AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾಹದ ಬಳಿಕ ನಯನಾತಾರ ಜೊತೆ ಅಫೇರ್; ಪ್ರಭುದೇವ ಜೀವನವನ್ನೇ ಹಾಳು ಮಾಡಿತು ಆ ನಿರ್ಧಾರ  

ಪ್ರಭುದೇವ ಅವರ ಜೀವನದಲ್ಲಿ ನಡೆದ ಒಂದು ಘಟನೆ ಅವರ ಜೀವನವನ್ನೇ ಬದಲಾಯಿಸಿತು. 1995ರಲ್ಲಿ ರಮಾಲತಾ ಅವರನ್ನು ವಿವಾಹವಾದ ಪ್ರಭುದೇವ, ನಯನತಾರಾ ಜೊತೆಗಿನ ಸಂಬಂಧದಿಂದಾಗಿ ವಿಚ್ಛೇದನ ಪಡೆದರು. ಈ ವಿವಾದವು ನ್ಯಾಯಾಲಯದವರೆಗೂ ಹೋಯಿತು. ಈ ಘಟನೆಯು ಪ್ರಭುದೇವರ ವೈಯಕ್ತಿಕ ಜೀವನದ ಮೇಲೆ ಆಳವಾದ ಪರಿಣಾಮ ಬೀರಿತು.

ವಿವಾಹದ ಬಳಿಕ ನಯನಾತಾರ ಜೊತೆ ಅಫೇರ್; ಪ್ರಭುದೇವ ಜೀವನವನ್ನೇ ಹಾಳು ಮಾಡಿತು ಆ ನಿರ್ಧಾರ  
ನಯನತಾರಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Apr 03, 2025 | 7:51 AM

Share

ಪ್ರಭುದೇವ (Prabhudeva) ಅವರು ಭಾರತ ಕಂಡ ಶ್ರೇಷ್ಠ ಡ್ಯಾನ್ಸರ್. ಅವರು ಡ್ಯಾನ್ಸ್ ಕೊರಿಯೋಗ್ರಾಫಿ ಮಾಡಿದರು ಎಂದರೆ ಆ ಸ್ಟೆಪ್​ಗಳು ಹಿಟ್ ಆಗೋದು ಪಕ್ಕಾ. ಅವರು ಸಿನಿಮಾ ನಿರ್ದೇಶನದಲ್ಲೂ ತೊಡಗಿಕೊಂಡಿದ್ದಾರೆ. ಇಂದು (ಏಪ್ರಿಲ್ 3) ಪ್ರಭುದೇವ ಅವರ ಜನ್ಮದಿನ. ಈ ವೇಳೆ ಅವರ ಜೀವನದಲ್ಲಿ ನಡೆದ ಒಂದು ಘಟನೆಯನ್ನು ನೆನಪಿಸಿಕೊಳ್ಳಲೇಬೇಕು. ಅವರ ಜೀವನವೇ ಹಾಳು ಮಾಡಿತ್ತು ಆ ಘಟನೆ. ಅಷ್ಟಕ್ಕೂ ಏನು ಆ ಘಟನೆ? ಆ ಘಟನೆಯಿಂದ ಆಗಿದ್ದು ಏನು? ಆ ಬಗ್ಗೆ ಇಲ್ಲಿದೆ ವಿವರ.

ಪ್ರಭುದೇವ ಹಾಗೂ ರಮಾಲತಾ ಅವರನ್ನು ವಿವಾಹ ಆದರು. 1995ರಲ್ಲಿ ಈ ಮದುವೆ ನಡೆಯಿತು. 16 ವರ್ಷಗಳ ಕಾಲ ಇವರು ಸಂಬಂಧದಲ್ಲಿ ಇದ್ದರು. 2011ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ನಯನಾತಾರಾ ಹಾಗೂ ಪ್ರಭುದೇವ ಲವ್​ ಸ್ಟೋರಿಯೇ ಇದಕ್ಕೆ ಕಾರಣ. ಶಾಕಿಂಗ್ ವಿಚಾರ ಎಂದರೆ ಪ್ರಭುದೇವ ಅವರಿಗೆ  ರಮಾಲತಾ ಹಾಗೂ ನಯನತಾರಾ ಇಬ್ಬರೂ ಸಿಗಲಿಲ್ಲ.

