AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧನುಷ್​ಗೆ ಟಾಂಗ್ ಕೊಡಲು ಶಾರುಖ್​, ಚಿರಂಜೀವಿಗೆ ಧನ್ಯವಾದ ಹೇಳಿದ ನಯನತಾರಾ

ನಯನತಾರಾ ಅವರು ತಮ್ಮ ಬಗ್ಗೆ ಬಂದಿರುವ ಡಾಕ್ಯುಮೆಂಟರಿಯಲ್ಲಿ ‘ನಾನುಂ ರೌಡಿ ದಾನ್’ ಚಿತ್ರದ ದೃಶ್ಯ ಬಳಕೆ ವಿವಾದದ ನಂತರ, ಶಾರುಖ್ ಖಾನ್ ಮತ್ತು ಚಿರಂಜೀವಿ ಅವರಿಗೆ ಧನ್ಯವಾದ ಹೇಳಿದ್ದಾರೆ. ಡಾಕ್ಯುಮೆಂಟರಿಗಾಗಿ ಅನುಮತಿ ಪಡೆಯುವಲ್ಲಿ ನೆರವು ನೀಡಿದವರಿಗೆ ಧನ್ಯವಾದ ಹೇಳಿದ್ದಾರೆ.

ಧನುಷ್​ಗೆ ಟಾಂಗ್ ಕೊಡಲು ಶಾರುಖ್​, ಚಿರಂಜೀವಿಗೆ ಧನ್ಯವಾದ ಹೇಳಿದ ನಯನತಾರಾ
ನಯನತಾರಾ-ಶಾರುಖ್
ರಾಜೇಶ್ ದುಗ್ಗುಮನೆ
|

Updated on:Nov 21, 2024 | 11:02 AM

Share

ನಟಿ ನಯನತಾರಾ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ‘ನಾನುಂ ರೌಡಿ ದಾನ್’ ಸಿನಿಮಾದ ದೃಶ್ಯವನ್ನು ಒಪ್ಪಿಗೆ ಇಲ್ಲದೆ ‘ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್’ ಡಾಕ್ಯುಮೆಂಟರಿಯಲ್ಲಿ ಬಳಕೆ ಮಾಡಿಕೊಂಡಿದ್ದಕ್ಕೆ ಅವರ ಮೇಲೆ ಕೇಸ್ ಹಾಕಲಾಗಿದೆ. ಈ ವಿಚಾರವಾಗಿ ನಯನತಾರಾ ಓಪನ್ ಲೆಟರ್ ಬರೆದಿದ್ದರು. ಈಗ ನಯನತಾರಾ ಅವರು ಈ ಡಾಕ್ಯುಮೆಂಟರಿಗೆ ಸಹಾಯ ಮಾಡಿದ ಶಾರುಖ್ ಖಾನ್, ಚಿರಂಜೀವಿ ಅವರಿಗೆ ಧನ್ಯವಾದ ಹೇಳಿದ್ದಾರೆ.

‘ನಾನುಂ ರೌಡಿ ದಾನ್’ ಶೂಟಿಂಗ್ ಸೆಟ್​ನ ಕ್ಲಿಪ್ ನೀಡುವಂತೆ ನಯನತಾರಾ ಅವರು ಧನುಷ್ ಬಳಿ ಬೇಡಿಕೆ ಇಟ್ಟಿದ್ದರು. ಇದಕ್ಕೆ ಧನುಷ್ ಕಡೆಯಿಂದ ನಿರಾಕ್ಷೇಪಣ ಪತ್ರ ಸಿಗಲೇ ಇಲ್ಲ. ಉಳಿದ ನಿರ್ಮಾಪಕರು ಕೇಳಿದ ತಕ್ಷಣ ನಿರಾಕ್ಷೇಪಣ ಪತ್ರ ನೀಡಿದ್ದರು ಎಂದು ನಯನತಾರಾ ಹೇಳಿದ್ದಾರೆ. ಈ ಬಗ್ಗೆ ಅವರು ಧನ್ಯವಾದ ಹೇಳಿದ್ದಾರೆ.

‘ನಾನು ಕೆಲಸ ಮಾಡಿದ ಪ್ರತಿಯೊಂದು ಸಿನಿಮಾ ನನ್ನ ಜೀವನದಲ್ಲಿ ಅಪಾರ ಮಹತ್ವವನ್ನು ಪಡೆದಿದೆ. ಏಕೆಂದರೆ ಸಿನಿಮಾದಲ್ಲಿನ ನನ್ನ ಪ್ರಯಾಣ ಅನೇಕ ಸಂತೋಷದ ಕ್ಷಣಗಳನ್ನು ಹೊಂದಿದೆ. ಅನೇಕ ಸಿನಿಮಾಗಳು ನನ್ನ ಹೃದಯಕ್ಕೆ ಹತ್ತಿರವಾಗಿವೆ. ಈ ಕಾರಣದಿಂದಲೇ ಆ ಸಿನಿಮಾಗಳ ದೃಶ್ಯಗಳನ್ನು ನಮ್ಮ ಸಾಕ್ಷ್ಯಚಿತ್ರದಲ್ಲಿ ಸೇರಿಸಲು ನಾನು ಬಯಸಿದ್ದೆ. ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್‌ಒಸಿ) ಪಡೆಯಲು ನಾನು ಕೆಲ ನಿರ್ಮಾಪಕರನ್ನು ಸಂಪರ್ಕಿಸಿದೆ. ಅವರು ಹಿಂಜರಿಕೆಯಿಲ್ಲದೆ ಅಥವಾ ಯಾವುದೇ ವಿಳಂಬ ಮಾಡದೆ ಅವುಗಳನ್ನು ನೀಡಿದರು. ಅವರೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ’ ಎಂದಿದ್ದಾರೆ ನಯನತಾರಾ.

ಶಾರುಖ್ ಖಾನ್ ಅವರಿಗೆ ನಯನತಾರಾ ಧನ್ಯವಾದ ಹೇಳಿದ್ದಾರೆ. ಅವರು ಕೂಡ ಈ ಡ್ಯಾಕ್ಯುಮೆಂಟರಿಯಲ್ಲಿ ಇದ್ದಾರೆ. ಶಾರುಖ್ ನಿರ್ಮಾಣದ ‘ಜವಾನ್’ ಸಿನಿಮಾದ ಕೆಲವು ದೃಶ್ಯಗಳು ಈ ಡಾಕ್ಯುಮೆಂಟರಿಯಲ್ಲಿ ಇವೆ. ಅಲ್ಲದೆ, ತಮಿಳಿನ ಲೈಕಾ ಪ್ರೊಡಕ್ಷನ್ ಮೊದಲಾದವರಿಗೆ ಅವರು ಥ್ಯಾಂಕ್ಸ್ ಹೇಳಿದ್ದಾರೆ. ತೆಲುಗಿನ ಚಿರಂಜೀವಿ, ರಾಮ್ ಚರಣ್ ಅವರಿಗೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ:ನೀಚ ಧನುಶ್​ ನಿಜ ಬಣ್ಣ ಬಯಲು ಮಾಡಿದ ನಯನತಾರಾ

ಸದ್ಯ ಈ ಹೇಳಿಕೆಯನ್ನು ನಾನಾ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ಧನುಷ್ ಅವರಿಗೆ ಟಾಂಗ್ ಕೊಡುವ ಉದ್ದೇಶದಿಂದಲೇ ಈ ರೀತಿಯಲ್ಲಿ ಹೇಳಿಕೆ ನೀಡಲಾಗಿದೆ ಎಂದು ಕೆಲವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:02 am, Thu, 21 November 24