ಈ ವಾರ ಒಟಿಟಿಗೆ ಬಂದ ಸಿನಿಮಾಗಳು, ರಿಷಬ್ ಶೆಟ್ಟಿ ಸಿನಿಮಾ ಸಹ ಪಟ್ಟಿಯಲ್ಲಿದೆ
OTT Release: ಈ ವಾರವೂ ಕೆಲವು ಒಳ್ಳೆಯ ಸಿನಿಮಾಗಳು ಒಟಿಟಿಗೆ ಬಂದಿವೆ. ಜೊತೆಗೆ ಕೆಲವು ಫ್ಲಾಪ್ ಸಿನಿಮಾಗಳು ಸಹ ಈ ವಾರ ತೆರೆಗೆ ಬಂದಿವೆ. ಕೆಲವು ಹೊಸ ವೆಬ್ ಸರಣಿಗಳು ಸಹ ಈ ವಾರ ಬಿಡುಗಡೆ ಆಗುತ್ತಿವೆ. ಕನ್ನಡ ಸಿನಿಮಾಗಳು ಒಟಿಟಿಗೆ ಬರುವುದೇ ಕಡಿಮೆ ಆದರೆ ಈ ವಾರ ಕನ್ನಡ ಸಿನಿಮಾ ಒಂದು ಒಟಟಿಗೆ ಬರುತ್ತಿದೆ. ಅದೂ ಸಾಮಾನ್ಯ ಸಿನಿಮಾ ಅಲ್ಲ ಪ್ರಶಸ್ತಿ ವಿಜೇತ ಸಿನಿಮಾ.
Updated on: Apr 04, 2025 | 12:01 PM

ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ‘ಶಿವಮ್ಮ’ ಸಿನಿಮಾ ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಶಿವಮ್ಮ ಸಿನಿಮಾ ಭಿನ್ನಕತೆಯಳ್ಳ ಸಿನಿಮಾ ಆಗಿದ್ದು, ಕೆಲವು ಪ್ರಶಸ್ತಿಗಳನ್ನು ಸಹ ಬಾಚಿಕೊಂಡಿದೆ. ಹಳ್ಳಿಗಾಡಿನ ಹೆಂಗಸೊಬ್ಬರ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ನಟಿಸಿರುವವರು ತರಬೇತಿ ಪಡೆದ ನಟರಲ್ಲ, ಬದಲಿಗೆ ಹಳ್ಳಿಗರೇ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸನ್ ನೆಕ್ಸ್ಟ್ನಲ್ಲಿ ಇಂದಿನಿಂದ ವೀಕ್ಷಣೆಗೆ ಲಭ್ಯ ಇದೆ.

ಕನ್ನಡಿಗ ದೀಕ್ಷಿತ್ ಶೆಟ್ಟಿ, ನವದೀಪ್ ಕೋಮಲಿ ಪ್ರಸಾದ್ ನಟಿಸಿರುವ ಥ್ರಿಲ್ಲರ್ ಕತೆಯುಳ್ಳ ಸಿನಿಮಾ ‘ಟಚ್ ಮೀ ನಾಟ್’ ಜಿಯೋ ಹಾಟ್ಸ್ಟಾರ್ನಲ್ಲಿ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ದೀಕ್ಷಿತ್ ಶೆಟ್ಟಿಗೆ ವಿಶೇಷ ಶಕ್ತಿಗಳಿರುತ್ತವೆ. ಇದೊಂದು ಕ್ರೈಂ ಥ್ರಿಲ್ಲರ್ ಕತೆಯಾಗಿದ್ದು ಸಖತ್ ಆಕ್ಷನ್ ಜೊತೆಗೆ ಹಾಸ್ಯ ಮತ್ತು ಲವ್ ಸ್ಟೋರಿ ಸಹ ಇದೆ. ಸಿನಿಮಾದ ಟ್ರೈಲರ್ ಕುತೂಹಲ ಹುಟ್ಟಿಸುವಂತಿದೆ.

ಆರ್ ಮಾಧವನ್, ಸಿದ್ಧಾರ್ಥ್, ನಯನತಾರಾ ನಟಿಸಿರುವ ‘ಟೆಸ್ಟ್’ ಸಿನಿಮಾ ಏಪ್ರಿಲ್ ನಾಲ್ಕರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾ ಕ್ರಿಕೆಟ್, ಭ್ರಷ್ಟಾಚಾರ, ವಿಜ್ಞಾನದ ವಿಷಯಗಳನ್ನು ಒಳಗೊಂಡಿದೆ. ಇದರ ಜೊತೆಗೆ ಒಂದು ಕೌಟುಂಬಿಕ ಕತೆಯೂ ಸಿನಿಮಾದಲ್ಲಿದೆ. ಸಿದ್ಧಾರ್ಥ್ ಕ್ರಿಕೆಟ್ ಆಟಗಾರನಾಗಿ, ಮಾಧವನ್ ವಿಜ್ಞಾನಿಯಾಗಿ ನಟಿಸಿದ್ದಾರೆ.

ಸಮುದ್ರದಡದಲ್ಲಿ ನಡೆಯುವ ಅದ್ಭುತ ಥ್ರಿಲ್ಲರ್ ಕತೆ ಒಳಗೊಂಡಿರುವ ‘ಕಿಂಗ್ಸ್ಟನ್’ ಏಪ್ರಿಲ್ 4 ರಂದು ಜೀ 5ನಲ್ಲಿ ಬಿಡುಗಡೆ ಆಗಿದೆ. ಜಿವಿ ಪ್ರಕಾಶ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಹಾರರ್, ಥ್ರಿಲ್ಲರ್ ಜೊತೆಗೆ ಆಕ್ಷನ್ ಅನ್ನು ಒಳಗೊಂಡಿದೆ. ಸಮುದ್ರದಾಳದಲ್ಲಿರುವ ನಿಧಿ, ಅದಕ್ಕೆ ತಟ್ಟಿರುವ ಶಾಪ ಅದನ್ನೆಲ್ಲ ದಾಟಿ ನಿಧಿಯನ್ನು ಹುಡುಕಿ ಕೊರಟ ಕಡಲ ಮಕ್ಕಳ ಕತೆ ಈ ಸಿನಿಮಾದಲ್ಲಿದೆ.

ನಿಜ ಘಟನೆ ಆಧರಿಸಿದ ಸಿನಿಮಾ ‘ಕಾಫಿರ್’ ಜೀ5ನಲ್ಲಿ ಇದೇ ವಾರ ತೆರೆಗೆ ಬಂದಿದೆ. ಪಾಕಿಸ್ತಾನಿ ಮಹಿಳೆಯೊಬ್ಬಾಕೆ ತಪ್ಪಿ ಭಾರತದ ಬಾರ್ಡರ್ ದಾಟಿ ಬಂದು ಇಲ್ಲಿ ಸೆರೆ ಸಿಕ್ಕಿ ಬಿಡುತ್ತಾಳೆ. ಆ ನಂತರ ಬಹಳ ಕಠಿಣವಾದ ಕಾನೂನು ಹೋರಾಟವನ್ನು ಆ ಮಹಿಳೆ ಮಾಡಬೇಕಾಗುತ್ತದೆ. ಇದರ ಕತೆಯನ್ನು ಕಾಫಿರ್ ಒಳಗೊಂಡಿದ್ದು, ಸಿನಿಮಾದಲ್ಲಿ ದಿಯಾ ಮಿರ್ಜಾ ನಾಯಕಿಯಾಗಿ ನಟಿಸಿದ್ದಾರೆ.



















