AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾತಾಳ ಕಾಣುತ್ತಿದೆ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಕಲೆಕ್ಷನ್; ಮೂರು ದಿನದ ಗಳಿಕೆ ಇಷ್ಟೇನಾ?

Sikandar Box Office Collection: ಸಲ್ಮಾನ್ ಖಾನ್ ಅಭಿನಯದ 'ಸಿಕಂದರ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದೆ ಸೋಲು ಕಂಡಿದೆ. ಮೊದಲ ದಿನದ 26 ಕೋಟಿ ರೂಪಾಯಿ ಗಳಿಕೆ ನಂತರ, ಚಿತ್ರದ ಗಳಿಕೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಬುಕ್ ಮೈ ಶೋ ಕಳಪೆ ರೇಟಿಂಗ್ (6.3) ಮತ್ತು ಕೆಲವು ಚಿತ್ರಮಂದಿರಗಳಲ್ಲಿ ಬೇರೆ ಚಿತ್ರಗಳ ಪ್ರದರ್ಶನವು ಈ ಸೋಲಿಗೆ ಕಾರಣ ಎನ್ನಲಾಗಿದೆ.

ಪಾತಾಳ ಕಾಣುತ್ತಿದೆ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಕಲೆಕ್ಷನ್; ಮೂರು ದಿನದ ಗಳಿಕೆ ಇಷ್ಟೇನಾ?
ಸಲ್ಮಾನ್ ಖಾನ್
ರಾಜೇಶ್ ದುಗ್ಗುಮನೆ
|

Updated on:Apr 02, 2025 | 7:29 AM

Share

ಸಲ್ಮಾನ್ ಖಾನ್​ (Salman Khan) ಅವರಿಗೆ ಯಾಕೋ ಅದೃಷ್ಟ ಕೈ ಹಿಡಿಯುತ್ತಿಲ್ಲ. ಯಾವುದೇ ಸಿನಿಮಾ ಒಪ್ಪಿಕೊಂಡರೂ ಅದು ಯಶಸ್ಸು ಕಾಣುತ್ತಿಲ್ಲ. ಬಾಲಿವುಡ್ ಸಹವಾಸ ಬಿಟ್ಟು ದಕ್ಷಿಣದ ನಿರ್ದೇಶಕನ ಜೊತೆ ಸಿನಿಮಾ ಮಾಡಿದರೂ ಸಲ್ಮಾನ್​ಗೆ ಗೆಲುವು ಕೈ ಹಿಡಿದಿಲ್ಲ. ಸಾಲು ಸಾಲು ಸೋಲು ಕಾಣುವ ಈ ಸಮಯದಲ್ಲಿ ಸಲ್ಮಾನ್​ ‘ಸಿಕಂದರ್’ ಸಿನಿಮಾ ಮೂಲಕ ಗೆಲ್ಲುವ ಭರವಸೆ ಇಟ್ಟುಕೊಂಡಿದ್ದರು. ಆದರೆ, ಅದು ಕೂಡ ಸುಳ್ಳಾಗಿದೆ. ಈ ಚಿತ್ರ ಸೋಲುವ ಮುನ್ಸೂಚನೆ ದಟ್ಟವಾಗಿದೆ. ಅಚ್ಚರಿಯ ವಿಚಾರ ಎಂದರೆ ಈ ಚಿತ್ರದ ಒಂದು ದಿನದ ಗರಿಷ್ಠ ಗಳಿಕೆ ಕೇವಲ 29 ಕೋಟಿ ರೂಪಾಯಿ! ಮುಂದೆ ಯಾವ ದಿನವೂ ಇಷ್ಟು ದೊಡ್ಡ ಮಟ್ಟದ ಗಳಿಕೆ ಆಗುವುದು ಅನುಮಾನವೇ.

