ಮದುವೆ ಬೇಡವೆಂದು ವರನನ್ನು ಕೊಲ್ಲಲು ಸುಪಾರಿಕೊಟ್ಟ ವಧು
ಮದುವೆಯಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ವರನನ್ನು ಕೊಲ್ಲಲು ಸುಪಾರಿ ಕೊಟ್ಟಿರುವ ಘಟನೆ ಪುಣೆಯಲ್ಲಿ ನಡೆದಿದೆ. ಅಹಲ್ಯಾನಗರದ ಮಯೂರಿ ಸುನಿಲ್ ದಾಂಗ್ಡೆ ಎಂಬ ಆರೋಪಿ, ಮಹಿ ಜಲಗಾಂವ್‌ನ ಸಾಗರ್ ಜಯಸಿಂಗ್ ಕದಮ್ ಅವರನ್ನು ಮದುವೆಯಾಗಬೇಕಿತ್ತು. ಅವರ ನಿಶ್ಚಿತಾರ್ಥ ಮತ್ತು ವಿವಾಹಪೂರ್ವ ಫೋಟೋ ಶೂಟ್ ನಂತರ, ಮಯೂರಿ ಸಾಗರ್ ಅವರನ್ನು ಮದುವೆಯಾಗದಿರಲು ನಿರ್ಧರಿಸಿದ್ದಳು., ಹಾಗಾಗಿ ಆತನನ್ನು ಕೊಲ್ಲಲು ಸುಪಾರಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.

ಪುಣೆ, ಏಪ್ರಿಲ್ 04: ಮದುವೆ(Marriage) ತಪ್ಪಿಸಲು ಯುವತಿಯೊಬ್ಬಳು ವರನನ್ನು ಕೊಲ್ಲಲು ಸುಪಾರಿ ಕೊಟ್ಟಿರುವ ಘಟನೆ ಪುಣೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದು, ವಧು ಇನ್ನೂ ತಲೆಮರೆಸಿಕೊಂಡಿದ್ದಾಳೆ. ಅಹಲ್ಯಾನಗರದ ಮಯೂರಿ ಸುನಿಲ್ ದಾಂಗ್ಡೆ ಎಂಬ ಆರೋಪಿ, ಮಹಿ ಜಲಗಾಂವ್‌ನ ಸಾಗರ್ ಜಯಸಿಂಗ್ ಕದಮ್ ಅವರನ್ನು ಮದುವೆಯಾಗಬೇಕಿತ್ತು. ಅವರ ನಿಶ್ಚಿತಾರ್ಥ ಮತ್ತು ವಿವಾಹಪೂರ್ವ ಫೋಟೋ ಶೂಟ್ ನಂತರ, ಮಯೂರಿ ಸಾಗರ್ ಅವರನ್ನು ಮದುವೆಯಾಗದಿರಲು ನಿರ್ಧರಿಸಿದ್ದಳು.
ಹಾಗಾಗಿ ಆತನನ್ನು ಕೊಲ್ಲಲು ಸುಪಾರಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಮಯೂರಿ ಮತ್ತು ಆಕೆಯ ಸಹಚರ ಸಂದೀಪ್ ಗಾವ್ಡೆ ಸಾಗರ್‌ನನ್ನು ಕೊಲ್ಲಲು 1.50 ಲಕ್ಷ ರೂ.ಗಳನ್ನು ಸುಪಾರಿ ನೀಡಿದ್ದರು ಎಂದು ಆರೋಪಿಸಲಾಗಿದೆ. ಪೊಲೀಸರ ಪ್ರಕಾರ, ಮಾಹಿ ಜಲಗಾಂವ್‌ನ ಹೋಟೆಲ್‌ನಲ್ಲಿ ಅಡುಗೆಯವನಾಗಿ ಕೆಲಸ ಮಾಡುತ್ತಿರುವ ಸಾಗರ್ ಮೇಲೆ ಫೆಬ್ರವರಿ 27 ರಂದು ದೌಂಡ್ ತಾಲೂಕಿನ ಬಳಿ ಹಲ್ಲೆ ನಡೆಸಲಾಯಿತು.
ಹೋಟೆಲ್ ಬಳಿ ಆತನನ್ನು ಕ್ರೂರವಾಗಿ ಥಳಿಸಲಾಯಿತು. ಘಟನೆಯ ನಂತರ, ಯಾವತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲು ಮುರಿದು ತಲೆ ಮತ್ತು ಬೆನ್ನಿಗೆ ಗಾಯಗಳಾಗಿ ಸಾಗರ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಮತ್ತಷ್ಟು ಓದಿ: ಮಡಿಕೇರಿ: ಪತ್ನಿಯ ಕೊಲೆಗೆ ಜೈಲುಪಾಲಾಗಿದ್ದ ಪತಿಗೆ ಶಾಕ್, 5 ವರ್ಷದ ಬಳಿಕ ಪ್ರಿಯಕರನ ಜತೆ ರೆಡ್ಹ್ಯಾಂಡ್ ಆಗಿ ಸಿಕ್ಕ ಹೆಂಡತಿ!
ಪುಣೆ-ಸೋಲಾಪುರ ಹೆದ್ದಾರಿಯಲ್ಲಿ, ಐದು ಜನರು ಸಾಗರ್ ಮೇಲೆ ದಾಳಿ ಮಾಡಿದ್ದಾರೆ. ಪೊಲೀಸ್ ದೂರು ದಾಖಲಾಗಿದೆ, ತನಿಖೆಯಲ್ಲಿ ಆತನನ್ನು ಮದುವೆಯಾಗಬೇಕಿದ್ದವಳೇ ಕೊಲ್ಲಲು ಅವರನ್ನು ನೇಮಿಸಿಕೊಂಡಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಹಲ್ಯಾನಗರದ ನಿವಾಸಿಗಳಾದ ಆದಿತ್ಯ ಶಂಕರ ದಂಗಡೆ, ಸಂದೀಪ್ ದಾದಾ ಗಾವಡೆ, ಶಿವಾಜಿ ರಾಮದಾಸ್ ಜಾರೆ, ಸೂರಜ್ ದಿಗಂಬರ ಜಾಧವ್ ಮತ್ತು ಇಂದ್ರಭಾನು ಸಖರಾಮ್ ಕೋಲ್ಪೆ ಸೇರಿದಂತೆ ಐವರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಶಂಕಿತರು ತಮ್ಮ ಸಹಚರರೊಂದಿಗೆ ಅಪರಾಧ ಮಾಡಿರುವುದಾಗಿ ಒಪ್ಪಿಕೊಂಡರು. ಯಾವತ್ ಪೊಲೀಸರು ಐದು ಶಂಕಿತರನ್ನು ಬಂಧಿಸಿ ಅಪರಾಧಕ್ಕೆ ಬಳಸಲಾದ ಬಿಳಿ ವೆರ್ನಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 109, 61(2), ಮತ್ತು 126(2) ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