ರಾಜಕೀಯ ನಾಯಕರು ಕೊರೊನಾ ಔಷಧ ಸಂಗ್ರಹಿಸಿಡುವಂತಿಲ್ಲ, ಆರೋಗ್ಯ ಇಲಾಖೆಗೆ ಒಪ್ಪಿಸಬೇಕು: ದೆಹಲಿ ಹೈಕೋರ್ಟ್ ಸೂಚನೆ

ರಸಾಯನಶಾಸ್ತ್ರಜ್ಞರು ರಾಜಕೀಯ ನಾಯಕರಿಗೆ ಇಷ್ಟು ದೊಡ್ಡ ಪ್ರಮಾಣದ ಔಷಧಿಗಳನ್ನು ಹೇಗೆ ಪೂರೈಸಿದರು ಎಂಬ ಬಗ್ಗೆ ಕಂಡುಹಿಡಿಯಲು ನ್ಯಾಯಾಲಯವು ಪೊಲೀಸರನ್ನು ಕೇಳಿದೆ.

ರಾಜಕೀಯ ನಾಯಕರು ಕೊರೊನಾ ಔಷಧ ಸಂಗ್ರಹಿಸಿಡುವಂತಿಲ್ಲ, ಆರೋಗ್ಯ ಇಲಾಖೆಗೆ ಒಪ್ಪಿಸಬೇಕು: ದೆಹಲಿ ಹೈಕೋರ್ಟ್ ಸೂಚನೆ
ದೆಹಲಿ ಹೈಕೋರ್ಟ್
Follow us
TV9 Web
| Updated By: ganapathi bhat

Updated on:Aug 21, 2021 | 10:17 AM

ದೆಹಲಿ: ರಾಜಕೀಯ ನಾಯಕರು ಕೊವಿಡ್ -19 ಔಷಧಿಗಳನ್ನು ಸಂಗ್ರಹಿಸಿದ್ದಾರೆ ಎಂಬ ಆರೋಪದ ಬಗ್ಗೆ ಕಠಿಣ ತನಿಖೆ ನಡೆಸಬೇಕು ಎಂದು ದೆಹಲಿ ಹೈಕೋರ್ಟ್ ಸೋಮವಾರ ರಾಷ್ಟ್ರ ರಾಜಧಾನಿಯ ಪೊಲೀಸರಿಗೆ ತಿಳಿಸಿದೆ. ಹಾಗೆ ಔಷಧಿಗಳನ್ನು ಸಂಗ್ರಹಿಸಿಟ್ಟ ವ್ಯಕ್ತಿಗಳು ತಮ್ಮೊಂದಿಗೆ ಲಭ್ಯವಿರುವ ಔಷಧಿಯನ್ನು ರಾಜ್ಯ ಆರೋಗ್ಯ ಇಲಾಖೆಗೆ ಒಪ್ಪಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಕೆಲವು ರಾಜಕೀಯ ಮುಖಂಡರು ಔಷಧಿಗಳನ್ನು ಉಚಿತವಾಗಿ ನೀಡುವ ಜಾಹೀರಾತು ನೀಡುತ್ತಿದ್ದಾರೆ, ಅವರು ಅದನ್ನು ಎಲ್ಲಿಂದ ಪಡೆಯುತ್ತಿದ್ದಾರೆ? ಉಳಿದಂತೆ ಔಷಧ ಪೂರೈಕೆಯಲ್ಲಿ ಕೊರತೆಯಾದ ಬಗ್ಗೆ ವರದಿಗಳಿವೆ. ಅಂಥಾದ್ದರಲ್ಲಿ ಕೆಲ ರಾಜಕಾರಣಿಗಳು ಔಷಧ ಸಂಗ್ರಹಿಸಲು ಮತ್ತು ವಿತರಿಸಲು ಪರವಾನಗಿ ಹೊಂದಿದ್ದಾರೆಯೇ? ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ಜಸ್ಮೀತ್ ಸಿಂಗ್ ಅವರ ವಿಭಾಗೀಯ ಪೀಠ ಕೇಳಿದೆ.

