ಲಿವ್ ಇನ್ ರಿಲೇಶನ್​ಶಿಪ್​ನ್ನು ​ಸಾಮಾಜಿಕ ಮತ್ತು ನೈತಿಕವಾಗಿ ಒಪ್ಪಲು ಸಾಧ್ಯವಿಲ್ಲ; ಹೈಕೋರ್ಟ್

ಗುಲ್ಜಾ ಕುಮಾರಿ ಮತ್ತು ಗುರ್ವಿಂದರ್ ಸಿಂಗ್ ಎಂಬ ಜೋಡಿ ಲಿವ್ ಇನ್ ರಿಲೇಶನ್​ಶಿಪ್​ನಲ್ಲಿ ಇದ್ದಿದ್ದಾಗಿಯೂ ಮದುವೆಯಾಗುವುದಾಗಿಯೂ ಹೈಕೋರ್ಟ್​ಗೆ ಹೇಳಿಕೊಂಡಿದ್ದರು. ತಮಗೆ ಪಾಲಕರಿಂದ ರಕ್ಷಣೆ ಒದಗಿಸುವಂತೆ ಹೈಕೋರ್ಟ್​ನ ಮೊರೆ ಹೋಗಿದ್ದರು.

ಲಿವ್ ಇನ್ ರಿಲೇಶನ್​ಶಿಪ್​ನ್ನು ​ಸಾಮಾಜಿಕ ಮತ್ತು ನೈತಿಕವಾಗಿ ಒಪ್ಪಲು ಸಾಧ್ಯವಿಲ್ಲ; ಹೈಕೋರ್ಟ್
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ಲಿವ್ ಇನ್ ರಿಲೇಶನ್​ಶಿಪ್ ಸಂಬಂಧವನ್ನು ಸಾಮಾಜಿಕವಾಗಿ ಮತ್ತು ನೈತಿಕವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪಂಜಾಮ್ ಮತ್ತು ಹರಿಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಲಿವ್ ಇನ್ ರಿಲೇಶನ್​ಶಿಪ್​ನಲ್ಲಿದ್ದ ಜೋಡಿಯೊಂದು ತಮ್ಮ ಪಾಲಕರಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಮಾನಕ್ಕೆ ಬಂದಿದೆ.

ಗುಲ್ಜಾ ಕುಮಾರಿ ಮತ್ತು ಗುರ್ವಿಂದರ್ ಸಿಂಗ್ ಎಂಬ ಜೋಡಿ ಲಿವ್ ಇನ್ ರಿಲೇಶನ್​ಶಿಪ್​ನಲ್ಲಿ ಇದ್ದಿದ್ದಾಗಿಯೂ ಮದುವೆಯಾಗುವುದಾಗಿಯೂ ಹೈಕೋರ್ಟ್​ಗೆ ಹೇಳಿಕೊಂಡಿದ್ದರು. ತಮಗೆ ಪಾಲಕರಿಂದ ರಕ್ಷಣೆ ಒದಗಿಸುವಂತೆ ಹೈಕೋರ್ಟ್​ನ ಮೊರೆ ಹೋಗಿದ್ದರು. 18 ವರ್ಷದ ಯುವತಿ ಮತ್ತು 21 ವರ್ಷದ ಯುವಕ ಸಈ ಅರ್ಜಿ ಸಲ್ಲಿಸಿದ್ದು, ಲಿವ್ ಇನ್ ರಿಲೇಶನ್​ಶಿಪ್ ವರದಕ್ಷಿಣೆಯಂತಹ ಸಂಪ್ರದಾಯವನ್ನು ತಡೆಗಟ್ಟುತ್ತದೆ ಎಂದು ವಾದಿಸಿದ್ದರು. ಆದರೆ ಅವರ ಅರ್ಜಿಯ ವಿಚಾರಣೆ ನಡೆಸಿದ ಪಂಜಾಬ್ಹರಿಯಾಣ ಹೈಕೋರ್ಟ್, ಲಿವ್ ಇನ್ ರಿಲೇಶನ್​ಶಿಪ್ ಸಂಬಂಧವನ್ನು ಸಾಮಾಜಿಕ ಮತ್ತು ನೈತಿಕ ನೆಲೆಗಟ್ಟಿನಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಈ ಜೋಡಿಯ ಪರವಾಗಿ ರಕ್ಷಣೆ ನೀಡುವಂತೆ ಆದೇಶ ಹೊರಡಿಸುವುದು ಸಾಧ್ಯವಿಲ್ಲ ಎಂದು ತಿಳಿಸಿದೆ.

