ಕೊರಿಯನ್ ಹಾರ್ಟ್ ಮಾಡಲು ರಶ್ಮಿಕಾ ಒತ್ತಾಯ; ಮುಲಾಜಿಲ್ಲದೇ ನಿರಾಕರಿಸಿದ ಸಲ್ಮಾನ್
ರಶ್ಮಿಕಾ ಮಂದಣ್ಣ ಅವರು ಪಾಪರಾಜಿಗಳು ಕಂಡಾಗ ಕೊರಿಯನ್ ಹಾರ್ಟ್ ಮಾಡಿ ಪೋಸ್ ನೀಡುತ್ತಾರೆ. ಒಮ್ಮೆ ಸಲ್ಮಾನ್ ಖಾನ್ ಕೂಡ ಅದೇ ರೀತಿ ಮಾಡಿದ್ದರು. ಆದರೆ ಇನ್ನೊಮ್ಮೆ ಹಾಗೆ ಮಾಡಲು ಅವರು ಸಿದ್ಧರಿಲ್ಲ. ‘ಇದೆಲ್ಲ ನನಗೆ ಸೂಟ್ ಆಗಲ್ಲ’ ಎಂದು ಸಲ್ಮಾನ್ ಖಾನ್ ನೇರವಾಗಿ ಹೇಳಿದ್ದಾರೆ.

ನಟ ಸಲ್ಮಾನ್ ಖಾನ್ ಅವರು ‘ಸಿಕಂದರ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ನಟಿಸಿದ್ದಾರೆ. ಇಬ್ಬರ ಜೋಡಿಯ ಬಗ್ಗೆ ಪ್ರೇಕ್ಷಕರಿಂದ ಟೀಕೆ ವ್ಯಕ್ತವಾಗಿದೆ. ಸಲ್ಮಾನ್ ಖಾನ್ (Salman Khan) ಹಾಗೂ ರಶ್ಮಿಕಾ ಮಂದಣ್ಣ ಅವರ ನಡುವೆ 31 ವರ್ಷಗಳ ವಯಸ್ಸಿನ ಅಂತರ ಇದೆ. ಹಾಗಾಗಿ ಪ್ರೇಕ್ಷಕರಿಗೆ ಈ ಜೋಡಿ ಇಷ್ಟ ಆಗಿಲ್ಲ. ಇನ್ನು, ಮನಸ್ಥಿತಿಯಲ್ಲೂ ಸಾಕಷ್ಟು ವ್ಯತ್ಯಾಸ ಇದೆ. ಅದಕ್ಕೆ ಇಲ್ಲೊಂದು ಬೆಸ್ಟ್ ಉದಾಹರಣೆ ಇದೆ. ರಶ್ಮಿಕಾ ಮಂದಣ್ಣ ಜೊತೆ ಕೊರಿಯನ್ ಹಾರ್ಟ್ (Korean Heart) ಮಾಡಲು ಸಲ್ಮಾನ್ ಖಾನ್ ಅವರು ನಿರಾಕರಿಸಿದ್ದಾರೆ. ‘ನಾನು ಹೀಗೆಲ್ಲ ಮಾಡಲ್ಲ’ ಎಂದು ಅವರು ನಿಷ್ಠುರವಾಗಿಯೇ ಹೇಳಿದ್ದಾರೆ.
‘ಸಿಕಂದರ್’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್ ಖಾನ್ ಅವರು ಒಟ್ಟಿಗೆ ವೇದಿಕೆಯಲ್ಲಿ ಪೋಸ್ ನೀಡಿದರು. ಆ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಕೊರಿಯನ್ ಹಾರ್ಟ್ ಮಾಡಿ ಕ್ಯಾಮೆರಾಗೆ ಪೋಸ್ ನೀಡಿದರು. ಜೊತೆಯಲ್ಲಿ ಇದ್ದ ಸಲ್ಮಾನ್ ಖಾನ್ಗೂ ಅದೇ ರೀತಿ ಮಾಡುವಂತೆ ಅವರು ಹೇಳಿದರು. ಆಗ ಸಲ್ಮಾನ್ ಸಹ ಕೊರಿಯನ್ ಹಾರ್ಟ್ ಮಾಡಿ ಗಮನ ಸೆಳೆದರು. ಆದರೆ ಮತ್ತೆ ಅದೇ ರೀತಿ ಮಾಡಲು ಅವರು ನಿರಾಕರಿಸಿದ್ದಾರೆ.
