Narada Sting Case: ಸುವೇಂದು ಅಧಿಕಾರಿಯೂ ಲಂಚ ಸ್ವೀಕರಿಸಿದ್ದರು, ಅವರನ್ನೇಕೆ ಬಂಧಿಸಿಲ್ಲ; ಪತ್ರಕರ್ತ ಮ್ಯಾಥ್ಯೂ ಸ್ಯಾಮುಯೆಲ್ ಪ್ರಶ್ನೆ

Mathew Samuel: ನಾನೇ ಸುವೇಂದು ಅಧಿಕಾರಿಯವರ ಕಚೇರಿಗೆ ಹೋಗಿ ಅವರಿಗೆ ಹಣ ನೀಡಿದ್ದೆ. ಅವರ ಹೆಸರು ಪಟ್ಟಿಯಲ್ಲಿಲ್ಲ. ಏನಾಯಿತು? ವಿಧಿವಿಜ್ಞಾನ ಪರೀಕ್ಷೆ ನಡೆಸಿದಾಗ ಅವರು ತಪ್ಪಿತಸ್ಥ ಎಂದು ಸಾಬೀತಾಗಿತ್ತು. ಸಿಬಿಐ ನನ್ನಿಂದಲೂ ಹೇಳಿಕೆ ತೆಗೆದುಕೊಂಡಿದೆ.

Narada Sting Case: ಸುವೇಂದು ಅಧಿಕಾರಿಯೂ ಲಂಚ ಸ್ವೀಕರಿಸಿದ್ದರು, ಅವರನ್ನೇಕೆ ಬಂಧಿಸಿಲ್ಲ; ಪತ್ರಕರ್ತ ಮ್ಯಾಥ್ಯೂ ಸ್ಯಾಮುಯೆಲ್ ಪ್ರಶ್ನೆ
ಪತ್ರಕರ್ತ ಮ್ಯಾಥ್ಯೂ ಸ್ಯಾಮುಯೆಲ್
Follow us
|

Updated on:May 17, 2021 | 7:34 PM

ನವದೆಹಲಿ: ಹಿರಿಯ ಪತ್ರಕರ್ತ ಮತ್ತು 2016 ರ ನಾರದ ಟೇಪ್ಸ್ ಪ್ರಕರಣದ ದೂರುದಾರ ಮ್ಯಾಥ್ಯೂ ಸ್ಯಾಮುಯೆಲ್ ಅವರು ತೃಣಮೂಲದ ಸುಬ್ರತಾ ಮುಖರ್ಜಿ ಮತ್ತು ಫಿರ್ಹಾದ್ ಹಕೀಮ್‌ರಂತಹ ಕೆಲವು ರಾಜಕಾರಣಿಗಳನ್ನು ಸಿಬಿಐ ಅವರು ನಡೆಸಿದ ಕುಟುಕು ಕಾರ್ಯಾಚರಣೆಯ ಆಧಾರದ ಮೇಲೆ ಬಂಧಿಸಿರುವುದಕ್ಕೆ ಇಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಸುವೇಂದು ಅಧಿಕಾರಿಯಂತಹ ಬಿಜೆಪಿ ನಾಯಕರ ವಿರುದ್ಧ ಅದೇ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಮ್ಯಾಥ್ಯೂ ಪ್ರಶ್ನಿಸಿದ್ದಾರೆ.

