Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿಯನ್ನು ನಾಯಿಗೆ ಹೋಲಿಸಲಾಗಿತ್ತು: ನಯನತಾರಾ ಬೇಸರ

Nayantara: ನಯನತಾರಾ ಹಾಗೂ ವಿಘ್ನೇಷ್ ಶಿವನ್ ಮದುವೆಯಾಗಿ ಎರಡು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಆದರೆ ನಯನತಾರಾ ಪತಿ ವಿಘ್ನೇಷ್ ಅನ್ನು ನಾಯಿಗೆ ಹೋಲಿಸಲಾಗಿತ್ತು. ಈ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ ನಯನತಾರಾ.

ಪತಿಯನ್ನು ನಾಯಿಗೆ ಹೋಲಿಸಲಾಗಿತ್ತು: ನಯನತಾರಾ ಬೇಸರ
Follow us
ಮಂಜುನಾಥ ಸಿ.
|

Updated on: Nov 21, 2024 | 11:51 AM

ನಯನತಾರಾ ಕಳೆದೊಂದು ವಾರದಿಂದ ಸಖತ್ ಸುದ್ದಿಯಲ್ಲಿದ್ದಾರೆ. ಲೇಡಿ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುವ ನಯನತಾರಾ ಅವರ ಜೀವನದ ಬಗ್ಗೆ ಡಾಕ್ಯುಮೆಂಟರಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದೆ. ಡಾಕ್ಯುಮೆಂಟರಿಯಲ್ಲಿ ಸಣ್ಣ ವಿಡಿಯೋ ತುಣುಕು ಬಳಕೆ ಮಾಡಿಕೊಂಡಿರುವ ಬಗ್ಗೆ ಧನುಶ್​, ನಯನತಾರಾಗೆ ನೊಟೀಸ್ ನೀಡಿದ್ದು, ನೊಟೀಸ್​ ನೀಡಿದ ಧನುಶ್ ಅನ್ನು ನಯನತಾರಾ, ನೀಚ ಎಂದು ಕರೆದಿದ್ದು ಭಾರಿ ದೊಡ್ಡ ಸುದ್ದಿಯಾಗಿದೆ. ಧನುಶ್ ಜೊತೆಗೆ ನಟಿಸಿರುವ ಕೆಲವು ನಟಿಯರು ಸಹ ನಯನತಾರಾಗೆ ಈ ವಿಷಯದಲ್ಲಿ ಬೆಂಬಲ ಸೂಚಿಸಿದ್ದಾರೆ.

ಡಾಕ್ಯುಮೆಂಟರಿ ವಿಷಯಕ್ಕೆ ಬರುವುದಾದರೆ ಡಾಕ್ಯುಮೆಂಟರಿಯಲ್ಲಿ ನಯನತಾರಾ ಅವರ ಖಾಸಗಿ ಹಾಗೂ ವೃತ್ತಿ ಜೀವನದ ಸಾಕಷ್ಟು ವಿಷಯಗಳಿವೆ. ತಮ್ಮ ಹಳೆಯ ಲವ್​ ಲೈಫ್, ಅದರಿಂದ ಎದುರಿಸಿದ ಸಮಸ್ಯೆ. ವೃತ್ತಿ ಜೀವನದಲ್ಲಿ ಆದ ಏರು-ಪೇರುಗಳು. ಸಿನಿಮಾ ರಂಗವನ್ನೇ ತೊರೆಯಬೇಕು ಎಂದುಕೊಂಡಿದ್ದು ಹೀಗೆ ಹಲವು ವಿಷಯಗಳ ಬಗ್ಗೆ ನಯನತಾರಾ ಮಾತನಾಡಿದ್ದಾರೆ. ತಮ್ಮ ಪತಿ ವಿಘ್ನೇಷ್​ ಬಗ್ಗೆಯೂ ಮಾತನಾಡಿರುವ ನಯನತಾರಾ, ತಮ್ಮ ಪತಿಯನ್ನು ನಾಯಿಗೆ ಹೋಲಿಸಿದ್ದ ಘಟನೆ ನೆನಪಿಸಿಕೊಂಡು ತುಸು ಭಾವುಕಗೊಂಡಿದ್ದಾರೆ.

