ಸಿನಿಮಾ ರಂಗ: ಶಾರುಖ್ ಖಾನ್ ಪುತ್ರನ ಎಂಟ್ರಿಗೆ ದಿನಾಂಕ ನಿಗದಿ

Aryan Khan: ಶಾರುಖ್ ಖಾನ್ ಪುತ್ರಿ ಸುಹಾನಾ ನಟಿಯಾಗಿ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಇದೀಗ ಮಗನೂ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಆದರೆ ನಟನಾಗಿ ಅಲ್ಲ ಬದಲಿಗೆ ನಿರ್ದೇಶಕನಾಗಿ.

ಸಿನಿಮಾ ರಂಗ: ಶಾರುಖ್ ಖಾನ್ ಪುತ್ರನ ಎಂಟ್ರಿಗೆ ದಿನಾಂಕ ನಿಗದಿ
Follow us
ಮಂಜುನಾಥ ಸಿ.
|

Updated on: Nov 20, 2024 | 12:59 PM

ಶಾರುಖ್ ಖಾನ್ ಬಾಲಿವುಡ್​ನ ಅತಿ ದೊಡ್ಡ ಸೂಪರ್ ಸ್ಟಾರ್. ವಿಶ್ವದಲ್ಲೇ ಅತಿ ಹೆಚ್ಚು ಜನರಿಗೆ ಪರಿಚಯ ಇರುವ ಭಾರತದ ಸಿನಿಮಾ ನಟ ಸಹ ಶಾರುಖ್ ಖಾನ್. ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ಬಾಲಿವುಡ್​ನಲ್ಲಿ ನೆಪೊಟಿಸಮ್ ಹೆಚ್ಚು. ರಾಜಕೀಯ ಕ್ಷೇತ್ರದಲ್ಲಿ ರಾಜಕಾರಣಿಯ ಮಗ ರಾಜಕಾರಣಿಯಾಗಲು ಚುನಾವಣೆ ಗೆಲ್ಲಬೇಕು, ಕ್ರಿಕೆಟ್​ನಲ್ಲಿಯೂ ಸಹ ಚೆನ್ನಾಗಿ ಆಡಿ ಸೆಲೆಕ್ಟ್ ಆಗಬೇಕು, ಆದರೆ ಸಿನಿಮಾ ಕ್ಷೇತ್ರದಲ್ಲಿ ಆ ಸಮಸ್ಯೆ ಇಲ್ಲ. ಅಪ್ಪ ಸ್ಟಾರ್ ಆಗಿದ್ದರೆ ಸಾಕು ಮಕ್ಕಳನ್ನು ಚಿತ್ರರಂಗಕ್ಕೆ ಕರೆತರುತ್ತಾರೆ. ಹಾಗಾಗಿ ಶಾರುಖ್ ಖಾನ್ ಮಕ್ಕಳು ಸಹ ಸಿನಿಮಾ ರಂಗಕ್ಕೆ ಬರುತ್ತಾರೆಂದು ಮೊದಲೇ ತಿಳಿದಿತ್ತು. ಸುಹಾನಾ ಖಾನ್ ಈಗಾಗಲೇ ‘ಆರ್ಚಿಸ್’ ಸಿನಿಮಾ ಮೂಲಕ ಲಾಂಚ್ ಆಗಿದ್ದಾರೆ. ಆದರೆ ಶಾರುಖ್ ಪುತ್ರ ಆರ್ಯನ್ ಖಾನ್ ಅಪ್ಪನಿಗಿಂತ ತುಸುವಷ್ಟೆ ಭಿನ್ನ ಹಾದಿ ಹಿಡಿದಿದ್ದಾರೆ.

ಆರ್ಯನ್ ಖಾನ್ ಸಹ ಯಾವುದೋ ದೊಡ್ಡ ಸಿನಿಮಾ ಮೂಲಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆರ್ಯನ್ ಖಾನ್, ನಿರ್ದೇಶನದ ಹಾದಿ ಹಿಡಿದಿದ್ದಾರೆ. ಆರ್ಯನ್ ಖಾನ್, ವೆಬ್ ಸರಣಿ ಒಂದನ್ನು ನಿರ್ದೇಶನ ಮಾಡಿದ್ದು, ಡಾಕ್ಯುಮೆಂಟರಿ ಮಾದರಿಯ ಈ ವೆಬ್ ಸರಣಿಯ ಬಿಡುಗಡೆ ಘೋಷಣೆ ಮಾಡಲಾಗಿದೆ.

