ಚಿತ್ರರಂಗಕ್ಕೆ ಮಗ ರಿಷಿನ ಪರಿಚಯಿಸಿದ ಪ್ರಭುದೇವ; ಹೇಗಿದೆ ನೋಡಿ ಡ್ಯಾನ್ಸ್ ಸ್ಟೆಪ್
ಪ್ರಭುದೇವ ಅವರು ತಮ್ಮ ಮಗ ರಿಷಿ ದೇವನನ್ನು ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಪರಿಚಯಿಸಿದ್ದಾರೆ. ರಿಷಿ ತನ್ನ ತಂದೆಯಂತೆಯೇ ಉತ್ತಮ ನರ್ತಕ. ಪ್ರಭುದೇವರ ಕುಟುಂಬದಲ್ಲಿ ನೃತ್ಯ ಪರಂಪರೆ ಹಲವು ತಲೆಮಾರುಗಳಿಂದಲೂ ಮುಂದುವರಿಯುತ್ತಿದೆ. ರಿಷಿ ಕೂಡ ಈ ಪರಂಪರೆಯನ್ನು ಮುಂದುವರಿಸುವ ನಿರೀಕ್ಷೆಯಿದೆ. ಇದರಿಂದ ಅಭಿಮಾನಿಗಳು ಉತ್ಸಾಹಭರಿತರಾಗಿದ್ದಾರೆ.

ಹೀರೋಗಳು, ನಿರ್ದೇಶಕರು ತಮ್ಮ ಮಕ್ಕಳನ್ನು ಪರಿಚಯಿಸೋದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಅನೇಕ ಸ್ಟಾರ್ ಹೀರೋಗಳು, ನಿರ್ದೇಶಕರು ಈ ರೀತಿ ಮಾಡಿದ್ದಾರೆ. ಈಗ ನಟ, ಕೊರಿಯೋಗ್ರಾಫರ್, ನಿರ್ದೇಶಕ ಪ್ರಭುದೇವ ಅವರು ತಮ್ಮ ಮಗ ರಿಷಿಯನ್ನು ಪರಿಚಯಿಸಿದ್ದಾರೆ. ಈ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ರಿಷಿ ಅವರು ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ.
ಇತ್ತೀಚೆಗೆ ಪ್ರಭುದೇವ ಅವರು ಚೆನ್ನೈನಲ್ಲಿ ಡ್ಯಾನ್ಸ್ ಕಾನ್ಸರ್ಟ್ ನಡೆಸಿದ್ದಾರೆ. ಈ ವೇದಿಕೆ ಮೇಲೆ ಮಗನ ಪರಿಚಯಿಸಿದ್ದಾರೆ. ತಂದೆಯ ರೀತಿಯೇ ರಿಷಿ ದೇವ ಕೂಡ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಪ್ರಭುದೇವ ಅವರಿಗೆ ಮಗನ ಬಗ್ಗೆ ಹೆಮ್ಮೆ ಇದೆ. ತಂದೆಯಂತೆ ಸ್ಟೆಪ್ಗಳನ್ನು ಕಲಿತು ರಿಷಿ ಡ್ಯಾನ್ಸ್ ಮಾಡುವ ಪ್ರಯತ್ನ ಮಾಡಿದ್ದಾರೆ.
‘ನನ್ನ ಮಗ ರಿಷಿ ದೇವನ ಪರಿಚಯಿಸಲು ಹೆಮ್ಮೆ ಆಗುತ್ತಿದೆ. ಅವನನ್ನು ಮೊದಲ ಬಾರಿಗೆ ನಿಮಗೆ ಪರಿಚಯಿಸುತ್ತಿದ್ದೇವೆ. ಇದು ಕೇವಲ ಡ್ಯಾನ್ಸ್ ಅಲ್ಲ, ಲೆಗಸಿ, ಪ್ಯಾಷನ್. ಪ್ರಯಾಣ ಈಗಷ್ಟೇ ಆರಂಭ ಆಗುತ್ತಿದೆ’ ಎಂದು ಮಗ ಡ್ಯಾನ್ಸ್ ಮಾಡುವ ವಿಡಿಯೋಗೆ ಪ್ರಭುದೇವ ಕ್ಯಾಪ್ಶನ್ ನೀಡಿದ್ದಾರೆ. ಈ ವಿಡಿಯೋನ ಅನೇಕರು ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಪ್ರಭುದೇವ ಅವರ ತಂದೆ ಸುಂದರಮ್ ಮಾಸ್ಟರ್ ಅವರ ಪರಿಚಯದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರು ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿದ್ದರು. ನಿವೃತ್ತಿ ಪಡೆದ ಬಳಿಕವೂ ಅನೇಕ ರಿಯಾಲಿಟಿ ಶೋಗೆ ಜಡ್ಜ್ ಆಗಿ ಕೆಲಸ ಮಾಡಿದ್ದರು. ಅವರು ಸಾವಿರಕ್ಕೂ ಅಧಿಕ ಸಿನಿಮಾಗಳ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಪ್ರಭುದೇವ ಅವರ ಸಹೋದರ ರಾಜು ಸುಂದರಂ ಅವರು ನ್ಯಾಷನಲ್ ಅವಾರ್ಡ್ ವಿನ್ನಿಂಗ್ ಕೊರಿಯೋಗ್ರಾಫರ್. ಪ್ರಭುದೇವ ಅವರ ಸಹೋದರ ನಾಗೇಂದ್ರ ಪ್ರಸಾದ್ ಕೂಡ ಡ್ಯಾನ್ಸರ್.
ಇದನ್ನೂ ಓದಿ: 27 ವರ್ಷಗಳ ಬಳಿಕ ಒಂದಾಗುತ್ತಿರುವ ಪ್ರಭುದೇವ-ಕಾಜೊಲ್, ಈಗ ಆ ಪ್ರೀತಿ ಉಳಿದಿಲ್ಲ
ಈಗ ಈ ಕುಟುಂಬದ ಮತ್ತೊಬ್ಬರು ಡ್ಯಾನ್ಸ್ನ ನಂಬಿ ಬರುತ್ತಿದ್ದಾರೆ. ಪ್ರಭುದೇವ ಹಾಗೂ ರಮಲತಾ ಈ ಮೊದಲು ವಿವಾಹ ಆಗಿದ್ದರು. ಈ ದಂಪತಿಗೆ ಜನಿಸಿದ್ದು ರಿಷಿ. ಈಗ ರಮಲತಾ ಹಾಗೂ ಪ್ರಭುದೇವ ಬೇರೆ ಆಗಿದ್ದಾರೆ. ಡಿವೋರ್ಸ್ ಪಡೆದು ದೂರ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.