AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಶೀಲ್ಡ್ ಲಸಿಕೆ ತೆಗೆದುಕೊಂಡವರಲ್ಲಿ ಕೆಲವೇ ಕೆಲವರಲ್ಲಿ ರಕ್ತ ಸ್ರಾವ, ರಕ್ತಹೆಪ್ಪುಗಟ್ಟುವಿಕೆಯಂತ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿದೆ: ಕೇಂದ್ರ ಸಚಿವಾಲಯ

Covishield: ಕೊವಿಡ್ -19 ವ್ಯಾಕ್ಸಿನೇಷನ್ ಡ್ರೈವ್ ಅನ್ನು ಜನವರಿ 16, 2021 ರಂದು ಪ್ರಾರಂಭಿಸಿದಾಗಿನಿಂದ, ದೇಶದ 753 ಜಿಲ್ಲೆಗಳಲ್ಲಿ 684 ರಿಂದ ಕೋ-ವಿನ್ ಪ್ಲಾಟ್‌ಫಾರ್ಮ್ ಮೂಲಕ ಕನಿಷ್ಠ 23,000 ಪ್ರತಿಕೂಲ ಘಟನೆಗಳು ವರದಿಯಾಗಿವೆ.

ಕೊವಿಶೀಲ್ಡ್ ಲಸಿಕೆ ತೆಗೆದುಕೊಂಡವರಲ್ಲಿ ಕೆಲವೇ ಕೆಲವರಲ್ಲಿ ರಕ್ತ ಸ್ರಾವ, ರಕ್ತಹೆಪ್ಪುಗಟ್ಟುವಿಕೆಯಂತ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿದೆ: ಕೇಂದ್ರ ಸಚಿವಾಲಯ
ಕೊವಿಶೀಲ್ಡ್ ವ್ಯಾಕ್ಸಿನ್
ರಶ್ಮಿ ಕಲ್ಲಕಟ್ಟ
|

Updated on:May 17, 2021 | 6:21 PM

Share

ಕೊವಿಡ್ -19 ವಿರುದ್ಧ ನೀಡಲಾದ ಕೊವಿಶೀಲ್ಡ್ ಲಸಿಕೆಯ ಪ್ರತಿ ಹತ್ತು ಲಕ್ಷ ಡೋಸ್‌ ಪೈಕಿ 0.61 ಡೋಸ್ ನಲ್ಲಿ ಹೆಪ್ಪುಗಟ್ಟುವಿಕೆ ಮತ್ತು ರಕ್ತಸ್ರಾವದ ಘಟನೆಗಳು ಭಾರತದಲ್ಲಿ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. ರೋಗನಿರೋಧಕ (AEFI) ಸಮಿತಿಯ ನಂತರ ರಾಷ್ಟ್ರೀಯ ಪ್ರತಿಕೂಲ ಘಟನೆಗಳು ಸಲ್ಲಿಸಿದ ವರದಿಯನ್ನು ಉಲ್ಲೇಖಿಸಿ ಕೇಂದ್ರ ಆರೋಗ್ಯ ಸಚಿವಾಲಯ ಈ ರೀತಿ ಹೇಳಿದೆ.

ಎಇಎಫ್‌ಐ ಸಮಿತಿಯು 498 ಗಂಭೀರ ಮತ್ತು ತೀವ್ರವಾದ ಘಟನೆಗಳ ಆಳವಾದ ಪ್ರಕರಣದ ಪರಿಶೀಲನೆಯನ್ನು ಪೂರ್ಣಗೊಳಿಸಿದೆ. ಅದರಲ್ಲಿ 26 ಪ್ರಕರಣಗಳು ಸಂಭಾವ್ಯ ಥ್ರಂಬೋಎಂಬೊಲಿಕ್ ಎಂದು ವರದಿಯಾಗಿದೆ (ರಕ್ತನಾಳದಲ್ಲಿ ಹೆಪ್ಪುಗಟ್ಟುವಿಕೆಯಿಂದಾಗಿ ಒಡೆಯಬಹುದು ) ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ 10 ಲಕ್ಷ ಡೋಸ್ ಗಳಲ್ಲಿ 0.61 ಪ್ರಕರಣಗಳು ಈ ರೀತಿ ವರದಿ ಆಗಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ.

ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸ್ಥಳೀಯವಾಗಿ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾದ ಕೊವಿಡ್ -19 ಲಸಿಕೆಯನ್ನು ಕೋವಿಶೀಲ್ಡ್ ಎಂಬ ಬ್ರಾಂಡ್ ಹೆಸರಿನಲ್ಲಿ ತಯಾರಿಸುತ್ತದೆ, ಇದು ಪ್ರಸ್ತುತ ರಾಷ್ಟ್ರೀಯ ಕೊವಿಡ್ -19 ರೋಗನಿರೋಧಕ ಕಾರ್ಯಕ್ರಮದಡಿಯಲ್ಲಿ ಬಳಸುತ್ತಿರುವ ಎರಡು ಲಸಿಕೆಗಳಲ್ಲಿ ಒಂದಾಗಿದೆ. ಇನ್ನೊಂದು ಕೊವಿಡ್ -19 ಲಸಿಕೆ ಕೋವಾಕ್ಸಿನ್. ಇದನ್ನು ಭಾರತ್ ಬಯೋಟೆಕ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅಭಿವೃದ್ಧಿಪಡಿಸಿದೆ.

