AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದಂಕಿ ತಲುಪಿದ ‘ಸಿಕಂದರ್’ ಕಲೆಕ್ಷನ್; ನನಗೆ ಬಾಲಿವುಡ್​ ಬೆಂಬಲ ಬೇಕಿದೆ ಎಂದ ಸಲ್ಮಾನ್ ಖಾನ್

Sikandar Box Office Collection: ಸಲ್ಮಾನ್ ಖಾನ್ ಅವರ ‘ಸಿಕಂದರ್’ ಚಿತ್ರದ ನಿರೀಕ್ಷೆಗಿಂತ ಕಡಿಮೆ ಗಳಿಕೆಯಿಂದಾಗಿ ಬಾಲಿವುಡ್‌ನಿಂದ ಬೆಂಬಲದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಈ ಚಿತ್ರದ ಗಳಿಕೆ ನಿರಾಶಾದಾಯಕವಾಗಿದ್ದು, ಸಲ್ಮಾನ್ ಖಾನ್ ಅವರು ಯಾವಾಗಲೂ ಬೆಂಬಲವನ್ನು ಕೇಳದಿದ್ದರೂ, ಈ ಬಾರಿ ಅವರಿಗೂ ಬೆಂಬಲ ಅಗತ್ಯವಿದೆ ಎಂದು ಒಪ್ಪಿಕೊಂಡಿದ್ದಾರೆ.

ಒಂದಂಕಿ ತಲುಪಿದ ‘ಸಿಕಂದರ್’ ಕಲೆಕ್ಷನ್; ನನಗೆ ಬಾಲಿವುಡ್​ ಬೆಂಬಲ ಬೇಕಿದೆ ಎಂದ ಸಲ್ಮಾನ್ ಖಾನ್
ಸಲ್ಮಾನ್ ಖಾನ್
ರಾಜೇಶ್ ದುಗ್ಗುಮನೆ
|

Updated on:Apr 03, 2025 | 7:36 AM

Share

ಸಲ್ಮಾನ್ ಖಾನ್ (Salman Khan) ಅವರು ಇಷ್ಟು ವರ್ಷಗಳ ಕಾಲ ಯಾರ ಬೆಂಬಲವನ್ನೂ ಕೇಳಿದವರಲ್ಲ. ಅವರ ಸಿನಿಮಾಗಳ ಪ್ರಚಾರಕ್ಕೆ ಯಾವುದೇ ದೊಡ್ಡ ಸ್ಟಾರ್​ಗಳನ್ನು ಅವರು ಕರೆಸಿಲ್ಲ. ಏಕೆಂದರೆ ಸಲ್ಮಾನ್ ಅವರೇ ದೊಡ್ಡ ಸ್ಟಾರ್. ಅವರು ನಟಿಸಿದ್ದಾರೆ ಎಂಬುದು ತಿಳಿದರೆ ಸಾಕು ಜನರು ಸಿನಿಮಾ ವೀಕ್ಷಿಸುತ್ತಾರೆ ಎಂಬುದು ಅನೇಕರ ನಂಬಿಕೆ. ಆದರೆ, ಇತ್ತೀಚೆಗೆ ರಿಲೀಸ್ ಆದ ‘ಸಿಕಂದರ್’ ಸಿನಿಮಾ (Sikandar Movie) ಯಶಸ್ಸು ಕಾಣುವ ಸೂಚನೆ ಕಾಣುತ್ತಿಲ್ಲ. ಚಿತ್ರದ ಗಳಿಕೆ ತಗ್ಗುತ್ತಿದೆ. ಸಲ್ಮಾನ್ ಖಾನ್ ಸಿನಿಮಾ ಆದರೂ ನೂರು ಕೋಟಿ ರೂಪಾಯಿ  ಗಳಿಸಲು ಒದ್ದಾಡುತ್ತಿದೆ. ಈಗ ಸಲ್ಮಾನ್ ಖಾನ್ ಅವರು ತಮಗೆ ಬಾಲಿವುಡ್​ ಬೆಂಬಲದ ಅಗತ್ಯವಿದೆ ಎಂದಿದ್ದಾರೆ.

ಸಲ್ಮಾನ್ ಖಾನ್ ಅವರ ‘ಸಿಕಂದರ್’ ಸಿನಿಮಾ ಮಾರ್ಚ್​ 30ರಂದು ರಿಲೀಸ್ ಆಯಿತು. ಈ ಸಿನಿಮಾದ ಒಂದು ದಿದನದ ಗಳಿಕೆ 30 ಕೋಟಿ ರೂಪಾಯಿ ಮೇಲೆ ದಾಟಿಲ್ಲ. ದೊಡ್ಡ ಬಜೆಟ್ ಸಿನಿಮಾಗಳು ಮೊದಲ ದಿನ 50 ಕೋಟಿ ರೂಪಾಯಿ ಗಳಿಸೋದು ಸಾಮಾನ್ಯವಾಗಿದೆ. ಆದರೆ, ಸಲ್ಲು ಸಿನಿಮಾ ಬಳಿ ಅದು ಸಾಧ್ಯವಾಗುತ್ತಿಲ್ಲ.

