ಮತ್ತೊಂದು ಹುಡುಗಿಯ ಜೊತೆ ರೆಹಮಾನ್ ಹೆಸರು ಲಿಂಕ್; ಇಲ್ಲಿದೆ ಅಸಲಿ ವಿಚಾರ

ಸೈರಾ ಬಾನು ಅವರು ವಿಚ್ಛೇದನ ಪಡೆಯುವ ನಿರ್ಧಾರ ಮಾಡಿದ್ದಾರೆ. ರೆಹಮಾನ್ ಜೊತೆ ಅವರು 29 ವರ್ಷಗಳ ದಾಂಪತ್ಯ ಜೀವನ ಕೊನೆ ಮಾಡಿಕೊಂಡಿದ್ದಾರೆ. ಸೈರಾ ಈ ಬಗ್ಗೆ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಮೋಹಿನಿ ಕೂಡ ತಮ್ಮ ಪತಿ ಮಾರ್ಕ್​ ಅವರಿಂದ ಬೇರೆ ಆಗುತ್ತಿರುವುದಾಗಿ ಹೇಳಿದ್ದಾರೆ. ಇದನ್ನು ಕೆಲವರು ಲಿಂಕ್ ಮಾಡಿದ್ದಾರೆ. ಇಬ್ಬರ

ಮತ್ತೊಂದು ಹುಡುಗಿಯ ಜೊತೆ ರೆಹಮಾನ್ ಹೆಸರು ಲಿಂಕ್; ಇಲ್ಲಿದೆ ಅಸಲಿ ವಿಚಾರ
ಮಾಲಿನಿ-ರೆಹಮಾನ್
Follow us
ರಾಜೇಶ್ ದುಗ್ಗುಮನೆ
|

Updated on:Nov 21, 2024 | 12:03 PM

ಎಆರ್ ರೆಹಮಾನ್ ಅವರು ಪತ್ನಿ ಸೈರಾ ಭಾನು ಅವರಿಂದ ಬೇರೆ ಆಗಿದ್ದಾರೆ. ಇದರ ಜೊತೆಗೆ ರೆಹಮಾನ್ ತಂಡದಲ್ಲಿ ಇರೋ ಮೊಹಿನಿ ಡೇ ಕೂಡ ತಮ್ಮ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ. ಕೆಲವೇ ಗಂಟೆಗಳ ಅಂತರದಲ್ಲಿ ಈ ಎರಡೂ ಘೋಷಣೆ ಆಗಿದೆ. ಅನೇಕರು ಈ ಎರಡು ಪ್ರಕರಣಗಳ ಮಧ್ಯೆ ಲಿಂಕ್ ಮಾಡುತ್ತಾ ಇದ್ದಾರೆ. ಈ ಬಗ್ಗೆ ಸೈರಾ ಬಾನು ಅವರು ವಕೀಲರು ಸ್ಪಷ್ಟನೆ ನೀಡಿದ್ದಾರೆ. ಎರಡೂ ಪ್ರಕರಣಗಳ ಮಧ್ಯೆ ಯಾವುದೇ ಲಿಂಕ್ ಇಲ್ಲ ಎಂದಿದ್ದಾರೆ.

ಸೈರಾ ಬಾನು ಅವರು ವಿಚ್ಛೇದನ ಪಡೆಯುವ ನಿರ್ಧಾರ ಮಾಡಿದ್ದಾರೆ. ರೆಹಮಾನ್ ಜೊತೆ ಅವರು 29 ವರ್ಷಗಳ ದಾಂಪತ್ಯ ಜೀವನ ಕೊನೆ ಮಾಡಿಕೊಂಡಿದ್ದಾರೆ. ಸೈರಾ ಈ ಬಗ್ಗೆ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಮೋಹಿನಿ ಕೂಡ ತಮ್ಮ ಪತಿ ಮಾರ್ಕ್​ ಅವರಿಂದ ಬೇರೆ ಆಗುತ್ತಿರುವುದಾಗಿ ಹೇಳಿದ್ದಾರೆ. ಇದನ್ನು ಕೆಲವರು ಲಿಂಕ್ ಮಾಡಿದ್ದಾರೆ. ಇಬ್ಬರ ಮಧ್ಯೆ ಏನೋ ನಡೆದಿರಬಹುದು ಎಂದು ಹೇಳಲಾಗಿತ್ತು. ಈ ಕುರಿತು ಸೈರಾ ಪರ ವಕೀಲರಾದ ವಂದನಾ ಶಾ ಅವರು ಸ್ಪಷ್ಟನೆ ನೀಡಿದ್ದಾರೆ.