ಇದು ಸಂತೋಷದ ದಿನ..ಹಲವಾರು ವರ್ಷಗಳೇ ಹಿಡಿಯಿತು. ಕುಟುಕು ಕಾರ್ಯಾಚರಣೆ ವಿಡಿಯೊಗಳನ್ನು 2016 ರಲ್ಲಿ ಬಿಡುಗಡೆ ಮಾಡಲಾಗಿತ್ತು. ರಾಜಕಾರಣಿಗಳನ್ನು ಸಿಬಿಐಗೆ ಮುಟ್ಟಲಾಗಲಿಲ್ಲ. ಮೂರು ವರ್ಷಗಳ ಹಿಂದೆ ಚಾರ್ಜ್‌ಶೀಟ್ ಸಿದ್ಧವಾಗಿತ್ತು ಎಂದು ತನಿಖಾ ಪತ್ರಕರ್ತ ಸ್ಯಾಮುಯೆಲ್ ಮತ್ತು ನಾರದ ನ್ಯೂಸ್ ಸಂಸ್ಥಾಪಕ ವಿಡಿಯೊ ಸಂದೇಶವೊಂದರಲ್ಲಿ ಹೇಳಿದ್ದಾರೆ.

2016 ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ, ನಾರದಾ ನ್ಯೂಸ್ ವಿವಿಧ ತೃಣಮೂಲ ನಾಯಕರು ಕೆಲವು ಕಾರ್ಯಗಳನ್ನು ಮಾಡಿಕೊಡುವುದಕ್ಕಾಗಿ ಹಣವನ್ನು ಸ್ವೀಕರಿಸುವ ವಿಡಿಯೊ ರೆಕಾರ್ಡಿಂಗ್‌ಗಳನ್ನು ಪ್ರಕಟಿಸಿತ್ತು. ಈ ಧ್ವನಿಮುದ್ರಣಗಳು ನಾರದ ಟೇಪ್ಸ್ ಎಂದೇ ಹೆಸರು ಪಡೆದಿದೆ. ಈ ಪ್ರಕರಣದಲ್ಲಿ ಸುಬ್ರತಾ ಮುಖರ್ಜಿ, ಫಿರ್ಹಾದ್ ಹಕೀಮ್, ಮದನ್ ಮಿತ್ರಾ ಮತ್ತು ಸೋವನ್ ಚಟರ್ಜಿ ಅವರನ್ನು ಸಿಬಿಐ ಇಂದು ಬಂಧಿಸಿದೆ.

ಮುಖರ್ಜಿ ಮತ್ತು ಹಕೀಮ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೊಸದಾಗಿ ರಚನೆಯಾದ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಗಳಾಗಿದ್ದಾರೆ. ಮಿತ್ರಾ ಅವರು ಟಿಎಂಸಿ ಪಕ್ಷದ ಶಾಸಕರಾಗಿದ್ದಾರೆ. ಚಟರ್ಜಿ ಮಾಜಿ ತೃಣಮೂಲ ಶಾಸಕರಾಗಿದ್ದಾರೆ.

ಆದಾಗ್ಯೂ, ನಾರದ ಟೇಪ್ಸ್ ಬಹಿರಂಗಪಡಿಸಿದ ಇತರ ಕೆಲವು ದೊಡ್ಡ ಹೆಸರುಗಳಲ್ಲಿ ಎಂ.ಎಸ್. ಬ್ಯಾನರ್ಜಿಯ ಮಾಜಿ ಆಪ್ತ ಸಹಾಯಕರಾದ ಮುಕುಲ್ ರಾಯ್ ಮತ್ತು ಸುವೇಂದು ಅಧಿಕಾರಿ ಸೇರಿದ್ದಾರೆ. ಇವರಿಬ್ಬರೂ ಬಿಜೆಪಿಗೆ ಸೇರಿದ ನಂತರ ಮಮತಾ ವಿರುದ್ಧ ತಿರುಗಿಬಿದ್ದರು. ಅಂದ ಹಾಗೆ ಇಲ್ಲಿಯವರೆಗೆ ಅವರ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಸ್ಯಾಮುಯೆಲ್ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ನಾನೇ ಸುವೇಂದು ಅಧಿಕಾರಿಯವರ ಕಚೇರಿಗೆ ಹೋಗಿ ಅವರಿಗೆ ಹಣ ನೀಡಿದ್ದೆ. ಅವರ ಹೆಸರು ಪಟ್ಟಿಯಲ್ಲಿಲ್ಲ. ಏನಾಯಿತು? ವಿಧಿವಿಜ್ಞಾನ ಪರೀಕ್ಷೆ ನಡೆಸಿದಾಗ ಅವರು ತಪ್ಪಿತಸ್ಥ ಎಂದು ಸಾಬೀತಾಗಿತ್ತು. ಸಿಬಿಐ ನನ್ನಿಂದಲೂ ಹೇಳಿಕೆ ತೆಗೆದುಕೊಂಡಿದೆ. ನನ್ನಿಂದ ಹಣವನ್ನು ಸ್ವೀಕರಿಸಿದ್ದೇನೆ ಎಂದು ಸುವೇಂದು ಅಧಿಕಾರ ಒಪ್ಪಿಕೊಂಡಿದ್ದಾರೆ ಎಂದು ನಾನು ತಿಳಿದುಕೊಂಡಿದ್ದೇನೆ ಎಂದಿದ್ದಾರೆ ಸ್ಯಾಮುಯೆಲ್.