ಮಾರ್ಚ್ 30ರಂದು ‘ಸಿಕಂದರ್’ ಸಿನಿಮಾ ರಿಲೀಸ್ ಆಯಿತು. ಎಆರ್​ ಮುರುಗದಾಸ್ ನಿರ್ದೇಶನದ ಚಿತ್ರಕ್ಕೆ ರಶ್ಮಿಕಾ ನಾಯಕಿ. ಈ ಚಿತ್ರ ಏಪ್ರಿಲ್ 2ರಂದು ಕೇವಲ 9.75 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಗಳಿಕೆ ಒಂದಂಕಿಗೆ ಇಳಿಕೆ ಆಗಿದೆ. ಚಿತ್ರದ ಒಟ್ಟಾರೆ ಗಳಿಕೆ 84.25 ಕೋಟಿ ರೂಪಾಯಿ ಆಗಿದೆ. ಸಲ್ಮಾನ್ ಖಾನ್​ಗೆ ಇರೋ ಮಾರುಕಟ್ಟೆಗೆ, ಚಿತ್ರದ ಬಜೆಟ್​ಗೆ ಹೋಲಿಕೆ ಮಾಡಿದರೆ ಈ ಗಳಿಕೆ ತುಂಬಾನೇ ಕಡಿಮೆಯೇ ಸರಿ.

ಇದನ್ನೂ ಓದಿ: ಕೊರಿಯನ್ ಹಾರ್ಟ್ ಮಾಡಲು ರಶ್ಮಿಕಾ ಒತ್ತಾಯ; ಮುಲಾಜಿಲ್ಲದೇ ನಿರಾಕರಿಸಿದ ಸಲ್ಮಾನ್

ಬಾಲಿವುಡ್ ಬೆಂಬಲ ಬೇಕು

‘ನನ್ನ ಚಿತ್ರಗಳಿಗೆ ಬೆಂಬಲ ಬೇಡ ಎಂದು ಅವರು ಅಂದುಕೊಂಡಿರಬಹುದು. ಆದರೆ, ನನಗೂ ಸೇರಿದಂತೆ ಎಲ್ಲರಿಗೂ ಬೆಂಬಲ ಬೇಕು’ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಸಲ್ಮಾನ್ ಖಾನ್ ಅವರು ಬೇರೆಯವರ ಚಿತ್ರಕ್ಕೆ ಬೆಂಬಲ ನೀಡುತ್ತಾರೆ. ಆದರೆ, ಅವರು ಸೂಪರ್​ ಸ್ಟಾರ್ ಆಗಿರುವುದರಿಂದ ಬೆಂಬಲ ಬೇಡ ಎಂದುಕೊಳ್ಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:35 am, Thu, 3 April 25

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Live: ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
Live: ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ ನೇರಪ್ರಸಾರ
ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ ನೇರಪ್ರಸಾರ
ನಾಗ ಚೌತಿ ಹಬ್ಬದ ದಿನವೇ ದೇವಾಲಯದಲ್ಲಿ ಪ್ರತ್ಯಕ್ಷವಾದ ಹಾವು
ನಾಗ ಚೌತಿ ಹಬ್ಬದ ದಿನವೇ ದೇವಾಲಯದಲ್ಲಿ ಪ್ರತ್ಯಕ್ಷವಾದ ಹಾವು
ಬೆಂಗಳೂರು: ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ
ಬೆಂಗಳೂರು: ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ
ಮೆಟ್ರೋಗೆ ಅನುದಾನ ಸಮರ: ತೇಜಸ್ವಿ ಸೂರ್ಯ ಆರೋಪಕ್ಕೆ ಕೃಷ್ಣ ಭೈರೇಗೌಡ ಕೌಂಟರ್​
ಮೆಟ್ರೋಗೆ ಅನುದಾನ ಸಮರ: ತೇಜಸ್ವಿ ಸೂರ್ಯ ಆರೋಪಕ್ಕೆ ಕೃಷ್ಣ ಭೈರೇಗೌಡ ಕೌಂಟರ್​
ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಗಿ ನೇರಪ್ರಸಾರ
ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಗಿ ನೇರಪ್ರಸಾರ
ಮೋದಿ ಸಂಚರಿಸುವಲ್ಲೆಲ್ಲ ಕೈ-ಕಮಲ ಕಾರ್ಯಕರ್ತರ ಫ್ಲೆಕ್ಸ್​ಗಳು ಝಗಮಗ!
ಮೋದಿ ಸಂಚರಿಸುವಲ್ಲೆಲ್ಲ ಕೈ-ಕಮಲ ಕಾರ್ಯಕರ್ತರ ಫ್ಲೆಕ್ಸ್​ಗಳು ಝಗಮಗ!
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