AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಂಪುರಾನ್’ ಚಿತ್ರಕ್ಕೆ ಬಿಜೆಪಿ ವಿರೋಧ ಬೆನ್ನಲ್ಲೇ ನಿರ್ಮಾಪಕನ ಕಚೇರಿ ಮೇಲೆ ಇಡಿ ದಾಳಿ

‘ಎಲ್2: ಎಂಪುರಾನ್’ ಚಿತ್ರಕ್ಕೆ ಬಿಜೆಪಿ ವಿರೋಧದ ಮಾಡಿತ್ತು. ಈ ಬೆನ್ನಲ್ಲೆ ಚಿತ್ರದ ನಿರ್ಮಾಪಕ ಗೋಕುಲಂ ಗೋಪಾಲನ್ ಅವರ ಮನೆ ಮೇಲೆ ಇಡಿ ದಾಳಿ ನಡೆದಿದೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಚಿತ್ರದಲ್ಲಿನ ಹಿಂದೂ ವಿರೋಧಿ ದೃಶ್ಯಗಳ ಆರೋಪದಿಂದ 24 ಕಡೆಗಳಲ್ಲಿ ಸಿನಿಮಾಗೆ ಕತ್ತರಿ ಹಾಕಲಾಗಿತ್ತು.

‘ಎಂಪುರಾನ್’ ಚಿತ್ರಕ್ಕೆ ಬಿಜೆಪಿ ವಿರೋಧ ಬೆನ್ನಲ್ಲೇ ನಿರ್ಮಾಪಕನ ಕಚೇರಿ ಮೇಲೆ ಇಡಿ ದಾಳಿ
ಎಂಪುರಾನ್
ರಾಜೇಶ್ ದುಗ್ಗುಮನೆ
|

Updated on:Apr 04, 2025 | 12:59 PM

Share

‘ಎಲ್​ 2: ಎಂಪುರಾನ್’ (L2: Empuraan) ಸಿನಿಮಾ ಸದ್ಯ ಸಾಕಷ್ಟು ಸುದ್ದಿಯಲ್ಲಿದೆ. ಒಂದು ಕಡೆ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತದೆ. ಮತ್ತೊಂದು ಕಡೆ ‘ಎಂಪುರಾನ್ ಚಿತ್ರದಲ್ಲಿ ಹಿಂದೂ ವಿರೋಧಿ ದೃಶ್ಯಗಳು ಇದೆ ಎಂಬ ಆರೋಪ ವ್ಯಕ್ತವಾಗಿತ್ತು. ಈ ಕಾರಣಕ್ಕೆ ಬರೋಬ್ಬರಿ 24 ಕಡೆಗಳಲ್ಲಿ ಕತ್ತರಿ ಹಾಕಲಾಗಿತ್ತು. ಈ ಘಟನೆ ಬೆನ್ನಲ್ಲೇ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಗೋಕುಲಂ ಗೋಪಾಲನ್ ಅವರ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಚೆನ್ನೈ ಹಾಗೂ ಕೊಚ್ಚಿಯಲ್ಲಿರುವ ಗೋಪಾಲನ್ ಅವರ ಕಚೇರಿ ಮೇಲೆ ಈ ದಾಳಿ ನಡೆದಿದೆ. ಗೋಪಾಲನ್ ಅವರ ನೇತೃತ್ವದಲ್ಲಿ ಶ್ರೀ ಗೋಕುಲಂ ಚಿಟ್ಸ್ ಹಾಗೂ ಫೈನಾನ್ಸ್ ಪ್ರಮುಖ ಸಂಸ್ಥೆಗಳಾಗಿವೆ. ಇವರು ಆಸ್ಪತ್ರೆ, ಮಾಧ್ಯಮ, ಆರೋಗ್ಯ ಕ್ಷೇತ್ರ, ಶಿಕ್ಷಣ ಮತ್ತು ಲಾಜಿಸ್ಟಿಕ್ ಕ್ಷೇತ್ರಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ವಿದೇಶಿ ವಿನಿಯಮದಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂದು ಹೇಳಲಾಗಿದೆ.

