AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

27 ವರ್ಷಗಳ ಬಳಿಕ ಒಂದಾಗುತ್ತಿರುವ ಪ್ರಭುದೇವ-ಕಾಜೊಲ್, ಈಗ ಆ ಪ್ರೀತಿ ಉಳಿದಿಲ್ಲ

27 ವರ್ಷಗಳ ಹಿಂದೆ ‘ಮಿನ್ಸರ ಕನವು’ ಸಿನಿಮಾನಲ್ಲಿ ಜೋಡಿಯಾಗಿ ನಟಿಸಿದ್ದ ಕಾಜೋಲ್ ಹಾಗೂ ಪ್ರಭುದೇವ ಈಗ ಮತ್ತೆ ಒಂದೇ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆದರೆ ಈಗ ಆ ಪ್ರೀತಿ ಉಳಿದಿಲ್ಲ!

27 ವರ್ಷಗಳ ಬಳಿಕ ಒಂದಾಗುತ್ತಿರುವ ಪ್ರಭುದೇವ-ಕಾಜೊಲ್, ಈಗ ಆ ಪ್ರೀತಿ ಉಳಿದಿಲ್ಲ
ಮಂಜುನಾಥ ಸಿ.
|

Updated on: May 28, 2024 | 6:08 PM

Share

‘ವೆನ್ನಿಲವೇ ವೆನ್ನಿಲವೇ’ ಹಾಡು ಸಿನಿಮಾ ಪ್ರೀಯರ ಮನದಲ್ಲಿ ಇನ್ನೂ ಗುನುಗುಟ್ಟುತ್ತಿದೆ. 27 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ತಮಿಳಿನ ‘ಮಿನ್ಸಾರ ಕನವು’ ಸಿನಿಮಾದ ಈ ಹಾಡು ಎಆರ್ ರೆಹಮಾನ್​ರ (AR Rahaman) ಆಲ್​ಟೈಮ್ ಹಿಟ್ ಹಾಡುಗಳಲ್ಲಿ ಒಂದು. ‘ಮಿನ್ಸಾರ ಕನವು’ ಸಿನಿಮಾ ಸಹ ತಮಿಳಿನ ಕ್ಲಾಸಿಕ್ ಲವ್ ಸ್ಟೋರಿ ಸಿನಿಮಾಗಳಲ್ಲಿ ಒಂದು. ಬಾಲಿವುಡ್ ನಟಿ ಕಾಜೋಲ್​ರ ಮೊದಲ ತಮಿಳು ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ಪ್ರಭುದೇವ ಹಾಗೂ ಅರವಿಂದ ಸ್ವಾಮಿಯ ಜೊತೆ ನಟಿಸಿದ್ದರು. ಆ ಸಿನಿಮಾದಲ್ಲಿ ಕಾಜೋಲ್ ಹಾಗೂ ಪ್ರಭುದೇವರ ಕೆಮಿಸ್ಟ್ರಿ ಸಖತ್ ಹಿಟ್ ಆಗಿತ್ತು. ಇದೀಗ 27 ವರ್ಷಗಳ ಬಳಿಕ ಕಾಜೋಲ್ ಹಾಗೂ ಪ್ರಭುದೇವ ಮತ್ತೆ ಒಂದಾಗುತ್ತಿದ್ದಾರೆ.

‘ಮಿನ್ಸಾರ ಕನವು’ ಸಿನಿಮಾದಲ್ಲಿ ಕಾಜೋಲ್ ಹಾಗೂ ಪ್ರಭುದೇವ ನಡುವಿನ ಲವ್ ಸ್ಟೋರಿ ಸೂಪರ್ ಹಿಟ್ ಆಗಿತ್ತು. ಆದರೆ ಈಗ 27 ವರ್ಷಗಳ ಬಳಿಕ ಆ ಪ್ರೀತಿ ಉಳಿದಿಲ್ಲ. ಈಗ ಈ ಇಬ್ಬರು ನಟಿಸುತ್ತಿರುವ ಸಿನಿಮಾ ರೊಮ್ಯಾಂಟಿಕ್ ಸಿನಿಮಾ ಅಲ್ಲ ಬದಲಿಗೆ ಪಕ್ಕಾ ಆಕ್ಷನ್ ಸಿನಿಮಾ. ಸಿನಿಮಾನಲ್ಲಿ ಈ ಇಬ್ಬರು ಪರಸ್ಪರ ಎದುರಾಳಿಗಳು!

