‘ಕರ್ಮ ಬಡ್ಡಿ ಸಮೇತ ಬರುತ್ತೆ’; ಧನುಷ್ ವಿಚ್ಛೇದನಕ್ಕೆ ಟಾಂಗ್ ಕೊಟ್ರಾ ನಯನತಾರಾ?

ಸೆಲೆಬ್ರಿಟಿಗಳು ಏನೇ ಪೋಸ್ಟ್ ಮಾಡಿದರೂ ಅದಕ್ಕೊಂದು ಅರ್ಥ ಹುಡುಕಲಾಗುತ್ತದೆ. ಅದರಲ್ಲೂ ವಿವಾದಗಳು ನಡೆಯುವಾಗ ಹಂಚಿಕೊಳ್ಳುವ ಸಾಲುಗಳು ಚರ್ಚೆಯನ್ನು ಹುಟ್ಟುಹಾಕುತ್ತವೆ. ನಯನತಾರಾ ಹಂಚಿಕೊಂಡಿರೋ ಸಾಲುಗಳು ಈಗ ಚರ್ಚೆಗೆ ಎಡೆಮಾಡಿಕೊಟ್ಟಿದೆ.

‘ಕರ್ಮ ಬಡ್ಡಿ ಸಮೇತ ಬರುತ್ತೆ’; ಧನುಷ್ ವಿಚ್ಛೇದನಕ್ಕೆ ಟಾಂಗ್ ಕೊಟ್ರಾ ನಯನತಾರಾ?
ಧನುಷ್-ನಯನತಾರಾ
Follow us
ರಾಜೇಶ್ ದುಗ್ಗುಮನೆ
|

Updated on: Nov 30, 2024 | 12:47 PM

ನಟಿ ನಯನತಾರಾ ಹಾಗೂ ಧನುಷ್ ಮಧ್ಯೆ ಇರುವ ಕಿತ್ತಾಟ ದಿನ ಕಳೆದಂತೆ ಹೆಚ್ಚುತ್ತಿದೆ. ಧನುಷ್ ನಿರ್ಮಾಣ ಮಾಡಿದ ‘ನಾನುಂ ರೌಡಿ ದಾನ್’ ಸಿನಿಮಾದ ಕೆಲ ದೃಶ್ಯಗಳ ಬಳಕೆಗೆ ಅವಕಾಶ ಕೊಟ್ಟಿಲ್ಲ ಎಂದು ನಯನತಾರಾ ಸಿಟ್ಟಾಗಿದ್ದರು. ಈ ವಿಚಾರವಾಗಿ ಓಪನ್ ಲೆಟರ್ ಕೂಡ ಬರೆದಿದ್ದರು. ಈಗ ಕರ್ಮದ ಬಗ್ಗೆ ಕೆಲ ಸಾಲುಗಳನ್ನು ನಯನತಾರಾ ಹಂಚಿಕೊಂಡಿದ್ದಾರೆ. ಈ ವಿಚಾರ ಚರ್ಚೆ ಆಗುತ್ತಿದೆ.

ಸೆಲೆಬ್ರಿಟಿಗಳು ಏನೇ ಪೋಸ್ಟ್ ಮಾಡಿದರೂ ಅದಕ್ಕೊಂದು ಅರ್ಥ ಹುಡುಕಲಾಗುತ್ತದೆ. ಅದರಲ್ಲೂ ವಿವಾದಗಳು ನಡೆಯುವಾಗ ಹಂಚಿಕೊಳ್ಳುವ ಸಾಲುಗಳು ಚರ್ಚೆಯನ್ನು ಹುಟ್ಟುಹಾಕುತ್ತವೆ. ನಯನತಾರಾ ಹಂಚಿಕೊಂಡಿರೋ ಸಾಲುಗಳು ಈಗ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಇನ್​ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ನಯನತಾರಾ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ‘ಕರ್ಮ ಹೇಳುತ್ತದೆ: ಸುಳ್ಳುಗಳಿಂದ ನೀವು ಯಾರದ್ದಾದರೂ ಜೀವನವನ್ನು ನಾಶ ಮಾಡಿದರೆ ಅದನ್ನು ಸಾಲದ ರೀತಿ ಸ್ವೀಕರಿಸು. ನಂತರ ಬಡ್ಡಿ ಸಮೇತ ಅದು ನಿನಗೆ ಬರುತ್ತದೆ’ ಎಂದು ಪೋಸ್ಟ್ ಮಾಡಿದ್ದಾರೆ.

ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ವಿಚ್ಛೇದನ ಪ್ರಕರಣ ಕೋರ್ಟ್​ನಲ್ಲಿ ನಡೆಯುತ್ತಿತ್ತು. ಇಬ್ಬರೂ ಬೇರೆ ಆಗಲು ಇತ್ತೀಚೆಗೆ ಕೋರ್ಟ್ ಅಧಿಕೃತವಾಗಿ ಒಪ್ಪಿಗೆ ಕೊಟ್ಟಿದೆ. ಈ ವಿಚಾರವನ್ನು ಇಟ್ಟುಕೊಂಡು ನಯನತಾರಾ ಅವರು ಈ ರೀತಿಯ ಪೋಸ್ಟ್ ಮಾಡಿದರೆ ಎನ್ನುವ ಕುತೂಹಲ ಅನೇಕರಿಗೆ ಮೂಡಿದೆ.

ಇದನ್ನೂ ಓದಿ: ಪತಿಯನ್ನು ನಾಯಿಗೆ ಹೋಲಿಸಲಾಗಿತ್ತು: ನಯನತಾರಾ ಬೇಸರ

ನಯನತಾರಾ ಹಾಗೂ ಧನುಷ್ ವಿವಾದ ಏನು?

ನಯನತಾರಾ ಅವರು ವಿಘ್ನೇಶ್ ಶಿವನ್ ಅವರನ್ನು ಮದುವೆ ಆದರು. ಇವರ ಮದುವೆಯನ್ನು ಡ್ಯಾಕ್ಯುಮೆಂಟರಿ ರೀತಿ ಮಾಡಿ ನೆಟ್​ಫ್ಲಿಕ್ಸ್​ಗೆ ಕೊಡಲಾಗಿದೆ. ಈ ಡಾಕ್ಯುಮೆಂಟರಿಯಲ್ಲಿ ಸೇರಿಸಲು ತಾವು ಹಾಗೂ ವಿಘ್ನೇಶ್ ಒಟ್ಟಾಗಿ ಕೆಲಸ ಮಾಡಿದ ಮೊದಲ ಸಿನಿಮಾ ‘ನಾನುಂ ರೌಡಿ ದಾನ್’ ಸಿನಿಮಾದ ಕೆಲ ದೃಶ್ಯಗಳನ್ನು ನಯನತಾರಾ ಅವರು ಧನುಶ್ ಬಳಿ ಕೇಳಿದ್ದರು. ಆದರೆ, ಇದಕ್ಕೆ ಧನುಶ್ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪದ ನಯನತಾರಾ ಹಾಗೆಯೇ ದೃಶ್ಯಗಳ ಬಳಕೆ ಮಾಡಿಕೊಂಡಿದ್ದರು. ಇದರಿಂದ ಧನುಶ್ ಕಾನೂನು ಹೋರಾಟಕ್ಕೆ ಮುಂದಾದರು. ಇದರಿಂದ ಸಿಟ್ಟಾದ ನಯನತಾರಾ ಅವರು ಉದ್ದನೆಯ ಸಾಲುಗಳನ್ನು ಬರೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
"ಇಸ್ಪೀಟ್ ಆಟ ಆಡಲೇಬೇಕಾ ಸರ್​"? ಪೊಲೀಸರಿಗೆ ಮಕ್ಕಳ ಪ್ರಶ್ನೆ
ಫೆಂಗಲ್ ಪರಿಣಾಮ: ಟೊಮೆಟೋಗೆ ಭಾರಿ ಬೇಡಿಕೆ, ದರವೂ ಹೆಚ್ಚಳ
ಫೆಂಗಲ್ ಪರಿಣಾಮ: ಟೊಮೆಟೋಗೆ ಭಾರಿ ಬೇಡಿಕೆ, ದರವೂ ಹೆಚ್ಚಳ
ರಜತ್ ಆಯ್ತು ಈಗ ತ್ರಿವಿಕ್ರಂಗೆ ತಲೆ ಬೋಳಿಸೋ ಚಾಲೆಂಜ್; ಒಪ್ಪಿದ್ರಾ?
ರಜತ್ ಆಯ್ತು ಈಗ ತ್ರಿವಿಕ್ರಂಗೆ ತಲೆ ಬೋಳಿಸೋ ಚಾಲೆಂಜ್; ಒಪ್ಪಿದ್ರಾ?
ವಿಜಯೇಂದ್ರ ಹೊಂದಾಣಿಕೆ ರಾಜಕಾರಣ ಮಾಡಬಾರದು: ಬಸನಗೌಡ ಯತ್ನಾಳ್
ವಿಜಯೇಂದ್ರ ಹೊಂದಾಣಿಕೆ ರಾಜಕಾರಣ ಮಾಡಬಾರದು: ಬಸನಗೌಡ ಯತ್ನಾಳ್
ದೆಹಲಿಯಲ್ಲಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿದ್ದೇನೆ: ರೇವಣ್ಣ
ದೆಹಲಿಯಲ್ಲಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿದ್ದೇನೆ: ರೇವಣ್ಣ