AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂದರ್ಶನ: ಕನಸಿನ ಕೂಸು ‘ಗಲ್ಲಿ ಕಿಚನ್’ಗೆ ಶೈನ್​ ಶೆಟ್ಟಿ ವಿದಾಯ ಹೇಳಿದ್ದೇಕೆ? ಚಾಲೆಂಜ್​ಗಳನ್ನು ವಿವರಿಸಿದ ನಟ

ಶೈನ್ ಶೆಟ್ಟಿ ಅವರು ಆರು ವರ್ಷಗಳ ಕಾಲ ಯಶಸ್ವಿಯಾಗಿ ನಡೆಸುತ್ತಿದ್ದ 'ಗಲ್ಲಿ ಕಿಚನ್' ಹೋಟೆಲ್ ಉದ್ಯಮವನ್ನು ಮುಚ್ಚಲು ನಿರ್ಧರಿಸಿದ್ದಾರೆ. ಚಲನಚಿತ್ರದಲ್ಲಿ ಬ್ಯುಸಿಯಾಗಿರುವುದರಿಂದ ಹೋಟೆಲ್‌ಗೆ ಸಮರ್ಪಕ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ಮುಖ್ಯ ಕಾರಣ. ಉದ್ಯಮವನ್ನು ಸೂಕ್ತವಾಗಿ ನಿರ್ವಹಿಸಲು ಸಂಪೂರ್ಣ ಗಮನ ಅವಶ್ಯಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಂದರ್ಶನ: ಕನಸಿನ ಕೂಸು ‘ಗಲ್ಲಿ ಕಿಚನ್’ಗೆ ಶೈನ್​ ಶೆಟ್ಟಿ ವಿದಾಯ ಹೇಳಿದ್ದೇಕೆ? ಚಾಲೆಂಜ್​ಗಳನ್ನು ವಿವರಿಸಿದ ನಟ
ಶೈನ್ ಶೆಟ್ಟಿ
ರಾಜೇಶ್ ದುಗ್ಗುಮನೆ
|

Updated on:Apr 02, 2025 | 3:06 PM

Share

ನಟ ಶೈನ್ ಶೆಟ್ಟಿ (Shine Shetty) ಅವರು ಆರು ವರ್ಷಗಳ ಹಿಂದೆ ‘ಗಲ್ಲಿ ಕಿಚನ್’ (Galli Kitchen) ಹೆಸರಿನ ಫುಡ್ ಟ್ರಕ್ ಆರಂಭಿಸಿದ್ದರು. ಆ ಬಳಿಕ ಇದೇ ಹೆಸರಲ್ಲಿ ಅವರು ಹೋಟೆಲ್ ಕೂಡ ಆರಂಭಿಸಿದರು. ಆದರೆ, ಈಗ ‘ಗಲ್ಲಿ ಕಿಚನ್’ ಪಯಣಕ್ಕೆ ವಿದಾಯ ಹೇಳುವ ಸಮಯ ಬಂದಿದೆ. ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಹಿಂದೆ ಸಾಕಷ್ಟು ಚಾಲೆಂಜ್​ಗಳು ಇವೆ ಎಂದು ಶೈನ್ ಶೆಟ್ಟಿ ಅವರು ‘ಟಿವಿ9 ಕನ್ನಡ ಡಿಜಿಟಲ್’ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

‘ಗಲ್ಲಿ ಕಿಚನ್’ ಶೈನ್ ಶೆಟ್ಟಿ ಅವರ ಜೀವನದಲ್ಲಿ ಪ್ರಮುಖ ಪಾತ್ರವಹಿಸಿದೆ. ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಇದು ತಂದಿದೆ. ಈಗ ಅದನ್ನು ಕೊನೆಗೊಳಿಸುವ ನಿರ್ಧಾರಕ್ಕೆ ಶೈನ್ ಶೆಟ್ಟಿ ಬಂದಿದ್ದಾರೆ. ಶೈನ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಈ ರೀತಿಯ ಹೋಟೆಲ್ ಉದ್ಯಮ ನಡೆಸುವಾಗ ಗಮನ ಸಂಪೂರ್ಣವಾಗಿ ಅಲ್ಲಿಯೇ ಇರಬೇಕು. ಅದು ಸಾಧ್ಯವಾಗದೇ ಇರದ ಕಾರಣಕ್ಕೆ ಅವರು ‘ಗಲ್ಲಿ ಕಿಚನ್’ ಕೊನೆ ಗೊಳಿಸುತ್ತಿದ್ದಾರೆ.