‘ಎಲ್​ 2: ಎಂಪುರಾನ್’ ಚಿತ್ರವನ್ನು ಆ್ಯಂಟೋನಿ ಪೆರಂಬವೂರ್, ಸುಬಾಸ್ಕರನ್ ಅಲಿರಾಜಾ, ಗೋಕುಲಂ ಗೋಪಾಲನ್ ಒಟ್ಟಾಗಿ ನಿರ್ಮಾಣ ಮಾಡಿದ್ದರು. ಪೃಥ್ವಿರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಮೋಹನ್​ಲಾಲ್ ಹಾಗೂ ಪೃಥ್ವಿರಾಜ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಆರ್​ಎಸ್​ಎಸ್ ಸೇರಿದಂತೆ ಅನೇಕ ಬಲ ಪಂಥೀಯ ಸಂಘಟನೆಗಳು ಸಿನಿಮಾನ ವಿರೋಧಿಸಿದ್ದರು. ಈ ಬೆನ್ನಲ್ಲೇ ಇಡಿ ದಾಳಿ ನಡೆದಿದ್ದು ಸಹಜವಾಗಿಯೇ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ
Image
‘ಬಾಯ್ಸ್ vs ಗರ್ಲ್ಸ್’ ಶೋಗೆ ರಜತ್ ಹಾಜರ್; ವಿನಯ್ ಗೌಡ ಅಬ್ಸೆಂಟ್
Image
‘ಎಷ್ಟೇ ಎತ್ತರಕ್ಕೆ ಬೆಳೆದರೂ..’; ಯಶ್ ಸಹಾಯ ನೆನೆದ ಅಜಯ್ ರಾವ್
Image
‘ಬಜರಂಗಿ ಭಾಯಿಜಾನ್’ ಆಫರ್ ಮೊದಲು ಹೋಗಿದ್ದು ಆಮಿರ್ ಬಳಿ
Image
ಎಲ್2: ಎಂಪುರಾನ್: ಬಿಜೆಪಿ ವಿರೋಧಕ್ಕೆ ಮಣಿದ ಮೋಹನ್​ಲಾಲ್ 24 ಕಡೆ ಕತ್ತರಿ

ಇದನ್ನೂ ಓದಿ: ಎಲ್2: ಎಂಪುರಾನ್: ಬಿಜೆಪಿ ವಿರೋಧಕ್ಕೆ ಮಣಿದ ಮೋಹನ್​ಲಾಲ್ 24 ಕಡೆ ಕತ್ತರಿ

ವಿರೋಧಾತ್ಮಕ ದೃಶ್ಯ ಏನಿತ್ತು?

ಹಿಂದೂ ತೀವ್ರಗಾಮಿತನವನ್ನು ಟೀಕಿಸುವ ರೀತಿಯಲ್ಲಿ ಕೆಲವು ದೃಶ್ಯಗಳು ಚಿತ್ರದಲ್ಲಿ ಇವೆ ಎನ್ನಲಾಗಿದೆ. ಹಿಂದೂ ಒಬ್ಬನನ್ನು ಮುಸ್ಲಿಂ ವಿರೋಧಿಯಾಗಿ ತೋರಿಸಲಾಗಿದೆ. ಬಾಬಾ ಒಬ್ಬರು ಮುಸ್ಲಿಂ ಗರ್ಭಿಣಿಯನ್ನು ಕೊಲ್ಲುವ ದೃಶ್ಯವಿದೆ. ಈ ರೀತಿಯ ಅನೇಕ ದೃಶ್ಯಗಳು ಸಿನಿಮಾದಲ್ಲಿ ಇತ್ತು ಎನ್ನಲಾಗಿದೆ. ಹೀಗಾಗಿ, ‘ಎಂಪುರಾನ್’ ಸಿನಿಮಾ ಬಿಜೆಪಿಗೆ ಹಾಗೂ ಹಿಂದೂ ರಕ್ಷಕರಿಗೆ ವ್ಯತಿರಿಕ್ತವಾಗಿ ಮಾಡಲಾಗಿದೆ ಎಂಬ ಆರೋಪ ಎದುರಾಯಿತು. ಆ ಬಳಿಕ ಕ್ಷಮೆ ಕೇಳಿದ್ದ ತಂಡ, ದೃಶ್ಯಕ್ಕೆ ಕತ್ತರಿ ಹಾಕಲು ಒಪ್ಪಿತ್ತು. ಈ ರೀತಿಯ ದೃಶ್ಯಗಳನ್ನು ಕತ್ತರಿಸಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:59 pm, Fri, 4 April 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!