ಟಿಎಂಸಿ ನಾಯಕರ ಬಂಧನದ ಬೆನ್ನಲ್ಲೇ ಸಿಬಿಐ ಕಚೇರಿಯೆದುರು ಕಲ್ಲುತೂರಾಟ ನಡೆಸುತ್ತಿರುವ ಕಾರ್ಯಕರ್ತರು; ದೀದಿ ವಿರುದ್ಧ ದೂರು ದಾಖಲು

ಟಿಎಂಸಿ ನಾಯಕರ ವಿರುದ್ಧ ಸಿಬಿಐ ಹಲವು ಪ್ರಮುಖ ದಾಖಲೆಗಳನ್ನು ಸಂಗ್ರಹಿಸಿದೆ. ಅವರನ್ನು ಇನ್ನಷ್ಟು ವಿಚಾರಣೆ ಮಾಡುವ ಅಗತ್ಯವಿದ್ದು, 14ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಬೇಕು ಎಂದು ಸಿಬಿಐ ಪರ ವಕೀಲರು ಮನವಿ ಮಾಡಿದ್ದಾರೆ.

ಟಿಎಂಸಿ ನಾಯಕರ ಬಂಧನದ ಬೆನ್ನಲ್ಲೇ ಸಿಬಿಐ ಕಚೇರಿಯೆದುರು ಕಲ್ಲುತೂರಾಟ ನಡೆಸುತ್ತಿರುವ ಕಾರ್ಯಕರ್ತರು; ದೀದಿ ವಿರುದ್ಧ ದೂರು ದಾಖಲು
ಸಿಬಿಐ ಕಚೇರಿ ಹೊರಗೆ ಸೇರಿರುವ ಟಿಎಂಸಿ ಕಾರ್ಯಕರ್ತರು
Follow us
Lakshmi Hegde
|

Updated on:May 17, 2021 | 6:50 PM

ನಾರದಾ ಸ್ಟಿಂಗ್ ಆಪರೇಶನ್ ಪ್ರಕರಣದಡಿ ಸಿಬಿಐ ಇಂದು ಟಿಎಂಸಿಯ ಪ್ರಮುಖ ನಾಯಕ, ಸಚಿವರಾದ ಫಿರ್ಹಾದ್​ ಹಕೀಮ್​, ಸುಬ್ರತಾ ಮುಖರ್ಜಿ, ಶಾಸಕ ಮದನ್​ ಮಿತ್ರಾ, ಕೋಲ್ಕತ್ತ ಮಾಜಿ ಮೇಯರ್​ ಸೋವನ್​ ಚಟರ್ಜಿ ಅವರನ್ನು ಬಂಧಿಸಿದೆ. ಇವರೆಲ್ಲರ ಬಂಧನವಾಗಿ ಒಂದೇ ತಾಸಿನೊಳಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಬಿಐ ಕಚೇರಿಗೆ ಭೇಟಿ ನೀಡಿ, ತಮ್ಮನ್ನೂ ಬಂಧಿಸುವಂತೆ ಸವಾಲು ಹಾಕಿದ್ದಾರೆ. ಮಮತಾ ಬ್ಯಾನರ್ಜಿ ಸುಮಾರು 6 ತಾಸು ಸಿಬಿಐ ಕಚೇರಿಯಲ್ಲೇ ಇದ್ದರು. ಈ ನಾರದ ಸ್ಟಿಂಗ್​ ಆಪರೇಶನ್​ಗೆ ಸಂಬಂಧಪಟ್ಟಂತೆ ಟಿಎಂಸಿ ನಾಯಕರ ವಿರುದ್ಧ ಸಿಬಿಐ ತನಿಖೆ ನಡೆಸಲು ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್​ ಧಂಕರ್​ ಅನುಮತಿ ನೀಡಿದ್ದರು.

ಟಿಎಂಸಿ ನಾಯಕರ ವಿರುದ್ಧ ಸಿಬಿಐ ಹಲವು ಪ್ರಮುಖ ದಾಖಲೆಗಳನ್ನು ಸಂಗ್ರಹಿಸಿದೆ. ಅವರನ್ನು ಇನ್ನಷ್ಟು ವಿಚಾರಣೆ ಮಾಡುವ ಅಗತ್ಯವಿದ್ದು, 14ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಬೇಕು ಎಂದು ಸಿಬಿಐ ಪರ ವಕೀಲರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ. ಇನ್ನು ಟಿಎಂಸಿ ನಾಯಕರ ಬಂಧನವಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಸಿಬಿಐ ಕಚೇರಿಯತ್ತ ಕಲ್ಲುತೂರಾಟ ಶುರು ಮಾಡಿದ್ದಾರೆ. ರಾಜ್ಯಪಾಲ ಜಗದೀಪ್​ ಧಂಕರ್​ ಅವರ ನಿವಾಸ ರಾಜಭವನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರನ್ನು ನಿಯಂತ್ರಿಸಲು ರಕ್ಷಣಾ ಪಡೆ ಸಿಬ್ಬಂದಿ ನಿಯೋಜನೆಯಾಗಿದೆ.

ಈ ಮಧ್ಯೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಎಂಪಿ ದಿಲೀಪ್​ ಘೋಷ್​ ಪೊಲೀಸರಿಗೆ ದೂರು ನೀಡಿದ್ದಾರೆ. ರಾಜ್ಯದಲ್ಲಿ ಪದೇಪದೆ ಹಿಂಸಾಚಾರ ನಡೆಯಲು ಮಮತಾ ಬ್ಯಾನರ್ಜಿಯವರೇ ಕಾರಣ. ಅವರು ತಮ್ಮ ಪಕ್ಷದ ನಾಯಕರನ್ನು ಪ್ರಚೋದಿಸುತ್ತಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Narada Sting Case: ಪಶ್ಚಿಮ ಬಂಗಾಳದಲ್ಲಿ ಸಿಬಿಐಯಿಂದ ಟಿಎಂಸಿ ನಾಯಕ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಮದನ್ ಮಿತ್ರಾ ಬಂಧನ

Published On - 6:49 pm, Mon, 17 May 21