20 ದಿನಕ್ಕೆ ಒಟಿಟಿಗೆ ಕಾಲಿಟ್ಟ ‘ಬಘೀರ’; ವಿಶೇಷ ಸಾಧನೆ ಮಾಡಿದ ಶ್ರೀಮುರಳಿ ಸಿನಿಮಾ

ಶ್ರೀಮುರಳಿ, ರುಕ್ಮಿಣಿ ವಸಂತ್ ಮೊದಲಾದವರು ನಟಿಸಿರೋ ‘ಬಘೀರ’ ಚಿತ್ರಕ್ಕೆ ಡಾಕ್ಟರ್ ಸೂರಿ ಅವರ ನಿರ್ದೇಶನ ಇದೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಈ ಚಿತ್ರ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ಕನ್ನಡದ ಜೊತೆಗೆ ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ವೀಕ್ಷಣೆಗೆ ಲಭ್ಯವಿದೆ.

20 ದಿನಕ್ಕೆ ಒಟಿಟಿಗೆ ಕಾಲಿಟ್ಟ ‘ಬಘೀರ’; ವಿಶೇಷ ಸಾಧನೆ ಮಾಡಿದ ಶ್ರೀಮುರಳಿ ಸಿನಿಮಾ
ಮುರಳಿ
Follow us
ರಾಜೇಶ್ ದುಗ್ಗುಮನೆ
|

Updated on: Nov 21, 2024 | 12:50 PM

ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾ ಅಕ್ಟೋಬರ್ 31ರಂದು ಥಿಯೇಟರ್​ನಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾಗೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿತ್ತು. ಈಗ ಈ ಚಿತ್ರ ಒಟಿಟಿಗೆ ಕಾಲಿಟ್ಟಿದೆ. ಕೇವಲ 20 ದಿನಗಳಲ್ಲಿ ಸಿನಿಮಾ ಒಟಿಟಿ ಹಾದಿ ಹಿಡಿದಿದೆ. ಹಾಗಾದರೆ ಈ ಚಿತ್ರ ಯಾವ ಒಟಿಟಿಯಲ್ಲಿ ಪ್ರಸಾರ ಕಾಣುತ್ತಿದೆ? ಸಿನಿಮಾ ಮಾಡಿದ ವಿಶೇಷ ಸಾಧನೆ ಏನು ಎಂಬ ಬಗ್ಗೆ ಇಲ್ಲಿದೆ ವಿವರ.

ಶ್ರೀಮುರಳಿ, ರುಕ್ಮಿಣಿ ವಸಂತ್ ಮೊದಲಾದವರು ನಟಿಸಿರೋ ‘ಬಘೀರ’ ಚಿತ್ರಕ್ಕೆ ಡಾಕ್ಟರ್ ಸೂರಿ ಅವರ ನಿರ್ದೇಶನ ಇದೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಈ ಚಿತ್ರವನ್ನು ನೆಟ್​ಫ್ಲಿಕ್ಸ್ ಖರೀದಿ ಮಾಡಿದೆ ಅನ್ನೋದು ವಿಶೇಷ. ಕನ್ನಡದ ಜೊತೆಗೆ ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ವೀಕ್ಷಣೆಗೆ ಲಭ್ಯವಿದೆ. ಈ ಬಗ್ಗೆ ನೆಟ್​ಫ್ಲಿಕ್ಸ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದೆ.

ಸಾಮಾನ್ಯವಾಗಿ ಅಮೇಜಾನ್ ಪ್ರೈಮ್, ಜೀ 5 ಮೊದಲಾದ ಒಟಿಟಿ ಪ್ಲಾಟ್​ಫಾರ್ಮ್​ಗಳು ಕನ್ನಡ ಸಿನಿಮಾಗಳನ್ನು ಪಡೆಯಲು ಪೈಪೋಟಿ ನಡೆಸುತ್ತವೆ. ಆದರೆ, ನೆಟ್​ಫ್ಲಿಕ್ಸ್ ಮೊದಲಿನಿಂದಲೂ ಈ ಬಗ್ಗೆ ತಾತ್ಸಾರ ತೋರುತ್ತಾ ಬಂದಿದೆ. ಈ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಇರೋದು ಬೆರಳೆಣಿಕೆ ಕನ್ನಡ ಚಿತ್ರಗಳು ಮಾತ್ರ. ಆದರೆ, ಈ ಒಟಿಟಿ ಸಂಸ್ಥೆ ‘ಬಘೀರ’ ಚಿತ್ರವನ್ನು ಖರೀದಿ ಮಾಡಿದೆ ಎಂದಾಗ ಸಹಜವಾಗಿಯೇ ಕನ್ನಡಿಗರಿಗೆ ಖುಷಿ ಆಗಿದೆ. ಅನೇಕರು ಸಿನಿಮಾದ ಗುಣಮಟ್ಟದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ:  ತೆಲುಗಿನಲ್ಲಿ ‘ಬಘೀರ’ ಚಿತ್ರ ಮಾಡಿದ ಕಲೆಕ್ಷನ್ ಎಷ್ಟು? ಸಿನಿಮಾದ ಒಟ್ಟಾರೆ ಗಳಿಕೆ ಬಗ್ಗೆ ಇಲ್ಲಿದೆ ವಿವರ 

‘ಬಘೀರ’ ಸಿನಿಮಾದಲ್ಲಿ ಶ್ರೀಮುರಳಿ ಹಾಗೂ ರುಕ್ಮಿಣಿ ಜೊತೆ ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ರಂಗಾಯಣ ರಘು, ಗರುಡ ರಾಮ್ ಮೊದಲಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹ ರೀತಿ ಬರ್ತೀನಿ; ಚೈತ್ರಾ ಕುಂದಾಪುರ
ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹ ರೀತಿ ಬರ್ತೀನಿ; ಚೈತ್ರಾ ಕುಂದಾಪುರ
ಮೈಸೂರು: ಮುಡಾದಲ್ಲಿ 5 ಸಾವಿರ ಕೋಟಿ ರೂ. ಹಗರಣ, ಗಂಗರಾಜು ಗಂಭೀರ ಆರೋಪ
ಮೈಸೂರು: ಮುಡಾದಲ್ಲಿ 5 ಸಾವಿರ ಕೋಟಿ ರೂ. ಹಗರಣ, ಗಂಗರಾಜು ಗಂಭೀರ ಆರೋಪ
ಗಣೇಶನಿಗೆ ತುಳಸಿಯನ್ನು ಯಾಕೆ ಅರ್ಪಿಸಬಾರದು? ತಿಳಿಯಲು ಈ ವಿಡಿಯೋ ನೋಡಿ
ಗಣೇಶನಿಗೆ ತುಳಸಿಯನ್ನು ಯಾಕೆ ಅರ್ಪಿಸಬಾರದು? ತಿಳಿಯಲು ಈ ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಶುಭವಾಗಲಿದೆ
Nithya Bhavishya: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಶುಭವಾಗಲಿದೆ