ವಕ್ಫ್ ವ್ಯಾಪ್ತಿಯಿಂದ ಬುಡಕಟ್ಟು ಜನಾಂಗದ ಭೂಮಿ ಹೊರಕ್ಕೆ, ಕೇಂದ್ರದ ನಿರ್ಧಾರ ಸ್ವಾಗತಿಸಿದ ವನವಾಸಿ ಕಲ್ಯಾಣ ಆಶ್ರಮ
ಕೇಂದ್ರ ಸರ್ಕಾರ ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆಯಲ್ಲಿ, ಬುಡಕಟ್ಟು ಜನಾಂಗದ ಭೂಮಿಯನ್ನು ವಕ್ಫ್ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಅಖಿಲ ಭಾರತ ವನವಾಸಿ ಕಲ್ಯಾಣ್ ಆಶ್ರಮ ಸ್ವಾಗತಿಸಿದೆ. ಬುಧವಾರ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಯಿತು. ತಡರಾತ್ರಿ ವಕ್ಫ್ ತಿದ್ದುಪಡಿ ಮಸೂದೆಯನ್ನು 288 ಮತಗಳಿಂದ ಅಂಗೀಕರಿಸಲಾಯಿತು.

ನವದೆಹಲಿ, ಏಪ್ರಿಲ್ 04: ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ(Waqf Amendment Bill)ಯನ್ನು ಮಂಡಿಸಿದ್ದು, ಎರಡೂ ಸದನಗಳಲ್ಲಿ ಅಂಗೀಕಾರ ದೊರೆತಿದೆ. ಕೇಂದ್ರ ಸರ್ಕಾರ ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆಯಲ್ಲಿ, ಬುಡಕಟ್ಟು ಜನಾಂಗದ ಭೂಮಿಯನ್ನು ವಕ್ಫ್ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಅಖಿಲ ಭಾರತ ವನವಾಸಿ ಕಲ್ಯಾಣ ಆಶ್ರಮ ಸ್ವಾಗತಿಸಿದೆ. ಬುಧವಾರ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಯಿತು. ತಡರಾತ್ರಿ ವಕ್ಫ್ ತಿದ್ದುಪಡಿ ಮಸೂದೆಯನ್ನು 288 ಮತಗಳಿಂದ ಅಂಗೀಕರಿಸಲಾಯಿತು.
ಅಖಿಲ ಭಾರತ ವನವಾಸಿ ಕಲ್ಯಾಣ ಆಶ್ರಮ(Akhil Bharatiya Vanvasi Kalyan Ashram)ವು ಹೇಳಿಕೆ ಬಿಡುಗಡೆ ಮಾಡಿದೆ. ಕೆಲವು ಸಮಯದ ಹಿಂದೆ, ವನವಾಸಿ ಕಲ್ಯಾಣ ಆಶ್ರಮವು ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಜೆಪಿಸಿ ಮುಂದೆ ತಮ್ಮ ಕಷ್ಟಗಳನ್ನು ಹೇಳಿಕೊಂಡಿತ್ತು.
ಸಂವಿಧಾನದ ಐದು ಮತ್ತು ಆರನೇ ಶೆಡ್ಯೂಲ್‌ಗಳಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ, ಸಂವಿಧಾನ ಮತ್ತು ಕಾನೂನನ್ನು ಉಲ್ಲಂಘಿಸಿ ಹೆಚ್ಚಿನ ಪ್ರಮಾಣದ ವಕ್ಫ್ ಭೂಮಿ ಮತ್ತು ಆಸ್ತಿಗಳನ್ನು ನೋಂದಾಯಿಸಲಾಗಿದೆ ಎಂದು ಹೇಳಲಾಗಿದೆ.
ಬುಡಕಟ್ಟು ಜನಾಂಗದ ಭೂಮಿ ವಕ್ಫ್ ವ್ಯಾಪ್ತಿಯಿಂದ ಹೊರಕ್ಕೆ ಜೆಪಿಸಿ ತನ್ನ ವರದಿಯಲ್ಲಿ ವಕ್ಫ್ ಮಸೂದೆಯಲ್ಲಿ ಬುಡಕಟ್ಟು ಭೂಮಿಯ ರಕ್ಷಣೆಗೆ ನಿಬಂಧನೆಗಳನ್ನು ಮಾಡಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಳೆದ 15 ದಿನಗಳಿಂದ ವನವಾಸಿ ಕಲ್ಯಾಣ್ ಆಶ್ರಮದ ನಿರಂತರ ಪ್ರಯತ್ನದ ಫಲವಾಗಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಬುಡಕಟ್ಟು ಜನಾಂಗದವರ ಭೂಮಿ ವಕ್ಫ್ ವ್ಯಾಪ್ತಿಯಿಂದ ಹೊರಗಿರುತ್ತದೆ ಎಂದು ಘೋಷಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಮತ್ತಷ್ಟು ಓದಿ: ಇದು ಐತಿಹಾಸಿಕ ಕ್ಷಣ, ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರದ ಕುರಿತು ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ
ಈ ಸುದ್ದಿ ದೇಶದ ಇಡೀ ಬುಡಕಟ್ಟು ಸಮುದಾಯದಲ್ಲಿ ಸಂತೋಷ ಹಾಗೂ ತೃಪ್ತಿಯ ಅಲೆಯನ್ನು ಸೃಷ್ಟಿಸಿದೆ ಎಂದು ಹೇಳಿಕೆ ತಿಳಿಸಿದೆ. ವನವಾಸಿ ಕಲ್ಯಾಣ ಆಶ್ರಮದ ರಾಷ್ಟ್ರೀಯ ಅಧ್ಯಕ್ಷ ಸತ್ಯೇಂದ್ರ ಸಿಂಗ್ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ ಮತ್ತು ಬುಡಕಟ್ಟು ಜನಾಂಗದವರ ಭೂಮಿಯನ್ನು ರಕ್ಷಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯಸಭೆಯಲ್ಲಿ ಮಸೂದೆಯ ಮೇಲಿನ ಚರ್ಚೆ ಪೂರ್ಣಗೊಂಡ ನಂತರ, ತಡರಾತ್ರಿ 2 ಗಂಟೆಯ ನಂತರ ಮತದಾನ ನಡೆಸಲಾಯಿತು. ಈ ಸಮಯದಲ್ಲಿ, ಆಡಳಿತ ಪಕ್ಷವು ಮಸೂದೆಯನ್ನು ಅಂಗೀಕರಿಸುವಲ್ಲಿ ಯಶಸ್ವಿಯಾಯಿತು. ವಕ್ಫ್ ತಿದ್ದುಪಡಿ ಮಸೂದೆಯ ಪರವಾಗಿ 128 ಮತಗಳು ಮತ್ತು ವಿರುದ್ಧವಾಗಿ 95 ಮತಗಳು ಚಲಾವಣೆಯಾದವು.
ಈ ರೀತಿಯಾಗಿ, 12 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ನಂತರ, ರಾಜ್ಯಸಭೆಯು ಬೆಳಗಿನ ಜಾವ 2.32 ಕ್ಕೆ ವಕ್ಫ್ ಮಸೂದೆಯನ್ನು ಅಂಗೀಕರಿಸಿತು. ರಾಜ್ಯಸಭೆಯಲ್ಲಿ ಮಸೂದೆಯ ಪರವಾಗಿ 288 ಮತಗಳು ಚಲಾವಣೆಗೊಂಡರೆ, ವಿರುದ್ಧವಾಗಿ 232 ಮತಗಳು ಚಲಾವಣೆಯಾದವು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:34 am, Fri, 4 April 25