ರೇಖಾಳನ್ನು ಮೊಸಳೆ ಬಾಯಿಗೆ ತಳ್ಳಿ ಹಾಲಿವುಡ್ಗೆ ಪರಾರಿ ಆಗಿದ್ದ ನಟ
Kabir Bedi: ಬಾಲಿವುಡ್ನ ಹಿರಿಯ ನಟಿ ರೇಖಾ ಹಲವಾರು ಪವರ್ಫುಲ್ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರೊಟ್ಟಿಗೆ ನಟಿಸಿದ್ದ ನಟರೊಬ್ಬರು, ತಾವು ರೇಖಾ ಜೊತೆ ಕೆಲಸ ಮಾಡುವಾಗ ನಡೆದ ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ.
ನಟಿ ರೇಖಾ ಹಲವು ಸಿನಿಮಾಗಳಲ್ಲಿ ಪವರ್ ಫುಲ್ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಆದರೆ ರೇಖಾ ತನ್ನ ವೃತ್ತಿಪರ ಜೀವನದಿಂದ ಮಾತ್ರವಲ್ಲದೆ ತನ್ನ ವೈಯಕ್ತಿಕ ಜೀವನದಿಂದಲೂ ಸುದ್ದಿಯಲ್ಲಿ ಇರುತ್ತಾರೆ. ಇಂದಿಗೂ ರೇಖಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಇಂದಿಗೂ ಅವರ ಸಿನಿಮಾದ ದೃಶ್ಯಗಳು ಮತ್ತು ಕೆಲವು ಕಥೆಗಳು ಮುನ್ನೆಲೆಗೆ ಬರುತ್ತವೆ.
‘ಖೂನ್ ಭಾರಿ ಮಾಂಗ್’ ಸಿನಿಮಾದಲ್ಲಿ ರೇಖಾ ಕೂಡ ಪವರ್ ಫುಲ್ ಪಾತ್ರ ನಿರ್ವಹಿಸಿದ್ದಾರೆ. ‘ಖೂನ್ ಭಾರಿ ಮಾಂಗ್’ ಸಿನಿಮಾವನ್ನು ಇಂದಿಗೂ ಹಲವರು ನೆನಪಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ನಟ ಕಬೀರ್ ಬೇಡಿ ರೇಖಾ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಚಿತ್ರದ ದೃಶ್ಯವೊಂದರಲ್ಲಿ ಕಬೀರ್ ಬೇಡಿ ಅವರು ರೇಖಾ ಅವರನ್ನು ಮೊಸಳೆ ಬಾಯಿಗೆ ತಳ್ಳುವ ದೃಶ್ಯ ಇದೆ. ಆ ದೃಶ್ಯವನ್ನು ಅಭಿಮಾನಿಗಳು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಸಂದರ್ಶನವೊಂದರಲ್ಲಿ ಈ ದೃಶ್ಯದ ಬಗ್ಗೆ ಕಬೀರ್ ಬೇಡಿ ಅವರನ್ನು ಕೇಳಲಾಯಿತು. ಇದಕ್ಕೆ ಅವರು ಉತ್ತರಿಸಿದ್ದಾರೆ.
‘ಆ ಸಮಯದಲ್ಲಿ ನಾನು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದೆ. ಫೋನ್ ರಿಂಗಾಯಿತು ಮತ್ತು ರಾಕೇಶ್ ರೋಷನ್ ಮಾತನಾಡುತ್ತಿದ್ದರು. ನಾನು ಒಂದು ಸಿನಿಮಾ ಮಾಡುತ್ತಿದ್ದೇನೆ ಮತ್ತು ನಿನ್ನನ್ನು ನಾಯಕನನ್ನಾಗಿ ಮಾಡಲು ಯೋಚಿಸುತ್ತಿದ್ದೇನೆ ಎಂದು ರೋಷನ್ ಹೇಳಿದರು. ಚಿತ್ರದಲ್ಲಿ ನಾಯಕ ವಿಲನ್ ಆಗುತ್ತಾನೆ… ಯಾವುದೇ ನಟನಿಗೆ ಈ ಪಾತ್ರ ಕೊಟ್ಟರೂ ಅವರು ರಿಜೆಕ್ಟ್ ಮಾಡುತ್ತಿದ್ದಾರೆ ಎಂದು ರಾಕೇಶ್ ಹೇಳಿದ್ದರು’ ಎಂದಿದ್ದಾರೆ ಕಬೀರ್ ಬೇಡಿ.
ಇದನ್ನೂ ಓದಿ:ಮದುವೆಯಾದ ಕೆಲವೇ ತಿಂಗಳಲ್ಲಿ ರೇಖಾ ಪತಿಯ ಆತ್ಮಹತ್ಯೆ; ಸಿಕ್ಕಿತ್ತು ಮಾಟಗಾತಿ ಪಟ್ಟ
‘ಯಾರಿಗಾದರೂ ವಿಲನ್ ಪಾತ್ರ ಕೊಟ್ಟರೆ ಖುಷಿಯಾಗುತ್ತೆ. ಆದರೆ ಸಿನಿಮಾದಲ್ಲಿ ಹೀರೋ ಆಗುವ ಜೊತೆಗೆ ವಿಲನ್ ಆಗಬಲ್ಲವನು ನೀನೇ ಎಂದರು. ಆಗ ನಾನು ಸಿನಿಮಾದಲ್ಲಿ ನಟಿ ಯಾರು ಅಂತ ಕೇಳಿದ್ದೆ. ಅವರು ರೇಖಾಳ ಹೆಸರು ಹೇಳಿದ ತಕ್ಷಣ ಖುಷಿಯಾಗಿ ಒಂದು ಕ್ಷಣವೂ ತಡ ಮಾಡದೆ ಒಪ್ಪಿಕೊಂಡೆ’ ಎಂದಿದ್ದಾರೆ ಕಬೀರ್ ಬೇಡಿ.
‘ನಾನು ಸಿನಿಮಾದಲ್ಲಿ ಕೆಲಸ ಮಾಡಲು ಅಮೆರಿಕಾದಿಂದ ಭಾರತಕ್ಕೆ ಬಂದಿದ್ದೆ. ರೇಖಾಳನ್ನು ಮೊಸಳೆ ಬಾಯಿಗೆ ತಳ್ಳುವ ದೃಶ್ಯ ಇತ್ತು. ಅದನ್ನು ಮಾಡಿ ಮತ್ತೆ ಹಾಲಿವುಡ್ನಲ್ಲಿ ಕೆಲಸ ಮಾಡಲು ಹೊರಟೆ. ಸಿನಿಮಾದಲ್ಲಿ ಕೆಲಸ ಮಾಡಲು ತುಂಬಾ ಖುಷಿಯಾಯಿತು…’ ಎಂದು ಹೇಳಿದ್ದರು ಅವರು.
1988ರಲ್ಲಿ ತೆರೆಕಂಡ ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು. ಈ ಚಿತ್ರ ರೇಖಾ ಮತ್ತು ಕಬೀರ್ ಬೇಡಿ ಅವರ ಬಾಲಿವುಡ್ ವೃತ್ತಿಜೀವನಕ್ಕೆ ಹೊಸ ದಿಕ್ಕನ್ನು ನೀಡಿತು. ಅಂದು ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 6 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:59 pm, Wed, 20 November 24