‘ಸಿಕಂದರ್’ ಸಿನಿಮಾ ಈದ್ ಪ್ರಯುಕ್ತ ಭಾನುವಾರ (ಮಾರ್ಚ್ 30) ರಿಲೀಸ್ ಆಯಿತು. ಆದರೆ, ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ವಿಫಲವಾಗಿದೆ. ಸಲ್ಮಾನ್ ಖಾನ್ ಸಿನಿಮಾ ಎಂದಾಗ ಮೊದಲ ದಿನ ಭರ್ಜರಿ ಓಪನಿಂಗ್ ಪಡೆಯೋದು ಕಾಮನ್. ಅದರಲ್ಲೂ ಭಾನುವಾರ ಸಿನಿಮಾ ರಿಲೀಸ್ ಆಗಿದೆ ಎಂದಾಗ ಕೇಳಬೇಕೆ? ಆದರೆ, ‘ಸಿಕಂದರ್’ ಚಿತ್ರ ಮೊದಲ ದಿನ ಕಲೆಕ್ಷನ್ ಮಾಡಿದ್ದು ಕೇವಲ 26 ಕೋಟಿ ರೂಪಾಯಿ ಮಾತ್ರ. ಎರಡನೇ ದಿನ ಈ ಚಿತ್ರ 29 ಕೋಟಿ ರೂಪಾಯಿ ಗಳಿಸಿದೆ.

ಮೂರನೇ ದಿನವಾದ ಮಂಗಳವಾರ (ಏಪ್ರಿಲ್ 1) ಈ ಚಿತ್ರ ಕೇವಲ 19.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಂದರೆ ಶೇ.32ರಷ್ಟು ಕುಸಿತ ಕಂಡಿದೆ. ಈ ಮೂಲಕ ಚಿತ್ರದ ಗಳಿಕೆ ನಿಧಾನವಾಗಿ ಪಾತಾಳ ಕಾಣುತ್ತಾ ಇದೆ. ಸದ್ಯ ‘ಸಿಕಂದರ್’ನ ಒಟ್ಟಾರೆ ಕಲೆಕ್ಷನ್ 74.5 ಕೋಟಿ ರೂಪಾಯಿ ಆಗಿದೆ. ಹೀಗೆ ಮುಂದುವರಿದರೆ ಹಾಕಿದ ಬಜೆಟ್ ಕೂಡ ಬರೋದು ಅನುಮಾನದಲ್ಲಿದೆ.

ಇದನ್ನೂ ಓದಿ: ಜನರಿಲ್ಲದೆ ಕ್ಯಾನ್ಸಲ್ ಆಯ್ತು ‘ಸಿಕಂದರ್’; ಸಲ್ಲು ಸಿನಿಮಾ ಬದಲಿಗೆ ಮೋಹನ್​ಲಾಲ್ ಚಿತ್ರ ಪ್ರದರ್ಶನ

‘ಸಿಕಂದರ್’ ಚಿತ್ರಕ್ಕೆ ಬುಕ್ ಮೈ ಶೋನಲ್ಲಿ ಕಳಪೆ ರೇಟಿಂಗ್ ಸಿಕ್ಕಿದೆ. ಸದ್ಯ ಈ ಸಿನಿಮಾ 14 ಕೋಟಿ ವೋಟ್ ಪಡೆದಿದ್ದು, ಕೇವಲ 6.3 ರೇಟಿಂಗ್ ಪಡೆದಿದೆ. ಇಷ್ಟು ಕಳಪೆ ರೇಟಿಂಗ್ ಪಡೆದರೆ ಸಿನಿಮಾ ಗೆಲ್ಲೋದು ಅನುಮಾನವೇ. ಇನ್ನು, ಹಲವು ಕಡೆಗಳಲ್ಲಿ ‘ಸಿಕಂದರ್’ ಸಿನಿಮಾ ಬದಲು ಬೇರೆ ಸಿನಿಮಾನ ಪ್ರಸಾರ ಮಾಡಲಾಗುತ್ತಿದೆ. ಇದು ಕೂಡ ಗಳಿಕೆ ತಗ್ಗಲು ಮುಖ್ಯ ಕಾರಣ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:29 am, Wed, 2 April 25

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?