ಇದನ್ನೂ ಓದಿ
Image
52ನೇ ವಯಸ್ಸಿನಲ್ಲೂ ಸಿಂಗಲ್; ಈ ಸ್ಟಾರ್ ನಟಿ ಮದುವೆ ಆಗದಿರಲು ಅಜಯ್ ಕಾರಣ್
Image
ಅಜಯ್ ದೇವಗನ್ ಐಷಾರಾಮಿ ಜೀವನ; 60 ಕೋಟಿ ಮನೆ, ದುಬಾರಿ ಕಾರು, ಬಿಸ್ನೆಸ್
Image
ಪಾತಾಳ ಕಾಣುತ್ತಿದೆ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಕಲೆಕ್ಷನ್
Image
ನಟನೆ ಮಾತ್ರವಲ್ಲ ಈ ವಿಶೇಷ ವಿದ್ಯೆ ಕಲಿತಿದ್ದಾರೆ ಅಜಯ್ ರಾವ್

‘ಹೋಟೆಲ್ ಉದ್ಯಮದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ನಾವೇ ಅಲ್ಲಿ ಇಲ್ಲದೆ ಅದನ್ನು ನಡೆಸೋದು ಬಹಳ ಕಷ್ಟ. ನಮ್ಮ ಪರವಾಗಿ ಇನ್ನೊಬ್ಬರು ನಡೆಸಬೇಕು ಎಂದರೆ ಅವರು ನಮ್ಮ ರೀತಿಯೇ ನಡೆಸುತ್ತಾರೆ ಎನ್ನುವ ನಂಬಿಕೆ ಇರೋದಿಲ್ಲ. ನಾನೇ ಅಲ್ಲಿ ತೊಡಗಿಸಿಕೊಳ್ಳೋಣ ಎಂದರೆ ಸಿನಿಮಾ ಕೆಲಸ. ಇಷ್ಟು ವರ್ಷ ಸಾಕಷ್ಟು ಚಾಲೆಂಜ್​​ಗಳನ್ನು ಎದುರಿಸಿ ಇಲ್ಲಿಯವರೆಗೆ ಬಂದೆವು. ಈಗ ಪಯಣ ಕೊನೆ ಮಾಡುವ ಸಮಯ’ ಎಂದಿದ್ದಾರೆ ಶೈನ್ ಶೆಟ್ಟಿ.

ಸದ್ಯ ಶೈನ್ ಶೆಟ್ಟ ನಟನೆಯ ‘ಜಸ್ಟ್ ಮ್ಯಾರೀಡ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಇನ್ನೂ ಕೆಲವು ಚಿತ್ರಗಳು ಅವರ ಕೈಯಲ್ಲಿದ್ದು ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಇವುಗಳ ಮಧ್ಯೆ ಹೋಟೆಲ್ ಉದ್ಯಮಕ್ಕೆ ಸಮಯ ನೀಡಬೇಕು, ಅದನ್ನು ಉತ್ತಮ ರೀತಿಯಲ್ಲಿ ನಡೆಸಬೇಕು ಎಂದರೆ ಅದು ದೊಡ್ಡ ಚಾಲೆಂಜ್ ಅನ್ನೋದು ಶೈನ್ ಶೆಟ್ಟಿ ಅಭಿಪ್ರಾಯ.

ಇದನ್ನೂ ಓದಿ: ಗಲ್ಲಿ ಕಿಚನ್ ಪಯಣಕ್ಕೆ ವಿದಾಯ; ಶೈನ್ ಶೆಟ್ಟಿ ಭಾವುಕ ಪೋಸ್ಟ್ 

‘ಆರು ವರ್ಷಗಳಕಾಲ ನಡೆದ ಉದ್ಯಮ. ಇದನ್ನು ಕೊನೆ ಮಾಡಬೇಕು ಎಂದಾಗ ಕಷ್ಟ ಆಗುತ್ತದೆ. ನಮ್ಮ ಜೀವನ ಚೆನ್ನಾಗಿ ನಡೆದುಕೊಂಡು ಹೋಗುವಂತೆ ಮಾಡಿ ಸಾಥ್ ನೀಡಿದ ಉದ್ಯಮ ಇದು. ನಮ್ಮನ್ನು ಒಂದು ಮಟ್ಟಕ್ಕೆ ತಂದು ನಿಲ್ಲಿಸಿದೆ. ನಾವು ನೋಡಿಕೊಳ್ಳಲಾಗದೆ ಅದು ಇನ್ನೇನೋ ಆಗುವುದಕ್ಕಿಂತ, ನಮ್ಮ ರೀತಿ ಅನಿವಾರ್ಯತೆ ಇರುವವರಿಗೆ ಅದನ್ನು ಹಸ್ತಾಂತರಿಸೋದು ಉತ್ತಮ’ ಎಂಬುದು ಶೈನ್ ಶೆಟ್ಟಿ ಮಾತು.

‘ಗಲ್ಲಿ ಕಿಚನ್’ ನಡೆಸುತ್ತಿದ್ದ ಸ್ಥಳವನ್ನು ಮಾತ್ರ ಶೈನ್ ಶೆಟ್ಟಿ ನೀಡಿದ್ದಾರೆ. ಅವರು ‘ಗಲ್ಲಿ ಕಿಚನ್’ ಹೆಸರನ್ನು ನೀಡಿಲ್ಲ. ಹೀಗಾಗಿ, ‘ಗಲ್ಲಿ ಕಿಚನ್’ ಹೆಸರಿನ ಟೈಟಲ್ ಶೈನ್ ಶೆಟ್ಟಿ ಬಳಿಯೇ ಉಳಿದುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:05 pm, Wed, 2 April 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