‘ರೋಬೋ’ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಲಿಲ್ಲ ಏಕೆ?

Shah Rukh Khan: ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲಾಗಿರುವ ಸಿನಿಮಾಗಳಲ್ಲಿ ಒಂದು ರಜನೀಕಾಂತ್ ನಟನೆಯ ‘ರೋಬೋ’ ಆದರೆ ಆ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಬೇಕಿತ್ತು. ಶಾರುಖ್ ಖಾನ್ ಜೊತೆ ಚಿತ್ರೀಕರಣ ಆರಂಭವಾಗುವ ಕೆಲ ದಿನಗಳ ಮುಂಚೆ ಸಿನಿಮಾ ನಿಂತು ಹೋಯ್ತು. ಕಾರಣವೇನು?

‘ರೋಬೋ’ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಲಿಲ್ಲ ಏಕೆ?
Follow us
ಮಂಜುನಾಥ ಸಿ.
|

Updated on: Nov 20, 2024 | 11:57 AM

ಇಂದು ಭಾರತೀಯ ಸಿನಿಮಾಗಳು, ವಿಶೇಷವಾಗಿ ದಕ್ಷಿಣ ಭಾರತದ ಸಿನಿಮಾಗಳು ವಿಶ್ವಮಟ್ಟದಲ್ಲಿ ಮಿಂಚುತ್ತಿವೆ. ಪ್ರತಿ ಸಿನಿಮಾಕ್ಕೂ ನೂರಾರು ಕೋಟಿ ಬಂಡವಾಳ ಹೂಡಲಾಗುತ್ತಿದೆ. ಅತ್ಯುತ್ತಮ ವಿಎಫ್​ಎಕ್ಸ್, ಗ್ರಾಫಿಕ್ಸ್​ಗಳನ್ನು ಬಳಸಲಾಗುತ್ತಿದೆ. ವಿದೇಶಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಇಂದಿಗೆ 15 ವರ್ಷಗಳ ಮುಂಚೆಯೇ ಇದನ್ನೆಲ್ಲ ಮಾಡಿದ್ದರು ತಮಿಳಿನ ಸ್ಟಾರ್ ನಿರ್ದೇಶಕ ಶಂಕರ್. 2010 ರಲ್ಲಿ ಬಿಡುಗಡೆ ಆದ ರಜನೀಕಾಂತ್ ನಟನೆಯ ‘ರೊಬೊ’ ಸಿನಿಮಾ ಆಗಿನ ಕಾಲಕ್ಕೆ ಅತ್ಯುತ್ತಮ ಗುಣಮಟ್ಟದ ವಿಎಫ್​ಎಕ್ಸ್​ ಹೊಂದಿತ್ತು. ಆಗ ಸಿನಿಮಾ ಕ್ಷೇತ್ರದಲ್ಲಿ ಲಭ್ಯವಿದ್ದ ಎಲ್ಲ ಹೊಸ ತಂತ್ರಜ್ಞಾನವನ್ನು ಬಳಸಲಾಗಿತ್ತು. 100 ಕೋಟಿಗೂ ಹೆಚ್ಚಿನ ಬಜೆಟ್ ಅನ್ನು ಆ ಸಿನಿಮಾಕ್ಕೆ ಹಾಕಲಾಗಿತ್ತು. ಸಿನಿಮಾ ಬ್ಲಾಕ್ ಬಸ್ಟರ್ ಸಹ ಆಯ್ತು. ಆದರೆ ಆ ಸಿನಿಮಾದಲ್ಲಿ ಅಸಲಿಗೆ ನಟಿಸಬೇಕಿದ್ದು ರಜನೀಕಾಂತ್ ಅಲ್ಲ ಬದಲಿಗೆ ಶಾರುಖ್ ಖಾನ್.

‘ರೋಬೋ’ ಸಿನಿಮಾದ ರೋಬೊ ಪಾತ್ರದಲ್ಲಿ ಶಾರುಖ್ ಖಾನ್ ನಟಿಸಬೇಕು ಎಂಬುದು ಶಂಕರ್ ಆಸೆಯಾಗಿತ್ತು. ಶಾರುಖ್ ಖಾನ್​ಗೆ ಸಹ ಸಿನಿಮಾದ ಕತೆ, ಮೇಕಿಂಗ್​ ಯೋಜನೆಗಳು ಬಹಳ ಇಷ್ಟವಾಗಿಬಿಟ್ಟಿದ್ದವು. ಆ ಸಿನಿಮಾವನ್ನು ತಾವೇ ನಿರ್ಮಾಣವೂ ಮಾಡುವುದಾಗಿ ಹೇಳಿದ್ದರು. ಸಿನಿಮಾದ ಪ್ರೀ ಪ್ರೊಡಕ್ಷನ್ ಸಹ ಆರಂಭವಾಗಿದ್ದವು. ಸಿನಿಮಾದ ನಾಯಕಿಯ ಡೇಟ್ಸ್ ಸಹ ತೆಗೆದುಕೊಳ್ಳಲಾಗಿತ್ತು. ಆದರೆ ಅದಾದ ಬಳಿಕ ಸಿನಿಮಾದಿಂದ ಶಾರುಖ್ ಖಾನ್ ಹೊರಬೇಕಾಯ್ತು.

ಈ ಬಗ್ಗೆ ಈ ಹಿಂದೆಯೇ ಮಾತನಾಡಿರುವ ಶಾರುಖ್ ಖಾನ್, ‘ನಾನು ಆ ಸಿನಿಮಾದ ಬಗ್ಗೆ ಸಾಕಷ್ಟು ಕೆಲಸ ಮಾಡಿದ್ದೆವು. ನಾನು ಹಾಗೂ ಶಂಕರ್ ಸಾಕಷ್ಟು ಚರ್ಚೆ ಮಾಡಿದ್ದೆವು. ಆ ಸಿನಿಮಾಕ್ಕೆ ನಾವು ಪ್ರಿಯಾಂಕಾ ಚೋಪ್ರಾ ಅವರ ಡೇಟ್ಸ್ ಪಡೆದುಕೊಂಡಿದ್ದೆವು. ‘ಫ್ಯಾಷನ್’ ಸಿನಿಮಾವನ್ನು ಬಿಟ್ಟು ಪ್ರಿಯಾಂಕಾ ಚೋಪ್ರಾ ನಾಲ್ಕು ತಿಂಗಳ ಡೇಟ್ಸ್ ನಮಗೆ ಕೊಟ್ಟಿದ್ದರು. ಆದರೆ ಅಂತಿಮವಾಗಿ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಬಂದು ಸಿನಿಮಾ ಕೈಬಿಡಬೇಕಾಯ್ತು’ ಎಂದಿದ್ದಾರೆ ಶಾರುಖ್ ಖಾನ್.

ಇದನ್ನೂ ಓದಿ:Shah Rukh Khan: ನಟ ಶಾರುಖ್ ಖಾನ್​ಗೆ ಕೊಲೆ ಬೆದರಿಕೆಯೊಡ್ಡಿದ್ದ ವಕೀಲನ ಬಂಧನ

‘ಶಂಕರ್ ಅವರ ಸಿನಿಮಾ ಮೇಕಿಂಗ್ ಪ್ರಕ್ರಿಯೆ ಭಿನ್ನವಾಗಿತ್ತು. ಅವರು ‘ರೋಬೊ’ ಸಿನಿಮಾ ಮಾಡಲು ಎರಡು ವರ್ಷದ ಸಮಯ ಕೇಳಿದರು. ನಾನು ಅಷ್ಟು ಸಾಧ್ಯವಿಲ್ಲ ಎಂದೆ. ನನಗೆ ಒಂದೇ ಸ್ಟ್ರೆಚ್​ನಲ್ಲಿ ಸಿನಿಮಾ ಮುಗಿಸಿಕೊಡಿ ಎಂದು ಕೇಳಿದೆ. ಅವರು, ಇದು ಹೊಸ ರೀತಿಯ ಸಿನಿಮಾ ಸಾಕಷ್ಟು ಬದಲಾವಣೆ ಮಾಡುತ್ತಲೇ ಇರಬೇಕಾಗುತ್ತದೆ. ರೀ ಶೂಟ್​ಗಳು ಸಹ ಇರುತ್ತವೆ ಒಂದೇ ಸ್ಟ್ರೆಚ್​ನಲ್ಲಿ ಮುಗಿಸಿಕೊಡಲು ಸಾಧ್ಯವಾಗುವುದೇ ಇಲ್ಲ ಎಂದರು. ಆದರೆ ಒಬ್ಬ ನಿರ್ಮಾಪಕನಾಗಿ ನನಗೆ ಅದು ಸಾಧ್ಯವಿರಲಿಲ್ಲ. ಇತರೆ ನಟರ ಎರಡು ವರ್ಷದ ಡೇಟ್ಸ್​ಗಳನ್ನು ಹೇಗೆ ತಾನೆ ಕೇಳುವುದು, ಹಾಗಾಗಿ ನಾನು ಹಾಗೂ ಶಂಕರ್ ಇಬ್ಬರೂ ಒಪ್ಪಿ ಆ ಸಿನಿಮಾದಿಂದ ದೂರಾದೆವು’ ಎಂದಿದ್ದಾರೆ ಶಾರುಖ್ ಖಾನ್.

‘ರೋಬೋ ಒಂದು ಅದ್ಭುತವಾದ ಸಿನಿಮಾ. ರಜನೀಕಾಂತ್ ಅವರಿಗೆ ಅದ್ಭುತವಾಗಿ ಆ ಸಿನಿಮಾ ಸೂಟ್ ಆಗಿದೆ. ಒಂದೊಮ್ಮೆ ನಾನು ಮಾಡಿದ್ದಿದ್ದರೆ ಅಷ್ಟು ಚೆನ್ನಾಗಿ ಬರುತ್ತಿತ್ತೊ ಇಲ್ಲವೊ ಗೊತ್ತಿಲ್ಲ. ಆ ಸಿನಿಮಾ ಯಾರು ಮಾಡಬೇಕಿತ್ತು, ಅವರಿಗೇ ಅದು ಸಿಕ್ಕಿದೆ. ನಾನು ಹಾಗೂ ಶಂಕರ್ ಸಹ ಗೆಳೆಯರಾಗಿಯೇ ಉಳಿದಿದ್ದೀವಿ. ಯಾವುದೇ ಮುನಿಸು ಇಲ್ಲದೆ ನಾವು ಆ ಸಿನಿಮಾದಿಂದ ದೂರಾದೆವು. ಮುಂದೆ ಮತ್ತೆಂದಾದರೂ ಕೆಲಸ ಮಾಡೋಣ ಎಂದುಕೊಂಡು ನಾವು ಪರಸ್ಪರ ಬೈ ಹೇಳಿದ್ದೆವು’ ಎಂದಿದ್ದರು ಶಾರುಖ್ ಖಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