‘ಪ್ರಭುದೇವ ಜೊತೆಗಿನ ಪ್ರೀತಿಗಾಗಿ ಏನು ಮಾಡಲೂ ರೆಡಿ ಇದ್ದೆ’; ಮೌನ ಮುರಿದ ನಯನತಾರಾ

ನಯನತಾರಾ ಅವರು ತಮ್ಮ ಹಿಂದಿನ ಸಂಬಂಧ ಮತ್ತು ವೃತ್ತಿಜೀವನದ ಬಗ್ಗೆ ತೆರೆದ ಮನಸ್ಸಿನಿಂದ ಮಾತನಾಡಿದ್ದಾರೆ. ಪ್ರಭುದೇವ ಅವರೊಂದಿಗಿನ ಸಂಬಂಧದ ಕಾರಣ ಸಿನಿಮಾಗಳಿಂದ ದೂರವಾಗಿದ್ದ ಬಗ್ಗೆ ಹಾಗೂ ಅದರಿಂದ ಪಡೆದ ಪಾಠಗಳ ಬಗ್ಗೆ ಅವರು ವಿವರಿಸಿದ್ದಾರೆ. ವಿಘ್ನೇಶ್ ಶಿವನ್ ಅವರನ್ನು ಮದುವೆಯಾದ ನಂತರ ಅವರ ಜೀವನದಲ್ಲಿ ಬಂದ ಬದಲಾವಣೆಗಳನ್ನು ಅವರು ಹಂಚಿಕೊಂಡಿದ್ದಾರೆ.

‘ಪ್ರಭುದೇವ ಜೊತೆಗಿನ ಪ್ರೀತಿಗಾಗಿ ಏನು ಮಾಡಲೂ ರೆಡಿ ಇದ್ದೆ’; ಮೌನ ಮುರಿದ ನಯನತಾರಾ
ಪ್ರಭುದೇವ-ನಯನತಾರಾ
Follow us
ರಾಜೇಶ್ ದುಗ್ಗುಮನೆ
|

Updated on: Dec 13, 2024 | 11:54 AM

ನಯನತಾರಾ ಅವರು ಲೇಡಿ ಸೂಪರ್​ಸ್ಟಾರ್’ ಎಂದೇ ಫೇಮಸ್ ಆದವರು. ದಕ್ಷಿಣ ಭಾರತದಲ್ಲಿ ಅನೇಕ ಪ್ರಬಲ ಮಹಿಳಾ ಪಾತ್ರಗಳನ್ನು ಅವರು ಮಾಡಿದ್ದರು. ಅವರು ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. 2011ರಲ್ಲಿ ನಡೆದ ಅವರ ಜೀವನದ ಲವ್ ಬ್ರೇಕಪ್ ದೊಡ್ಡ ಹೊಡೆತ ನೀಡಿತು. ಈಗ ವಿಘ್ನೇಶ್​ ಶಿವನ್ ಅವರ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಅವರು ಪ್ರಭುದೇವ ಅವರನ್ನು ಪ್ರೀತಿಸುತ್ತಿದ್ದ ಸಂದರ್ಭದಲ್ಲಿ ಕೆಲವು ಸಿನಿಮಾಗಳನ್ನು ಬಿಟ್ಟಿದ್ದರು. ಇದಕ್ಕೆ ಕಾರಣವನ್ನು ಅವರು ನೀಡಿದ್ದಾರೆ.

‘ದಿ ಹಾಲಿವುಡ್ ರಿಪೋರ್ಟರ್​’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಯನಾತಾರ, 2011ರಲ್ಲಿ ಏಕೆ ಸಿನಿಮಾಗಳನ್ನು ತ್ಯಜಿಸಿದೆ ಎಂಬುದನ್ನು ಹೇಳಿದ್ದಾರೆ. ‘ನನ್ನ ಜೀವನದಲ್ಲಿ ಪ್ರೀತಿ ಬೇಕು ಎಂದರೆ ನಾನು ಕಾಂಪ್ರಮೈಸ್ ಆಗಬೇಕು ಎಂದುಕೊಂಡಿದ್ದೆ. ನಾನು ಆಗ ಸಣ್ಣವಳಿದ್ದೆ’ ಎಂದಿದ್ದಾರೆ ನಯನತಾರಾ.