ಈ ಔಷಧಿಗಳನ್ನು ಸಾರ್ವಜನಿಕ ಹಿತಕ್ಕಾಗಿ ನೀಡಲಾಗುತ್ತಿದೆ ಮತ್ತು ರಾಜಕೀಯ ಲಾಭಕ್ಕಾಗಿ ಅಲ್ಲ ಎಂದು ಅವರು ತಿಳಿಸಿರುವುದರಿಂದ, ನಾಯಕರು ತಮ್ಮ ದಾಸ್ತಾನುಗಳನ್ನು ದೆಹಲಿ ಸರ್ಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶಕರಿಗೆ ಒಪ್ಪಿಸಬೇಕು. ಇದರಿಂದ ಅದನ್ನು ಅಗತ್ಯವಿರುವವರಿಗೆ ವಿತರಿಸಬಹುದು ಎಂದು ಹೈಕೋರ್ಟ್ ಹೇಳಿದೆ.

ರಸಾಯನಶಾಸ್ತ್ರಜ್ಞರು ರಾಜಕೀಯ ನಾಯಕರಿಗೆ ಇಷ್ಟು ದೊಡ್ಡ ಪ್ರಮಾಣದ ಔಷಧಿಗಳನ್ನು ಹೇಗೆ ಪೂರೈಸಿದರು ಎಂಬ ಬಗ್ಗೆ ಕಂಡುಹಿಡಿಯಲು ನ್ಯಾಯಾಲಯವು ಪೊಲೀಸರನ್ನು ಕೇಳಿದೆ.

ನ್ಯಾಯಾಲಯದ ಪ್ರಶ್ನೆಗಳಿಗೆ ಸ್ಪಂದಿಸಲು ಸಮಯ ಕೋರಿ ಡಿಸಿಪಿ ರಾಜೇಶ್ ಡಿಯೋ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕಾರಣಿಗಳು ಕೊವಿಡ್ -19 ಔಷಧಿಗಳನ್ನು ಅಪಾರ ಪ್ರಮಾಣದಲ್ಲಿ ಸಂಗ್ರಹಿಸಲು ಮತ್ತು ವಿತರಿಸಲು ಸಮರ್ಥರಾಗಿದ್ದಾರೆ ಎಂಬ ಆರೋಪದ ಮೇಲೆ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿತು.

ಯೂತ್​ ಕಾಂಗ್ರೆಸ್​ ಬಿ.ವಿ.ಶ್ರೀನಿವಾಸ್​, ಬಿಜೆಪಿ ಎಂಪಿ ಗೌತಮ್​ ಗಂಭೀರ್ ಮತ್ತಿತರಿಗೆ ಕ್ಲೀನ್​ಚಿಟ್​ ಕೊಟ್ಟ ದೆಹಲಿ ಪೊಲೀಸರ ವರದಿ ತೃಪ್ತಿ ತಂದಿಲ್ಲ ಎಂದು ದೆಹಲಿ ಹೈಕೋರ್ಟ್​ ತಿಳಿಸಿದೆ. ಶ್ರೀನಿವಾಸ್​, ಗೌತಮ್​ ಗಂಭೀರ್ ಸೇರಿ ಹಲವು ರಾಜಕಾರಣಿಗಳು ದೆಹಲಿಯಲ್ಲಿ ಮೆಡಿಕಲ್​ ಮಾಫಿಯಾ ನಡೆಸುತ್ತಿದ್ದಾರೆ. ಆಕ್ಸಿಜನ್​, ಕೊವಿಡ್​ 19 ಔಷಧ ಮತ್ತಿತರ ವಸ್ತುಗಳನ್ನು ಬ್ಲ್ಯಾಕ್​ ಮಾರ್ಕೆಟ್​ನಲ್ಲಿ ಮಾರಾಟ ಮಾಡುವ ದಂಧೆ ನಡೆಸುತ್ತಿದ್ದು, ಈ ಮೂಲಕ ಹಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಡಾ. ದೀಪಕ್​ ಎಂಬುವರು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ನನಗೆ ಕೊರೊನಾ ಸೋಂಕು ತಗುಲಿಲ್ಲ, ಏಕೆಂದರೆ ನಾನು ನಿತ್ಯ ಗೋಮೂತ್ರ ಸೇವಿಸುತ್ತೇನೆ: ಬಿಜೆಪಿ ಸಂಸದೆ ಪ್ರಗ್ಯಾಸಿಂಗ್ ಠಾಕೂರ್

ಡಿಸೆಂಬರ್ ಅಂತ್ಯದೊಳಗೆ ದೇಶದ ಎಲ್ಲರಿಗೂ ಲಸಿಕೆ; ಕ್ಯಾಲೆಂಡರ್ ಆಫ್ ಇವೆಂಟ್ಸ್ ಸಿದ್ಧಪಡಿಸುತ್ತಿರುವ ಕೇಂದ್ರ

Published On - 8:18 pm, Mon, 17 May 21