ಸಂದರ್ಶನವೊಂದರಲ್ಲಿ ಸಲ್ಮಾನ್ ಖಾನ್ ಅವರು ಈ ವಿಚಾರ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಅವರು ಜೊತೆಯಾಗಿ ಸಂದರ್ಶನ ನೀಡಿದ್ದಾರೆ. ‘ನನಗೆ ಉತ್ತಮ ಫ್ರೆಂಡ್ ಸಿಕ್ಕಿದ್ದಾರೆ’ ಎಂದು ಸಲ್ಮಾನ್ ಖಾನ್ ಬಗ್ಗೆ ರಶ್ಮಿಕಾ ಹೇಳಿದರು. ‘ಅಲ್ಲದೇ ನೀವು ಸಲ್ಮಾನ್ ಖಾನ್ಗೆ ಕೊರಿಯನ್ ಹಾರ್ಟ್ ಮಾಡುವುದನ್ನು ಕೂಡ ಹೇಳಿಕೊಟ್ಟಿದ್ದೀರಿ’ ಎಂದು ಸಂದರ್ಶಕಿ ಹೇಳಿದರು. ಆಗ ಸಲ್ಮಾನ್ ಖಾನ್ ಅವರು ‘ಇನ್ಮುಂದೆ ನಾನು ಹಾಗೆ ಮಾಡುವುದಿಲ್ಲ’ ಎಂದರು.
View this post on Instagram
ತಮ್ಮ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದರು. ‘ಒಮ್ಮೆ ಮಾಡಿದ ಬಳಿಕ ನಾಲ್ಕು ಜನರು ನನಗೆ ಅದೇ ರೀತಿ ಮಾಡಲು ಹೇಳಿದರು. ಅದು ನನಗೆ ಸರಿ ಹೊಂದುವುದಿಲ್ಲ’ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಆಗ ಅವರನ್ನು ಒಪ್ಪಿಸಲು ರಶ್ಮಿಕಾ ಮಂದಣ್ಣ ಪ್ರಯತ್ನಿಸಿದರು. ‘ಕೊರಿಯನ್ ಹಾರ್ಟ್ ಮಾಡಿದರೆ ಮಕ್ಕಳು ನಿಮ್ಮನ್ನು ಇಷ್ಟಪಡುತ್ತಾರೆ. ನಿಮ್ಮ ಇನ್ನೊಂದು ವ್ಯಕ್ತಿತ್ವ ಕಾಣುತ್ತದೆ’ ಎಂದು ರಶ್ಮಿಕಾ ಹೇಳಿದರು. ಆದರೂ ಸಲ್ಮಾನ್ ಖಾನ್ ಅವರು ಒಪ್ಪಿಕೊಳ್ಳಲಿಲ್ಲ.
ಇದನ್ನೂ ಓದಿ: ಜನರಿಲ್ಲದೆ ಕ್ಯಾನ್ಸಲ್ ಆಯ್ತು ‘ಸಿಕಂದರ್’; ಸಲ್ಲು ಸಿನಿಮಾ ಬದಲಿಗೆ ಮೋಹನ್ಲಾಲ್ ಚಿತ್ರ ಪ್ರದರ್ಶನ
‘ಸಿಕಂದರ್’ ಸಿನಿಮಾಗೆ ಎ.ಆರ್. ಮುರುಗದಾಸ್ ಅವರು ನಿರ್ದೇಶನ ಮಾಡಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾಗೆ ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್ ಆಗಿಲ್ಲ. ಕಲಾವಿದರ ನಟನೆ ಕೂಡ ಚೆನ್ನಾಗಿಲ್ಲ ಎಂದು ವಿಮರ್ಶಕರು ತೆಗಳಿದ್ದಾರೆ. ರಶ್ಮಿಕಾ ಮಂದಣ್ಣ ಲಕ್ಕಿ ಹೀರೋಯಿನ್ ಎಂಬುದು ಈ ಬಾರಿ ನಿಜವಾಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