ಡಾಕ್ಯುಮೆಂಟರಿಯಲ್ಲಿ ಮಾತನಾಡಿರುವ ನಯನತಾರಾ ಪತಿ ವಿಘ್ನೇಶ್ ಶಿವನ್, ‘ನಾವು ಪರಸ್ಪರ ಪ್ರೀತಿಸುತ್ತಿರುವ ವಿಷಯವನ್ನು ಬಹಿರಂಗಗೊಳಿಸಿದಾಗ ನನ್ನ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾದವು. ‘ಫೈವ್ ಸ್ಟಾರ್ ಹೋಟೆಲ್ ಬಿರಿಯಾನಿ ನಾಯಿಗೆ ಸಿಕ್ಕಿದೆ’ ಎಂಬ ಮೀಮ್​ಗಳು ಹರಿದಾಡಿದವು. ಅದನ್ನೆಲ್ಲ ನೋಡಿದಾಗ ಸಾಕಷ್ಟು ನೋವಾಗುತ್ತಿತ್ತು’ ಎಂದಿದ್ದಾರೆ. ‘ಬ್ಯೂಟಿ, ಬೀಸ್ಟ್ ಅನ್ನು ಆಯ್ಕೆ ಮಾಡಿಕೊಂಡರೆ ಯಾರೇನು ಮಾಡಲಾಗುತ್ತದೆ’ ಎಂಬ ಮೀಮ್​ಗಳು ಸಹ ಹರಿದಾಡಿದವು. ನನ್ನನ್ನು ರಾಕ್ಷಸನಂತೆಯೂ ಚಿತ್ರಿಸಲಾಗಿತ್ತು, ಬಸ್ ಕಂಡಕ್ಟರ್ ಒಬ್ಬ ಸೂಪರ್ ಸ್ಟಾರ್ ಆಗಿರುವಾಗ ಇಲ್ಲಿ ಎಲ್ಲವೂ ಸಾಧ್ಯವಿದೆ’ ಎಂದು ವಿಘ್ನೇಷ್ ಹೇಳಿದರು.

ಇದನ್ನೂ ಓದಿ:ಧನುಷ್​ಗೆ ಟಾಂಗ್ ಕೊಡಲು ಶಾರುಖ್​, ಚಿರಂಜೀವಿಗೆ ಧನ್ಯವಾದ ಹೇಳಿದ ನಯನತಾರಾ

ಮಾತು ಮುಂದುವರೆಸಿ, ‘ನಮಗೆ ಬದುಕುವುದು ಸುಲಭದ ಕೆಲಸವಲ್ಲ. ಎಲ್ಲಿಗೂ ಹೋಗುವಂತಿಲ್ಲ, ಯಾರೊಂದಿಗೂ ಮಾತನಾಡುವಂತಿಲ್ಲ ಎಲ್ಲವೂ ಸುದ್ದಿಯಾಗುತ್ತದೆ. ತಿರುಪತಿಯಲ್ಲಿ ಮದುವೆ ಆಗೋಣ ಎಂದುಕೊಂಡಾಗಲೂ ಸಹ ಅದಕ್ಕೂ ನಿರಾಕರಣೆ ಎದುರಾಗಿತ್ತು. ಆದರೂ ನಾವು ಕಷ್ಟಪಟ್ಟು ಅದನ್ನೆಲ್ಲ ದಾಟಿಕೊಂಡು ಬರುತ್ತಿದ್ದೇವೆ’ ಎಂದಿದ್ದಾರೆ.

ಇದೇ ವಿಷಯವಾಗಿ ತುಸು ಭಾವುಕವಾಗಿ ಮಾತನಾಡಿರುವ ನಯನತಾರಾ, ‘ಆ ವಿಷಯ (ನಾಯಿಗೆ ಹೋಲಿಸಿದ್ದು) ನನಗೆ ತೀವ್ರ ಬೇಸರ ತರಿಸಿತ್ತು. ಬಹುಷಃ ಇವನ (ವಿಘ್ನೇಷ್) ಜೀವನದಲ್ಲಿ ನಾನು ಇಲ್ಲದೇ ಹೋಗಿದ್ದಿದ್ದರೆ, ಇವನ ಜೀವನ ಇನ್ನಷ್ಟು ಸುಲಭವಾಗಿ ಬಹುಷಃ ಸಂತೋಷವಾಗಿಯೂ ಇರುತ್ತಿತ್ತೋ ಏನೋ’ ಎಂದಿದ್ದಾರೆ. ನಯನತಾರಾ ಹಾಗೂ ವಿಘ್ನೇಷ್ ಇಬ್ಬರೂ 2022 ರಲ್ಲಿ ವಿವಾಹವಾದರು. ಬಾಡಿಗೆ ತಾಯ್ತನದ ಮೂಲಕ ಅವಳ-ಜವಳಿ ಮಕ್ಕಳನ್ನು ಹೊಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್