‘ಬಜರಂಗಿ ಭಾಯಿಜಾನ್’ ಆಫರ್ ಮೊದಲು ಹೋಗಿದ್ದು ಆಮಿರ್ ಬಳಿ; ಕಥೆ ಇಷ್ಟವಾದರೂ ಸಲ್ಲುಗೆ ಕೊಟ್ಟ ನಟ
ಬಜರಂಗಿ ಭಾಯಿಜಾನ್ ಚಿತ್ರದ ಕಥೆ ಮೊದಲು ಆಮೀರ್ ಖಾನ್ ಬಳಿ ಬಂದಿತ್ತು. ಆದರೆ, ಅವರು ಕಥೆ ತಮಗೆ ಹೊಂದುವುದಿಲ್ಲ ಎಂದು ತಿರಸ್ಕರಿಸಿ, ಸಲ್ಮಾನ್ ಖಾನ್ ಗೆ ಸೂಚಿಸಿದರು. ಸಲ್ಮಾನ್ ಖಾನ್ ಈ ಕಥೆಯನ್ನು ಒಪ್ಪಿಕೊಂಡು ಬಜರಂಗಿ ಭಾಯಿಜಾನ್ ಚಿತ್ರವನ್ನು ಒಂದು ದೊಡ್ಡ ಯಶಸ್ಸು ಮಾಡಿದರು.

‘ಬಜರಂಗಿ ಭಾಯಿಜಾನ್’ ಸಿನಿಮಾ (Bajrangi Bhaijaan) ಬಾಲಿವುಡ್ ಚಿತ್ರರಂಗ ಕಂಡ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು. ಸಲ್ಮಾನ್ ಖಾನ್ (Salman Khan) ಅವರು ಬಜರಂಗಿ ಭಾಯಿಜಾನ್ ಆಗಿ ಎಲ್ಲರ ಗಮನ ಸೆಳೆದರು. ಚಿತ್ರದಲ್ಲಿ ಬರುವ ಮುನ್ನಿ ಪಾತ್ರವೂ ಎಲ್ಲರಿಗೂ ಇಷ್ಟ ಆಯಿತು. ಈ ಚಿತ್ರವನ್ನು ಸಲ್ಮಾನ್ ಖಾನ್, ಕನ್ನಡದ ರಾಕ್ಲೈನ್ ವೆಂಕಟೇಶ್ ಹಾಗೂ ಕಬೀರ್ ಖಾನ್ ನಿರ್ಮಾಣ ಮಾಡಿದ್ದರು. ಈ ಚಿತ್ರವನ್ನು ಕಬೀರ್ ಖಾನ್ ಅವರೇ ನಿರ್ದೇಶನ ಮಾಡಿದ್ದರು. ಈ ಚಿತ್ರದ ಮೊದಲ ಆಫರ್ ಹೋಗಿದ್ದು ಸಲ್ಮಾನ್ ಖಾನ್ ಬಳಿ ಅನ್ನೋದು ವಿಶೇಷ. ಈ ಬಗ್ಗೆ ಆಮಿರ್ ಇತ್ತೀಚೆಗೆ ಮಾತನಾಡಿದ್ದಾರೆ.
ಆಮಿರ್ ಖಾನ್ ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದವರು. ಅವರು ಕಥೆಯನ್ನು ಆಯ್ಕೆ ಮಾಡುವ ಮೊದಲು ಪಾತ್ರ ತಮಗೆ ಹೊಂದುತ್ತದೆಯೇ ಅಥವಾ ಇಲ್ಲವೇ ಎಂದು ನೋಡುತ್ತಾರೆ. ಹೊಂದುತ್ತಿಲ್ಲ ಎಂದರೆ ಯಾರಿಗೆ ಕಥೆ ಹೆಚ್ಚು ಸೂಕ್ತ ಆಗುತ್ತದೆಯೋ ಅವರಿಗೆ ನೀಡುತ್ತಾರೆ. ‘ಬಜರಂಗಿ ಭಾಯಿಜಾನ್’ ಕಥೆ ಬರೆದ ವಿಜಯೇಂದ್ರ ಪ್ರಸಾದ್ ಅವರು ಮೊದಲು ಆಮಿರ್ ಖಾನ್ ಬಳಿ ಬಂದಿದ್ದರು. ಆದರೆ, ಇದನ್ನು ಅವರು ಮಾಡಲು ಒಪ್ಪಿಲ್ಲ.
‘ಬಜರಂಗಿ ಭಾಯಿಜಾನ್ ಕಥೆ ನನಗೆ ಮೊದಲು ಬಂದಿತ್ತು. ಕಥೆ ಬರಹಗಾರ ವಿಜಯೇಂದ್ರ ಪ್ರಸಾದ್ ಅವರಿಗೆ ನಾನು ಮಾಡಲ್ಲ ಎಂದೆ. ಈ ಕಥೆ ನನಗಿಂತ ಸಲ್ಮಾನ್ ಖಾನ್ ಹೆಚ್ಚು ಹೊಂದುತ್ತದೆ ಎನಿಸಿತು. ಅವರ ಬಳಿ ಹೋಗುವಂತೆ ಹೇಳಿದೆ. ನನಗೆ ಸ್ಕ್ರಿಪ್ಟ್ ಇಷ್ಟ ಆಗಿತ್ತು. ಆದರೆ, ನನಗೆ ಹೊಂದುತ್ತಿರಲಿಲ್ಲ. ಅವರು ಕಬೀರ್ ಬಳಿ ಹೋದರು. ಕಬೀರ್ ಅವರು ಸಲ್ಮಾನ್ ಖಾನ್ ಬಳಿ ಹೋದರು. ಆ ಬಳಿಕ ಸಿನಿಮಾ ಆಯಿತು. ಸ್ಕ್ರಿಪ್ಟ್ ಓದಿದಾಗ ಅದು ನನ್ನ ಮೊದಲ ರಿಯಾಕ್ಷನ್ ಆಗಿತ್ತು’ ಎಂದಿದ್ದಾರೆ ಆಮಿರ್ ಖಾನ್.
ಇದನ್ನೂ ಓದಿ: ಒಂದಂಕಿ ತಲುಪಿದ ‘ಸಿಕಂದರ್’ ಕಲೆಕ್ಷನ್; ನನಗೆ ಬಾಲಿವುಡ್ ಬೆಂಬಲ ಬೇಕಿದೆ ಎಂದ ಸಲ್ಮಾನ್ ಖಾನ್
ಮೂರು ಖಾನ್ಗಳ ಪೈಕಿ ಶಾರುಖ್ ಖಾನ್ ಮಾತ್ರ ಹಿಟ್ ಸಿನಿಮಾಗಳನ್ನು ನೀಡುತ್ತಾ ಇದ್ದಾರೆ. ಆಮಿರ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರು ಸಾಲು ಸಾಲು ಸೋಲು ಕಾಣುತ್ತಾ ಇದ್ದಾರೆ. ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಚಿತ್ರ 100 ಕೋಟಿ ರೂಪಾಯಿ ಗಳಿಸಲು ಒದ್ದಾಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.