ವಿಶೇಷವಾಗಿ ಭಾರತದಲ್ಲಿ ಕೋವಿಶೀಲ್ಡ್ ಹೆಸರಲ್ಲಿ ತಯಾರಾಗುವ ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ಲಸಿಕೆ ಬಗ್ಗೆ ಮಾರ್ಚ್ 11, 2021 ರಂದು ವ್ಯಾಕ್ಸಿನೇಷನ್ ನಂತರದ ‘ಎಂಬಾಲಿಕ್ ಮತ್ತು ಥ್ರಂಬೋಟಿಕ್ ಪ್ರಕರಣಗಳ’ ಕುರಿತು ಕೆಲವು ದೇಶಗಳಲ್ಲಿ ಎಚ್ಚರಿಕೆಗಳನ್ನು ನೀಡಲಾಯಿತು.

ಜಾಗತಿಕ ಕಳವಳ ವ್ಯಕ್ತವಾದಾಗ ಭಾರತದಲ್ಲಿ ಪ್ರತಿಕೂಲ ಘಟನೆಗಳ (AE) ಆಳವಾದ ವಿಶ್ಲೇಷಣೆ ನಡೆಸಲು ಕೇಂದ್ರವು ನಿರ್ಧರಿಸಿತು.

ಭಾರತದಲ್ಲಿ ಕೊವಿಡ್ -19 ವ್ಯಾಕ್ಸಿನೇಷನ್ ನಂತರ ರಕ್ತಸ್ರಾವ ಮತ್ತು ಹೆಪ್ಪುಗಟ್ಟುವಿಕೆ ಪ್ರಕರಣಗಳು ಕಡಿಮೆ ಮತ್ತು ದೇಶದಲ್ಲಿ ಈ ಪರಿಸ್ಥಿತಿಗಳ ರೋಗನಿರ್ಣಯದ ನಿರೀಕ್ಷೆಗೆ ಅನುಗುಣವಾಗಿರುತ್ತವೆ ಎಂದು ರಾಷ್ಟ್ರೀಯ ಎಇಎಫ್ಐ (ರೋಗನಿರೋಧಕ ನಂತರದ ಪ್ರತಿಕೂಲ ಘಟನೆ) ಸಮಿತಿಯು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ರಾಷ್ಟ್ರೀಯ ಎಇಎಫ್‌ಐ ಸಮಿತಿ 2021 ರ ಏಪ್ರಿಲ್ 3 ರ ಹೊತ್ತಿಗೆ ಕನಿಷ್ಠ 7.5 ಕೋಟಿ (75,435,381) ಲಸಿಕೆ ಡೋಸ್ ನೀಡಲಾಗಿದೆ (ಕೋವಿಶೀಲ್ಡ್ – 68,650,819; ಕೊವಾಕ್ಸಿನ್ – 6,784,562). ಈ ಪೈಕಿ 65,944,106 ಮೊದಲ ಡೋಸ್ ಮತ್ತು 9,491,275 ಅನ್ನು ಎರಡನೇ ಡೋಸ್ ಆಗಿ ನೀಡಲಾಗಿದೆ.

ಕೊವಿಡ್ -19 ವ್ಯಾಕ್ಸಿನೇಷನ್ ಡ್ರೈವ್ ಅನ್ನು ಜನವರಿ 16, 2021 ರಂದು ಪ್ರಾರಂಭಿಸಿದಾಗಿನಿಂದ, ದೇಶದ 753 ಜಿಲ್ಲೆಗಳಲ್ಲಿ 684 ರಿಂದ ಕೋ-ವಿನ್ ಪ್ಲಾಟ್‌ಫಾರ್ಮ್ ಮೂಲಕ ಕನಿಷ್ಠ 23,000 ಪ್ರತಿಕೂಲ ಘಟನೆಗಳು ವರದಿಯಾಗಿವೆ. ಇವುಗಳಲ್ಲಿ ವರದಿಯ ಪ್ರಕಾರ ಕೇವಲ 700 ಪ್ರಕರಣಗಳು- ಪ್ರತಿ ಹತ್ತು ಲಕ್ಷ ಡೋಸ್‌ಗೆ 9.3 ಪ್ರಕರಣಗಳ ದರದಲ್ಲಿ ಗಂಭೀರ ಮತ್ತು ತೀವ್ರ ಸ್ವರೂಪದಲ್ಲಿದೆ.