ಇದನ್ನೂ ಓದಿ:ಹೊಸ ಸಿನಿಮಾ ಘೋಷಿಸಿದ ಕರಣ್ ಜೋಹರ್; ಮತ್ತೆ ಒಂದಾಗಲಿದ್ದಾರೆ ಶಾರುಖ್​-ಕಾಜೋಲ್?

ತೆಲುಗಿನ ಚರಣ್ ತೇಜ್ ಉಪ್ಪಲಪಟ್ಟಿ ನಿರ್ದೇಶಿಸುತ್ತಿರುವ ಮೊದಲ ಹಿಂದಿ ಸಿನಿಮಾ ‘ಮಹಾರಾಗ್ನಿ’ ಸಿನಿಮಾನಲ್ಲಿ ಕಾಜೋಲ್ ಹಾಗೂ ಪ್ರಭುದೇವ ಒಟ್ಟಿಗೆ ನಟಿಸುತ್ತಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಕಾಜೋಲ್ ಅಪರೂಪಕ್ಕೆ ಪಕ್ಕಾ ಆಕ್ಷನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ರೀತಿಯ ಪಾತ್ರ ಕಾಜೋಲ್​ಗೆ ಇದು ಮೊದಲು. ಪ್ರಭುದೇವ, ಸ್ಟೈಲಿಷ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾನಲ್ಲಿ ಇನ್ನೂ ಕೆಲವು ನಟರಿದ್ದು, ಇದು ಪಕ್ಕಾ ಆಕ್ಷನ್ ಸಿನಿಮಾ ಆಗಿರುವುದು ಟೀಸರ್​ನಿಂದಲೇ ತಿಳಿದು ಬರುತ್ತಿದೆ.

ಕಾಜೋಲ್ ಅಂತೂ ಕತ್ತಿ ಹಿಡಿದು ಸಂಹಾರಕ್ಕೆ ಇಳಿದಿದ್ದಾರೆ. ಸಿನಿಮಾನಲ್ಲಿ ನಸೀರುದ್ಧೀನ್ ಶಾ, ಸಂಯುಕ್ತ ಮೆನನ್, ಚಾಯಾ ಕದಮ್, ಸೇರಿದಂತೆ ಇನ್ನೂ ಕೆಲವು ಪ್ರಮುಖ ಕಲಾವಿದರಿದ್ದಾರೆ. ಈ ಹಿಂದೆ ‘ಮಳ್ಳಿ ಮೊದಲೈಂದಿ’, ‘ಸ್ಪೈ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಚರಣ್ ತೇಜ್ ಉಪ್ಪಲಪಟ್ಟಿ ಮೊದಲ ಬಾರಿಗೆ ಹಿಂದಿ ಸಿನಿಮಾ ನಿರ್ದೇಶಿಸುತ್ತಿದ್ದು, ತನ್ನ ನೆಚ್ಚಿನ ನಟರನ್ನು ಒಂದು ಸಿನಿಮಾಕ್ಕಾಗಿ ಸೇರಿಸಿದ್ದಾರೆ. ‘ಅನಿಮಲ್’ ಸಿನಿಮಾಕ್ಕೆ ಸಂಗೀತ ನೀಡಿದ್ದ ಹರ್ಷವರ್ಧನ್ ರಾಮೇಶ್ವರನ್ ಈ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