
Sri Murali
Sri Murali
ಶ್ರೀಮುರಳಿ ಕನ್ನಡ ಚಿತ್ರರಂಗದ ಪ್ರಮುಖ ನಟ. ಡಿಸೆಂಬರ್ 17, 1981 ರಂದು ಬೆಂಗಳೂರಿನಲ್ಲಿ ಜನಿಸಿದ ಅವರು ಕನ್ನಡ ಚಿತ್ರರಂಗದ ಮೇರು ಕುಟುಂಬವಾದ ರಾಜ್ಕುಮಾರ್ ಕುಟುಂಬದೊಂದಿಗೆ ಸಂಬಂಧ ಹೊಂದಿರುವವರು. ಅವರ ತಂದೆ, ಎಸ್.ಎ. ಚಿನ್ನೇಗೌಡ, ಹೆಸರಾಂತ ಚಲನಚಿತ್ರ ನಿರ್ಮಾಪಕ, ಮತ್ತು ಅವರ ಹಿರಿಯ ಸಹೋದರ, ವಿಜಯ್ ರಾಘವೇಂದ್ರ ಸಹ ಕನ್ನಡ ಚಿತ್ರರಂಗದ ಜನಪ್ರಿಯ ನಟ. ಮುರಳಿ ಅವರು ‘ಚಂದ್ರ ಚಕೋರಿ’ (2003) ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಶ್ರೀಮುರಳಿ ಕೆಲವು ಹಿಟ್ ಸಿನಿಮಾಗಳಲ್ಲಿ ನಟಿಸಿದರಾದರೂ ಅವರ ವೃತ್ತಿಜೀವನ 2014 ರ ಬ್ಲಾಕ್‌ಬಸ್ಟರ್ ಸಿನಿಮಾ ‘ಉಗ್ರಂ’ನೊಂದಿಗೆ ಹೊಸ ಎತ್ತರವನ್ನು ತಲುಪಿತು. ಈ ಚಿತ್ರದ ಯಶಸ್ಸು ಅವರಿಗೆ ದೊಡ್ಡ ಅಭಿಮಾನಿ ಬಳಗವನ್ನು ಗಳಿಸಿಕೊಟ್ಟಿತು. ಆ ನಂತರ ಅವರು ರಥಾವರ (2015) ಮತ್ತು ಭರಾಟೆ (2019) ನಂತಹ ಇತರ ಗಮನಾರ್ಹ ಚಲನಚಿತ್ರಗಳಲ್ಲಿ ನಟಿಸಿದರು. 2024 ರಲ್ಲಿ ಬಿಡುಗಡೆ ಆದ ‘ಬಘೀರ’ ಸಿನಿಮಾ ಸಹ ಸೂಪರ್ ಹಿಟ್ ಆಯ್ತು
20 ದಿನಕ್ಕೆ ಒಟಿಟಿಗೆ ಕಾಲಿಟ್ಟ ‘ಬಘೀರ’; ವಿಶೇಷ ಸಾಧನೆ ಮಾಡಿದ ಶ್ರೀಮುರಳಿ ಸಿನಿಮಾ
ಶ್ರೀಮುರಳಿ, ರುಕ್ಮಿಣಿ ವಸಂತ್ ಮೊದಲಾದವರು ನಟಿಸಿರೋ ‘ಬಘೀರ’ ಚಿತ್ರಕ್ಕೆ ಡಾಕ್ಟರ್ ಸೂರಿ ಅವರ ನಿರ್ದೇಶನ ಇದೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಈ ಚಿತ್ರ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ಕನ್ನಡದ ಜೊತೆಗೆ ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ವೀಕ್ಷಣೆಗೆ ಲಭ್ಯವಿದೆ.
- Rajesh Duggumane
- Updated on: Nov 21, 2024
- 12:50 pm