ಪ್ರಭುದೇವ ಹಾಗೂ ನಯನತಾರಾ ಮಧ್ಯೆ ಸಂಬಂಧ ಇದೆ ಎನ್ನುವ ಗುಲ್ಲು ಹುಟ್ಟಿಕೊಂಡಿತು. ‘ವಿಲ್ಲು’ ಚಿತ್ರದ ಸಂದರ್ಭದಲ್ಲಿ ಈ ವಿಚಾರ ಹುಟ್ಟಿತು. 2010ರಲ್ಲಿ ಪ್ರಭುದೇವ ಈ ವಿಚಾರವನ್ನು ಅವರು ಒಪ್ಪಿಕೊಂಡರು. ನಯನಾತಾರಾ ಅವರನ್ನು ವಿವಾಹ ಆಗುವ ಬಯಕೆಯನ್ನು ಅವರು ವ್ಯಕ್ತಪಡಿಸಿದರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತು.

ಇದನ್ನೂ ಓದಿ
Image
‘ನನಗೆ ಬಾಲಿವುಡ್​ ಬೆಂಬಲ ಬೇಕಿದೆ’; ಸಿಕಂದರ್ ಸೋತ ಬಳಿಕ ಸಲ್ಲು ಮಾತು
Image
ಹೊಸ ಚಿತ್ರದ ಅಪ್​ಡೇಟ್ ಕೊಟ್ಟ ಸುದೀಪ್; ಕಿಚ್ಚನ ಕಟ್ಟು ಮಸ್ತಾದ ಬಾಡಿ ನೋಡಿ
Image
ಪಾತಾಳ ಕಾಣುತ್ತಿದೆ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಕಲೆಕ್ಷನ್
Image
ನಟನೆ ಮಾತ್ರವಲ್ಲ ಈ ವಿಶೇಷ ವಿದ್ಯೆ ಕಲಿತಿದ್ದಾರೆ ಅಜಯ್ ರಾವ್

ಆದರೆ, ಇದಕ್ಕೆ ರಮಾಲತಾ ಅವಕಾಶ ಕೊಡಲಿಲ್ಲ. ಕೋರ್ಟ್ ಮೆಟ್ಟಿಲೇರಿ ತಾವು ಪತಿಯನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ಮೂಲಕ ನಯನತಾರಾ ಹಾಗೂ ಪ್ರಭುದೇವ ಬೇರೆ ಆಗುವಂತೆ ಮಾಡಿದರು. ಆ ಬಳಿಕ 2011ರಲ್ಲಿ ರಮಾಲತಾ ಪ್ರಭುದೇವ ಅವರಿಂದ ಬೇರೆ ಆದರು.

ಪ್ರಭುದೇವ ಹೆಸರಲ್ಲಿ ನಯನಾತಾರಾ ಅವರು ಟ್ಯಾಟೂ ಹಾಕಿಸಿಕೊಂಡಿದ್ದರು. ಪ್ರಭುದೇವಗೋಸ್ಕರ ನಟನೆಯಿಂದ ದೂರ ಹೋಗಲು ಕೂಡ ನಿರ್ಧರಿಸಿದ್ದರು. ಆದರೆ, ಅದ್ಯಾವುದೂ ಆಗಿಲ್ಲ. ಈಗ ವಿಘ್ನೇಶ್ ಶಿವನ್ ಜೊತೆ ವಿವಾಹ ಆಗಿ ನಯನತಾರಾ ಹಾಯಾಗಿದ್ದಾರೆ. ಇವರಿಗೆ ಅವಳಿ ಮಕ್ಕಳಿದ್ದಾರೆ. ಇದನ್ನು ಬಾಡಿಗೆ ತಾಯ್ತನದ ಮೂಲಕ ಪಡೆಯಲಾಗಿದೆ.

ಇದನ್ನೂ ಓದಿ: ‘ಪ್ರಭುದೇವ ಜೊತೆಗಿನ ಪ್ರೀತಿಗಾಗಿ ಏನು ಮಾಡಲೂ ರೆಡಿ ಇದ್ದೆ’; ಮೌನ ಮುರಿದ ನಯನತಾರಾ

ಇನ್ನು ಪ್ರಭುದೇವ ಕೂಡ ಎರಡನೇ ವಿವಾಹ ಆಗಿದ್ದಾರೆ. 2020ರಲ್ಲಿ ಹಿಮಾನಿ ಸಿಂಗ್ ಅವರನ್ನು ವಿವಾಹ ಆದರು. ಇವರು ಲಿವ್​-ಇನ್ ರಿಲೇಶನ್​ಶಿಪ್​ನಲ್ಲಿದ್ದರು. 2023ರಲ್ಲಿ ಈ ದಂಪತಿಗೆ ಹೆಣ್ಣು ಮಗು ಜನಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!