ಸುವೇಂದು ಅಧಿಕಾರಿ ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳಲು ಏಜೆನ್ಸಿ ಅಧಿಕಾರಿಗಳಿಂದ ಅನುಮತಿಗಾಗಿ ಕಾಯುತ್ತಿದೆ ಎಂದು ಸಿಬಿಐ ಮೂಲಗಳು ಎನ್‌ಡಿಟಿವಿಗೆ ತಿಳಿಸಿರುವುದಾಗಿ ಪ್ರಸ್ತುತ ಮಾಧ್ಯಮ ವರದಿ ಮಾಡಿದೆ. ಅವರು ಕೆಳಮನೆಯ ಸದಸ್ಯರಾಗಿದ್ದರಿಂದ ಏಜೆನ್ಸಿ 2019 ರ ಏಪ್ರಿಲ್ 6 ರಂದು ಲೋಕಸಭಾ ಸ್ಪೀಕರ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿತ್ತು.

ಅನುಮತಿ ದೊರೆತ ನಂತರ ಕಾನೂನು ತನ್ನದೇ ಆದ ರೀತಿಯಲ್ಲಿ ಮುಂದುವರಿಯಲಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ ಈ ವಿಷಯದ ಬಗ್ಗೆ ಏಜೆನ್ಸಿ ರಿಮೈಂಡರ್ ಸಹ ಕಳುಹಿಸಿದೆ. ಏತನ್ಮಧ್ಯೆ, ಟೇಪ್‌ಗಳಲ್ಲಿ ಕಂಡುಬಂದಿರುವುದು ಸ್ವಲ್ಪವಷ್ಟೇ. ಇದುವರೆಗಿನ ತನಿಖೆ ನ್ಯಾಯಯುತವಾಗಿಲ್ಲದಿರಬಹುದು. ತನಿಖೆ ಏಕಪಕ್ಷೀಯವಾಗಿರಬಾರದು ಎಂದು ಸ್ಯಾಮುಯೆಲ್ ಹೇಳಿದ್ದಾರೆ.

ಇದನ್ನೂ ಓದಿ: Narada Sting Case: ಪಶ್ಚಿಮ ಬಂಗಾಳದಲ್ಲಿ ಸಿಬಿಐಯಿಂದ ಟಿಎಂಸಿ ನಾಯಕ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಮದನ್ ಮಿತ್ರಾ ಬಂಧನ

ಟಿಎಂಸಿ ನಾಯಕರ ಬಂಧನದ ಬೆನ್ನಲ್ಲೇ ಸಿಬಿಐ ಕಚೇರಿಯೆದುರು ಕಲ್ಲುತೂರಾಟ ನಡೆಸುತ್ತಿರುವ ಕಾರ್ಯಕರ್ತರು; ದೀದಿ ವಿರುದ್ಧ ದೂರು ದಾಖಲು

Published On - 7:08 pm, Mon, 17 May 21

ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
Nithya Bhavishya: ನವರಾತ್ರಿಯ ಐದನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಐದನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ
ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?