‘ಈ ಎರಡೂ ಪ್ರಕರಣಗಳ ಮಧ್ಯೆ ಯಾವುದೇ ಕನೆಕ್ಷನ್ ಇಲ್ಲ. ಸೈರಾ ಹಾಗೂ ರೆಹಮಾನ್ ಅವರದ್ದು ಇದು ಸ್ವಂತ ನಿರ್ಧಾರ’ ಎಂದು ಹೇಳಿದ್ದಾರೆ ವಂದನಾ. ‘ಮದುವೆ ಆಗಿ ಹಲವು ವರ್ಷಗಳ ಬಳಿಕ ಜೀವನದಲ್ಲಿ ಏರಿಳಿತ ಇದ್ದೇ ಇರುತ್ತದೆ. ಇಬ್ಬರೂ ಒಳ್ಳೆಯ ರೀತಿಯಲ್ಲಿ ಸಂಬಂಧ ಕೊನೆ ಮಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಬೆಂಬಲ ನೀಡಿಕೊಳ್ಳುವುದಾಗಿ ಹೇಳಿದ್ದಾರೆ’ ಎಂದಿದ್ದಾರೆ ಸೈರಾ.

ಸದ್ಯ ವಂದನಾ ಅವರು ಸೈರಾ ಹಾಗೂ ರೆಹಮಾನ್ ಅವರ ಸಂಬಂಧ ಕೊನೆ ಆಗಲು ಕಾರಣ ಏನು ಎಂಬುದನ್ನು ರಿವೀಲ್ ಮಾಡಿಲ್ಲ. ‘ಅವರ ವಿಚ್ಛೇದನವು ಸೌಹಾರ್ದಯುತವಾಗಿದೆ ಮತ್ತು ಸದ್ಯಕ್ಕೆ ಹಣಕಾಸಿನ ಅಂಶದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ರೆಹಮಾನ್ ವಿಚ್ಛೇದನದ ಬಳಿಕ ದೊಡ್ಡ ಬೆಳವಣಿಗೆ; ಗಾಯಕನ ತಂಡದಲ್ಲಿದ್ದವಳಿಂದಲೂ ಡಿವೋರ್ಸ್ ಘೋಷಣೆ

ಎಆರ್ ರೆಹಮಾನ್ ಹಾಗೂ ಸೈರಾ ದಂಪತಿಗೆ ಮೂವರು ಮಕ್ಕಳು. ಖತಿಜಾ, ರಹಿಮಾ ಹಾಗೂ ಅಮೀನ್ ರೆಹಮಾನ್ ಹೆಸರಿನ ಮಕ್ಕಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:52 am, Thu, 21 November 24

ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹ ರೀತಿ ಬರ್ತೀನಿ; ಚೈತ್ರಾ ಕುಂದಾಪುರ
ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹ ರೀತಿ ಬರ್ತೀನಿ; ಚೈತ್ರಾ ಕುಂದಾಪುರ
ಮೈಸೂರು: ಮುಡಾದಲ್ಲಿ 5 ಸಾವಿರ ಕೋಟಿ ರೂ. ಹಗರಣ, ಗಂಗರಾಜು ಗಂಭೀರ ಆರೋಪ
ಮೈಸೂರು: ಮುಡಾದಲ್ಲಿ 5 ಸಾವಿರ ಕೋಟಿ ರೂ. ಹಗರಣ, ಗಂಗರಾಜು ಗಂಭೀರ ಆರೋಪ
ಗಣೇಶನಿಗೆ ತುಳಸಿಯನ್ನು ಯಾಕೆ ಅರ್ಪಿಸಬಾರದು? ತಿಳಿಯಲು ಈ ವಿಡಿಯೋ ನೋಡಿ
ಗಣೇಶನಿಗೆ ತುಳಸಿಯನ್ನು ಯಾಕೆ ಅರ್ಪಿಸಬಾರದು? ತಿಳಿಯಲು ಈ ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಶುಭವಾಗಲಿದೆ
Nithya Bhavishya: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಶುಭವಾಗಲಿದೆ
ಕೆಲಸಕ್ಕೆ ಮುಸ್ಲಿಂ ಯುವತಿಯನ್ನು ಕರೆ ತಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ!
ಕೆಲಸಕ್ಕೆ ಮುಸ್ಲಿಂ ಯುವತಿಯನ್ನು ಕರೆ ತಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ!
ಪೋಷಕರೇ ಎಚ್ಚರ! ಆಟವಾಡುವಾಗ ಗೇಟ್ ಬಿದ್ದು ಒಂದೂವರೆ ವರ್ಷದ ಮಗು ಸಾವು
ಪೋಷಕರೇ ಎಚ್ಚರ! ಆಟವಾಡುವಾಗ ಗೇಟ್ ಬಿದ್ದು ಒಂದೂವರೆ ವರ್ಷದ ಮಗು ಸಾವು