“ಭಾರತದಲ್ಲಿನ ಎಇಎಫ್‌ಐ ದತ್ತಾಂಶವು ಥ್ರಂಬೋಎಂಬೊಲಿಕ್ ಘಟನೆಗಳಿಗೆ ಬಹಳ ಕಡಿಮೆ ಆದರೆ ಖಚಿತವಾದ ಅಪಾಯವಿದೆ ಎಂದು ತೋರಿಸಿದೆ. ಭಾರತದಲ್ಲಿ ಈ ಘಟನೆಗಳ ವರದಿ ದರವು ಸುಮಾರು 0.61 / ದಶಲಕ್ಷ ಡೋಸ್ ಆಗಿದೆ. ಇದು ಬ್ರಿಟನ್ ನಿಯಂತ್ರಕ ವೈದ್ಯಕೀಯ ಮತ್ತು ಆರೋಗ್ಯ ನಿಯಂತ್ರಣ ಪ್ರಾಧಿಕಾರವು ವರದಿ ಮಾಡಿದ ಪ್ರಕರಣಗಳು ಪ್ರತಿ ದಶಲಕ್ಷಕ್ಕೆ 4 ಪ್ರಕರಣಗಳಿಗಿಂತ ತೀರಾ ಕಡಿಮೆ. ಜರ್ಮನಿ ಪ್ರತಿ ದಶಲಕ್ಷಕ್ಕೆ 10 ಘಟನೆಗಳನ್ನು ವರದಿ ಮಾಡಿದೆ ಎಂದು ಪ್ರಕಟಣೆಯಲ್ಲಿದೆ.

ಕೊವಿಡ್ -19 ವ್ಯಾಕ್ಸಿನೇಷನ್ ಡ್ರೈವ್ ಅನ್ನು ಜನವರಿ 16, 2021 ರಂದು ಪ್ರಾರಂಭಿಸಿದಾಗಿನಿಂದ ದೇಶದ 753 ಜಿಲ್ಲೆಗಳಲ್ಲಿ 684 ರಿಂದ ಕೋ-ವಿನ್ ಪ್ಲಾಟ್‌ಫಾರ್ಮ್ ಮೂಲಕ ಕನಿಷ್ಠ 23,000 ಪ್ರತಿಕೂಲ ಘಟನೆಗಳು ವರದಿಯಾಗಿವೆ. ಇವುಗಳಲ್ಲಿ ವರದಿಯ ಪ್ರಕಾರ ಕೇವಲ 700 ಪ್ರಕರಣಗಳು- ಪ್ರತಿ ಮಿಲಿಯನ್ ಡೋಸ್‌ಗೆ 9.3 ಪ್ರಕರಣಗಳ ದರದಲ್ಲಿ, ಗಂಭೀರ ಮತ್ತು ತೀವ್ರ ಸ್ವರೂಪದಲ್ಲಿದೆ ಎಂದು ವರದಿಯಾಗಿದೆ.

ಈ ಪಟ್ಟಿಯು ಲಸಿಕೆ ಸ್ವೀಕರಿಸುವವರ ಅಥವಾ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ರೋಗಲಕ್ಷಣ ಅಥವಾ ಆರೋಗ್ಯ ಸ್ಥಿತಿಯನ್ನು ಸಹ ಒಳಗೊಂಡಿದೆ. ಭಾರತದಲ್ಲಿ ಏಪ್ರಿಲ್ 27, 2021 ರಂತೆ ಕನಿಷ್ಠ 134 ಮಿಲಿಯನ್ (13.4 ಕೋಟಿ) ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ನೀಡಲಾಗಿದೆ.

ಆರೋಗ್ಯ ಸಚಿವಾಲಯವು ಎಲ್ಲಾ ಕೊವಿಡ್ -19 ಲಸಿಕೆಗಳ ಸುರಕ್ಷತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಅನುಮಾನಾಸ್ಪದ ಪ್ರತಿಕೂಲ ಘಟನೆಗಳ ವರದಿಯನ್ನು ಪರಿಶೀಲಿಸುತ್ತಿದೆ ಕೋವಿಡ್ -19 ಲಸಿಕೆ ಕೊವಿಶೀಲ್ಡ್ ಸೋಂಕುಗಳನ್ನು ತಡೆಗಟ್ಟಲು ಮತ್ತು ವಿಶ್ವದಾದ್ಯಂತ ಮತ್ತು ಭಾರತದಲ್ಲಿ ಕೋವಿಡ್ -19 ರ ಕಾರಣದಿಂದಾಗಿ ಸಾವುಗಳನ್ನು ಕಡಿಮೆ ಮಾಡಲು ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:  ಕೊವಿಶೀಲ್ಡ್ ಲಸಿಕೆ ಪಡೆದ ಬಳಿಕ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರವಹಿಸಿ; ಕೇಂದ್ರ ಆರೋಗ್ಯ ಇಲಾಖೆ ಸೂಚನೆ

Published On - 6:19 pm, Mon, 17 May 21

ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ
ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ
ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
BBK: ಕನ್ನಡಪರ ಹೋರಾಟಗಾರರಿಂದ 15 ಲಕ್ಷ ರೂ. ಡಿಮ್ಯಾಂಡ್; ಸಂಬರಗಿ ಆರೋಪ
BBK: ಕನ್ನಡಪರ ಹೋರಾಟಗಾರರಿಂದ 15 ಲಕ್ಷ ರೂ. ಡಿಮ್ಯಾಂಡ್; ಸಂಬರಗಿ ಆರೋಪ
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