ಗಂಗಾ ನದಿಯಲ್ಲಿ ತೇಲಿಬಂದ ಶವಗಳು; ಪಾಟ್ನಾ ಹೈಕೋರ್ಟ್ ಹೇಳಿದ್ದೇನು?
ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ಗಂಗಾ ತೀರದಲ್ಲಿ ಶವಗಳ ತೇಲಿ ಬಂದ ಬೆನ್ನಲ್ಲೇ ಸರ್ಕಾರದ ಸಂಸ್ಥೆಗಳು ಪ್ರಕಟಿಸಿದ ಕೊವಿಡ್ ಸಾವುಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದೆ ಎಂದ ಪಾಟ್ನಾ ಹೈಕೋರ್ಟ್ ಹೇಳಿದೆ. ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ ಎರಡು ದಿನಗಳಲ್ಲಿ ಹೊಸ ವರದಿಯನ್ನು ಸಲ್ಲಿಸುವಂತೆ ನ್ಯಾಯಾಧೀಶರು ಪ್ರಧಾನ ಆರೋಗ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ.

ಬಿಹಾರದ ಕೋವಿಡ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿರುವ ಹೈಕೋರ್ಟ್, ರಾಜ್ಯದ ಮುಖ್ಯ ಕಾರ್ಯದರ್ಶಿ ತ್ರಿಪುರಾರಿ ಶರಣ್ ಮತ್ತು ಪಾಟ್ನಾ ವಿಭಾಗೀಯ ಆಯುಕ್ತರು ಕೊವಿಡ್ ಸಾವುಗಳ ಬಗ್ಗೆ ಸಲ್ಲಿಸಿದ್ದ ಅಫಿಡವಿಟ್​ನ್ನು ಹರಿದು ಹಾಕಿದೆ. ಕಳೆದ ವಾರ ಬಕ್ಸಾರ್​ನಲ್ಲಿ 70ಕ್ಕಿಂತಲೂ ಹೆಚ್ಚು ಮೃತದೇಹಗಳು ನದಿಯಲ್ಲಿ ತೇಲಿ ಬಂದಿತ್ತು.

ಅಫಿಡವಿಟ್ ಸಲ್ಲಿಸುವ ವಿಧಾನದ ಬಗ್ಗೆ ನಾವು ಭಯಭೀತರಾಗಿದ್ದೇವೆ. ಸರ್ಕಾರದಿಂದ ಉತ್ತಮ ಪ್ರತಿಕ್ರಿಯೆ ಪಡೆಯಲು ನ್ಯಾಯಪೀಠ ಅರ್ಹವಾಗಿದೆ. ಇದನ್ನು ನಾವು ಪ್ರಶಂಸಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ನ್ಯಾಯಪೀಠ ಹೇಳಿದೆ.

ಮುಖ್ಯ ಕಾರ್ಯದರ್ಶಿ ಸಲ್ಲಿಸಿದ ಅಫಿಡವಿಟ್ ಪ್ರಕಾರ ಮಾರ್ಚ್ 1 ರಿಂದ ಬಕ್ಸಾರ್ ನಲ್ಲಿ ಕೇವಲ ಎಂಟು ಸಾವುಗಳು ಸಂಭವಿಸಿವೆ. ಆದರೆ ಮೇ 5 ಮತ್ತು ಮೇ 14 ರ ನಡುವೆ ಬಕ್ಸಾರ್‌ನ ಚಾರ್ಧಾಮ್ ಘಾಟ್‌ನಲ್ಲಿ 789 ಶವಸಂಸ್ಕಾರ ನಡೆದಿದೆ ಎಂದು ವಿಭಾಗೀಯ ಆಯುಕ್ತರ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೊವಿಡ್​ನಿಂದ ಎಷ್ಟು ಸಾವುಗಳು ಸಂಭವಿಸಿವೆ ಎಂದು ದಾಖಲೆಗಳು ಸ್ಪಷ್ಟಪಡಿಸಿಲ್ಲ ಎಂದು ಹೈಕೋರ್ಟ್ ಹೇಳಿದೆ. ಆ ವಿವರಗಳನ್ನು ಕೇಳಿದಾಗ, ವಯಸ್ಸಿನ ಪ್ರಕಾರ ಸಾವಿನ ಇತರ ಕಾರಣಗಳನ್ನು ವಿವರಿಸಬೇಕು ಎಂದು ಅದು ಹೇಳಿದೆ.

ಇದನ್ನೂ ಓದಿ: ರಾಜಕೀಯ ನಾಯಕರು ಕೊರೊನಾ ಔಷಧ ಸಂಗ್ರಹಿಸಿಡುವಂತಿಲ್ಲ, ಆರೋಗ್ಯ ಇಲಾಖೆಗೆ ಒಪ್ಪಿಸಬೇಕು: ದೆಹಲಿ ಹೈಕೋರ್ಟ್ ಸೂಚನೆ

ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಿ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

( Punjab and Haryana high Court says live in relationship is morally not acceptable )