ಲಕ್ಷಕ್ಕೊಬ್ಬರು; ನಟನೆ ಮಾತ್ರವಲ್ಲ ಈ ವಿಶೇಷ ವಿದ್ಯೆ ಕಲಿತಿದ್ದಾರೆ ಅಜಯ್ ರಾವ್
ಪ್ರಸಿದ್ಧ ಕನ್ನಡ ನಟ ಅಜಯ್ ರಾವ್ ಅವರು ತಮ್ಮ ನಟನಾ ಕೌಶಲ್ಯದ ಜೊತೆಗೆ ಒಂದು ವಿಶೇಷ ಶಾಸ್ತ್ರ ಕಲಿತಿದ್ದಾರೆ. ಇದನ್ನು ಶ್ರದ್ಧೇಯಿಂದ ಅಧ್ಯಯನ ಮಾಡಿದ್ದಾರೆ. ಅವರ ನಟನೆಯ ‘ಯುದ್ಧಕಾಂಡ’ ಚಿತ್ರದ ಪ್ರಚಾರದಲ್ಲಿರುವ ಅಜಯ್ ರಾವ್ ಈ ಬಗ್ಗೆ ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಟ ಅಜಯ್ ರಾವ್ (Ajay Rao) ಅವರು ‘ಯುದ್ಧಕಾಂಡ’ ಸಿನಿಮಾ ಬಿಡುಗಡೆಗಾಗಿ ಕಾದಿದ್ದಾರೆ. ಈ ಚಿತ್ರದ ಪ್ರಚಾರದಲ್ಲಿ ಅಜಯ್ ರಾವ್ ಬ್ಯುಸಿ ಇದ್ದಾರೆ. ಈ ಮೊದಲು ಅವರು ಸಿನಿಮಾ ನಿರ್ಮಾಣವನ್ನು ಕೂಡ ಮಾಡಿದ್ದರು. ಅಜಯ್ ರಾವ್ ಅವರಿಗೆ ಒಂದು ವಿಶೇಷ ವಿದ್ಯೆ ಬರುತ್ತದೆ. ಈ ಬಗ್ಗೆ ಅಜಯ್ ರಾವ್ ರ‍್ಯಾಪಿಡ್ ರಶ್ಮಿ ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆಯುತ್ತಾ ಇದೆ.
ಅಜಯ್ ರಾವ್ ಅವರು ಉತ್ತಮವಾಗಿ ನಟಿಸುತ್ತಾರೆ. ಇದರ ಜೊತೆಗೆ ಅವರಿಗೆ ಜ್ಯೋತಿಷ್ಯ ಶಾಸ್ತ್ರ ಬರುತ್ತದೆ. ಇದನ್ನು ಅವರು ಅಧ್ಯಯನ ಮಾಡಿದ್ದಾರೆ ಅನ್ನೋದು ವಿಶೇಷ. ಹಾಗಂತ ಅವರು ಇದರಲ್ಲಿ ಪಂಡಿತರೇನು ಅಲ್ಲ. ಬೇಸಿಕ್ ವಿಚಾರಗಳನ್ನು ಅವರು ಕಲಿತುಕೊಂಡಿದ್ದಾರೆ. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
‘ನಾನು ಜ್ಯೋತಿಷ್ಯದಲ್ಲಿ ಬೇಸಿಕ್ ಕಲಿತಿದ್ದೇನೆ. ತುಂಬಾ ಮೇಧಾವಿ ಅಲ್ಲ. ಇದು ಆಸಕ್ತಿದಾಯಕ ವಿಜ್ಞಾನ. ಆದರೆ, ಅದನ್ನು ಫಾಲೋ ಮಾಡಬಾರದು’ ಎಂದು ಅಜಯ್ ರಾವ್ ಅವರು ಹೇಳಿದ್ದಾರೆ. ಈ ಮಾತನ್ನು ಕೇಳಿ ರ‍್ಯಾಪಿಡ್ ರಶ್ಮಿ ಶಾಕ್ ಆದರು. ಆದರೆ, ಅಜಯ್ ರಾವ್ ಅವರು ಇದಕ್ಕೆ ಸ್ಪಷ್ಟನೆ ಕೊಟ್ಟರು. ಏಕೆ ಅದನ್ನು ಫಾಲೋ ಮಾಡಬಾರದು ಎಂಬುದನ್ನು ವಿವರಿಸಿದರು.
View this post on Instagram
‘ಮಳೆ ಬರುತ್ತಿದೆ. ನಿಮ್ಮ ಪರಿಹಾರಗಳಿಗೆ ಶಾಸ್ತ್ರಿಗಳ ಹತ್ತಿರ ಹೋಗುತ್ತೀರಿ. ಪರಿಹಾರ-ಪೂಜೆಗಳನ್ನು ಅವರು ಹೇಳುತ್ತಾರೆ. ಆ ಬಳಿಕ ಒಂದು ಛತ್ರಿ ಸಿಗಬಹುದೇ ಹೊರತು, ಮಳೆಯಿಂದ ತಪ್ಪಿಸಿಕೊಳ್ಳೋಕೆ ಸಾಧ್ಯವಿಲ್ಲ. ಜ್ಯೋತಿಷ್ಯ ಎಂಬುದು ಸಣ್ಣ ಬೆಂಬಲ. ಕಷ್ಟದ ಸಮಯದಲ್ಲಿ ಒಂದು ಕವಚ ಬರುತ್ತದೆ. ಆ ಕಾಲವನ್ನು ಯಾವಾಗಲೂ ಬದಲಾಯಿಸೋಕೆ ಸಾಧ್ಯವಿಲ್ಲ’ ಎಂದು ಅಜಯ್ ರಾವ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ನಿಂದು ಒಂದೇ ವರ್ಷಕ್ಕೆ ಡಿವೋರ್ಸ್ ಕಣೋ’; ವಿವಾಹದ ಬಳಿಕ ಅಜಯ್ ರಾವ್ ಕೇಳಿದ ಮಾತಿದು
ಅಜಯ್ ರಾವ್ ಅವರು ಚಿತ್ರರಂಗದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಎಕ್ಸ್ಕ್ಯೂಸ್ ಮಿ’, ‘ತಾಜ್ ಮಹಲ್’ ಮೊದಲಾದ ಸಿನಿಮಾಗಳನ್ನು ನೀಡಿದ್ದಾರೆ. ಈಗ ಅವರು ‘ಯುದ್ಧಕಾಂಡ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಾ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:00 am, Wed, 2 April 25