇನ್ ರಿಲೇಶನ್ಶಿಪ್ನ್ನು ಸಾಮಾಜಿಕ ಮತ್ತು ನೈತಿಕವಾಗಿ ಒಪ್ಪಲು ಸಾಧ್ಯವಿಲ್ಲ; ಹೈಕೋರ್ಟ್
Published On - 5:11 pm, Wed, 19 May 21