ಅಮೆರಿಕದಲ್ಲಿ ನಡೆದ ಇವೆಂಟ್​ನಲ್ಲಿ ತಮ್ಮ ಮುಂದಿನ ವರ್ಷದ ಪ್ರಾಜೆಕ್ಟ್​ಗಳನ್ನು ಘೋಷಣೆ ಮಾಡಿರುವ ನೆಟ್​ಫ್ಲಿಕ್ಸ್​, ಆರ್ಯನ್ ಖಾನ್ ಅವರ ವೆಬ್ ಸರಣಿಯ ಘೋಷಣೆಯನ್ನು ಅಧಿಕೃತವಾಗಿ ಮಾಡಿದೆ. ಬಾಲಿವುಡ್​ ಜೀವನದ ಬಗ್ಗೆ ವಿಶಿಷ್ಟವಾದ ವೆಬ್ ಸರಣಿಯನ್ನು ಆರ್ಯನ್ ಖಾನ್ ನಿರ್ದೇಶನ ಮಾಡಿದ್ದಾರೆ. ಈ ವೆಬ್ ಸರಣಿಗೆ ಆರ್ಯನ್ ತಾಯಿ ಗೌರಿ ಖಾನ್ ಬಂಡವಾಳ ಹೂಡಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್ಟೈನ್​ಮೆಂಟ್​ ಅಡಿಯಲ್ಲಿ ಈ ವೆಬ್ ಸರಣಿ ನಿರ್ಮಾಣಗೊಂಡಿದೆ. ನೆಟ್​ಫ್ಲಿಕ್ಸ್​ ಸಹ ಇದರ ಜೊತೆಗೂಡಿದೆ. 2025 ರಲ್ಲಿ ವೆಬ್ ಸರಣಿ ಬಿಡುಗಡೆ ಆಗಲಿದೆ. ಆದರೆ ನಿಖರವಾದ ದಿನಾಂಕವನ್ನು ಘೋಷಣೆ ಮಾಡಲಾಗಿತ್ತು.

ಇದನ್ನೂ ಓದಿ:‘ರೋಬೋ’ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಲಿಲ್ಲ ಏಕೆ?

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಶಾರುಖ್ ಖಾನ್, ‘ಈ ಹೊಸ ಸರಣಿಯನ್ನು ನೆಟ್​ಫ್ಲಿಕ್ಸ್​ ಜೊತೆಗೂಡಿ ಪ್ರಸ್ತುತಪಡಿಸಲು ನಾವು ಉತ್ಸುಕರಾಗಿದ್ದೇವೆ. ಸಿನಿಮಾ ಜಗತ್ತಿನ ಬಗ್ಗೆ ವಿಶಿಷ್ಟ ನೋಟವನ್ನು ಈ ವೆಬ್ ಸರಣಿ ಒಳಗೊಂಡಿದೆ. ಮನೊರಂಜನಾ ಕ್ಷೇತ್ರ ಹೊರಗಿನವರಿಗೆ ಹೇಗೆ ಕಾಣುತ್ತದೆ ಎಂಬುದನ್ನು ಈ ವೆಬ್ ಸರಣಿ ತೋರಿಸಲಾಗಿದೆ. ಆರ್ಯನ್ ಹಾಗೂ ಅವರೊಟ್ಟಿಗೆ ಅನೇಕ ಕ್ರಿಯಾಶೀಲ ಮನಸ್ಸುಗಳು ಮತ್ತು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ನ ತಂಡ ಸೇರಿಕೊಂಡು ಕಟ್ಟಿರುವ ಅದ್ಭುತ ಪ್ರಾಡೆಕ್ಟ್ ಆಗಿದ್ದು, ಎಲ್ಲರ ಹೃದಯ ತಲುಪುವ ಮನೊರಂಜನಾ ಸರಕು ಇದಾಗಿರಲಿದೆ’ ಎಂದಿದ್ದಾರೆ ಶಾರುಖ್ ಖಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