‘ನಮ್ಮ ಉದ್ಯಮದಲ್ಲಿ ನಾವು ಹಲವಾರು ವಿಭಿನ್ನ ಸಂಬಂಧಗಳನ್ನು ನೋಡಿರುತ್ತೇವೆ. ಅದರಲ್ಲಿ ಇದೂ ಒಂದು ನಾನು ಅದನ್ನು ಕೆಟ್ಟದ್ದು ಎಂದು ಹೇಳುತ್ತಿಲ್ಲ. ಆದರೆ ಎರಡನೇ ಮದುವೆ ರೀತಿಯ ಸಂಬಂಧಗಳನ್ನು ಇಂಡಸ್ಟ್ರಿಯವರು ಮೊದಲಿನಿಂದ ನೋಡುತ್ತಿದ್ದಾರೆ. ಹಾಗಾಗಿ ಆ ಸಮಯದಲ್ಲಿ ಅದು ಸರಿ ಎನಿಸಿತು’ ಎಂದಿದ್ದಾರೆ ನಯನತಾರಾ.

‘ನಿನ್ನ ಜೀವನದಲ್ಲಿ ಪ್ರೀತಿ ಬೇಕಾದರೆ ಎಲ್ಲೋ ರಾಜಿ ಮಾಡಿಕೊಳ್ಳಬೇಕು ಎಂದು ನನ್ನೊಳಗೆ ಯೋಚಿಸಿದೆ. ನಾವು ಎಲ್ಲವನ್ನೂ ನೀಡಬೇಕು ಅನಿಸುತ್ತಿತ್ತು. ನೀವು ಏನನ್ನಾದರೂ ಮಾಡುವುದು ನಿಮ್ಮ ಸಂಗಾತಿಗೆ ಇಷ್ಟವಾಗದಿದ್ದರೆ, ನೀವು ತ್ಯಾಗ ಮಾಡಬೇಕು. ಇದು ಆ ಸಮಯದಲ್ಲಿ ಪ್ರೀತಿಯ ಬಗ್ಗೆ ನನ್ನ ತಿಳುವಳಿಕೆಯಾಗಿತ್ತು’ ಎಂದಿದ್ದಾರೆ ನಯನತಾರಾ.

‘ಆ ನಿರ್ದಿಷ್ಟ ಸಂಬಂಧದಿಂದ ನಾನು ಸ್ಟ್ರಾಂಗ್ ಆಗಿದ್ದೇನೆ. ನಾನು ಎಷ್ಟು ಸಾಮರ್ಥ್ಯವನ್ನು ಹೊಂದಿದ್ದೇನೆ ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಗುತ್ತಾ ಇರಲಿಲ್ಲ. ಅದರ ನಂತರ, ನಾನು ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಾಗಿದ್ದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ:  ‘ಕರ್ಮ ಬಡ್ಡಿ ಸಮೇತ ಬರುತ್ತೆ’; ಧನುಷ್ ವಿಚ್ಛೇದನಕ್ಕೆ ಟಾಂಗ್ ಕೊಟ್ರಾ ನಯನತಾರಾ?

ಇವರ ಸಂಬಂಧಕ್ಕೆ ಪ್ರಭುದೇವ ಅವರ ಆ ಸಂದರ್ಭದಲ್ಲಿ ಪತ್ನಿ ಕಡೆಯಿಂದ ವಿರೋಧ ಬಂತು. ನಂತರ ನಯನಾತಾರಾ ಸಂಬಂಧದಿಂದ ದೂರ ಬಂದರು. ಧನುಷ್ ಅವರು ನಿರ್ಮಾಣ ಮಾಡಿದ, ‘ನಾನುಂ ರೌಡಿ ದಾನ್’ ಚಿತ್ರವನ್ನು ವಿಗ್ನೇಶ್ ಶಿವನ್ ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ನಯನತಾರಾ ನಾಯಕಿ. ಈ ಚಿತ್ರದ ಸೆಟ್​ನಲ್ಲಿ ನಯನತಾರಾ ಹಾಗೂ ವಿಗ್ನೇಶ್​ಗೆ ಪ್ರೀತಿ ಆಯಿತು. 2022ರಲ್ಲಿ ಅಧಿಕೃತವಾಗಿ ಮದುವೆ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಧಾರವಾಡ ಸಭೆಯಲ್ಲಿ ಭಾಗಿಯಾಗಿದ್ದ ಬೆಲ್ಲದ್ ಸತ್ಯ ಸಭೆಗೆ ತಿಳಿಸಲಿ: ಜಮೀರ್
ಧಾರವಾಡ ಸಭೆಯಲ್ಲಿ ಭಾಗಿಯಾಗಿದ್ದ ಬೆಲ್ಲದ್ ಸತ್ಯ ಸಭೆಗೆ ತಿಳಿಸಲಿ: ಜಮೀರ್
ಸುಮ್ಮನೆ ಮಾತಾಡಿದರೂ ಅನುಕುಮಾರ್ ತಾಯಿ ಜಯಮ್ಮಗೆ ಎದೆನೋವು ಬರುತ್ತದೆ
ಸುಮ್ಮನೆ ಮಾತಾಡಿದರೂ ಅನುಕುಮಾರ್ ತಾಯಿ ಜಯಮ್ಮಗೆ ಎದೆನೋವು ಬರುತ್ತದೆ
ಸಿಎಂರನ್ನು ಭೇಟಿಯಾಗುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ: ಕಾಶೀನಾಥಯ್ಯ
ಸಿಎಂರನ್ನು ಭೇಟಿಯಾಗುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ: ಕಾಶೀನಾಥಯ್ಯ
ವಕ್ಫ್​ ಜಟಾಪಟಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಸವಾಲ್ ಹಾಕಿದ ಜಮೀರ್!
ವಕ್ಫ್​ ಜಟಾಪಟಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಸವಾಲ್ ಹಾಕಿದ ಜಮೀರ್!
ವಿಷಯ ಪ್ರಸ್ತಾಪಿಸಿ ಸಮರ್ಥಿಸಿಕೊಳ್ಳಲು ಹೆಣಗುತ್ತಿರುವ ವಿಪಕ್ಷ ನಾಯಕ ಅಶೋಕ
ವಿಷಯ ಪ್ರಸ್ತಾಪಿಸಿ ಸಮರ್ಥಿಸಿಕೊಳ್ಳಲು ಹೆಣಗುತ್ತಿರುವ ವಿಪಕ್ಷ ನಾಯಕ ಅಶೋಕ
ಪವಿತ್ರಾ ಗೌಡಗೆ ಜಾಮೀನು; ಮೊದಲ ಬಾರಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ತಾಯಿ
ಪವಿತ್ರಾ ಗೌಡಗೆ ಜಾಮೀನು; ಮೊದಲ ಬಾರಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ತಾಯಿ
ಮದವೇರಿದಾಗ ಸ್ಮಶಾನದಲ್ಲಿ ಸುತ್ತು ಹಾಕಬೇಕು: ಹೀಗೆಂದಿದ್ದೇಕೆ ಅಶೋಕ್?
ಮದವೇರಿದಾಗ ಸ್ಮಶಾನದಲ್ಲಿ ಸುತ್ತು ಹಾಕಬೇಕು: ಹೀಗೆಂದಿದ್ದೇಕೆ ಅಶೋಕ್?
ಹಿಂದೆ ನೀವು ಸದನವನ್ನು ಹೀಗಾ ನಡೆಸಿದ್ದು ಅಂತ ಸಿಎಂರನ್ನು ಪ್ರಶ್ನಿಸಿದ ಅಶೋಕ
ಹಿಂದೆ ನೀವು ಸದನವನ್ನು ಹೀಗಾ ನಡೆಸಿದ್ದು ಅಂತ ಸಿಎಂರನ್ನು ಪ್ರಶ್ನಿಸಿದ ಅಶೋಕ
ತಮ್ಮದೇ ಪಕ್ಷದ ಮಂತ್ರಿಯನ್ನು ಮಾತಾಡಲುಮ ಬಿಡದ ನರೇಂದ್ರ ಸ್ವಾಮಿ
ತಮ್ಮದೇ ಪಕ್ಷದ ಮಂತ್ರಿಯನ್ನು ಮಾತಾಡಲುಮ ಬಿಡದ ನರೇಂದ್ರ ಸ್ವಾಮಿ
ಅಲ್ಲು ಅರ್ಜುನ್ ಬಂಧಿಸಿ ಕರೆದೊಯ್ದ ಪೊಲೀಸರು: ವಿಡಿಯೋ ಇಲ್ಲಿದೆ
ಅಲ್ಲು ಅರ್ಜುನ್ ಬಂಧಿಸಿ ಕರೆದೊಯ್ದ ಪೊಲೀಸರು: ವಿಡಿಯೋ ಇಲ್ಲಿದೆ