AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಕರ್​ನ ಅಸಲಿ ಚಿನ್ನದಿಂದ ಮಾಡಿದ್ದು ಎಂದು ಭಾವಿಸಿ ರೆಹಮಾನ್ ತಾಯಿ ಏನು ಮಾಡಿದ್ರು ಗೊತ್ತಾ?

ರೆಹಮಾನ್ ಅವರ ಬಳಿ 2 ಆಸ್ಕರ್, 2 ಗ್ರ್ಯಾಮಿ, 1 BAFTA, 1 ಗೋಲ್ಡನ್ ಗ್ಲೋಬ್, 6 ರಾಷ್ಟ್ರ ಪ್ರಶಸ್ತಿ, 32 ಫಿಲ್ಮ್​ಫೇರ್ ಅವಾರ್ಡ್​ಗಳು ಸಿಕ್ಕಿವೆ. ಇದೆಲ್ಲ ಅವಾರ್ಡ್​ಗಳನ್ನು ಅವರು ಚೆನ್ನೈನ ಮನೆಯ ವಿಶೇಷ ರೂಂನಲ್ಲಿ ಇರಿಸಿದ್ದಾರೆ. ‘ಕೆಲವು ಅವಾರ್ಡ್​ಗಳು ನನ್ನ ಬಳಿ ಬಂದೇ ಇಲ್ಲ’ ಎಂದಿದ್ದಾರೆ ರೆಹಮಾನ್.

ಆಸ್ಕರ್​ನ ಅಸಲಿ ಚಿನ್ನದಿಂದ ಮಾಡಿದ್ದು ಎಂದು ಭಾವಿಸಿ ರೆಹಮಾನ್ ತಾಯಿ ಏನು ಮಾಡಿದ್ರು ಗೊತ್ತಾ?
ರೆಹಮಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on:May 22, 2024 | 2:19 PM

Share

ಸಂಗೀತ ನಿರ್ದೇಶಕ, ಗಾಯಕ ಎಆರ್ ರೆಹಮಾನ್ (AR Rahaman) ಅವರು ಚಿತ್ರರಂಗದಲ್ಲಿ 3 ದಶಕ ಕಳೆದಿದ್ದಾರೆ. ಅವರ ಅಭಿಮಾನಿ ಬಳಗ ದಿನ ಕಳೆದಂತೆ ಹಿರಿದಾಗುತ್ತಲೇ ಇದೆ. ಅವರಿಗೆ ಆಸ್ಕರ್, ಗ್ರ್ಯಾಮಿ, ಗೋಲ್ಡನ್ ಗ್ಲೋಬ್ ಸೇರಿ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕಿವೆ. ಅದೆಲ್ಲವನ್ನೂ ಎಲ್ಲಿ ಇಟ್ಟಿದ್ದಾರೆ ಎಂದು ಇತ್ತೀಚೆಗೆ ರೆಹಮಾನ್ ಅವರಿಗೆ ಕೇಳಲಾಯಿತು. ಇದಕ್ಕೆ ಎಆರ್​ ರೆಹಮಾನ್ ಅವರು ನೀಡಿದ ಉತ್ತರ ಕೇಳಿ ಅನೇಕರಿಗೆ ಅಚ್ಚರಿ ಎನಿಸಿದೆ. ಆಸ್ಕರ್ ಸೇರಿ ಅನೇಕ ವಿದೇಶಿ ಅವಾರ್ಡ್​ಗಳಿಗೆ ಚಿನ್ನದ ಲೇಪನ ಇರುತ್ತದೆ. ಸಂಪುರ್ಣ ಅವಾರ್ಡ್ ಚಿನ್ನದಿಂದ ಮಾಡಲ್ಪಟ್ಟಿದ್ದು ಎಂದು ರೆಹಮಾನ್ ತಾಯಿ ಕರೀಮಾ ಬೇಗಂ ಭಾವಿಸಿದ್ದರಂತೆ.

ರೆಹಮಾನ್ ಅವರ ಬಳಿ 2 ಆಸ್ಕರ್, 2 ಗ್ರ್ಯಾಮಿ, 1 BAFTA, 1 ಗೋಲ್ಡನ್ ಗ್ಲೋಬ್, 6 ರಾಷ್ಟ್ರ ಪ್ರಶಸ್ತಿ, 32 ಫಿಲ್ಮ್​ಫೇರ್ ಅವಾರ್ಡ್​ಗಳು ಸಿಕ್ಕಿವೆ. ಇದೆಲ್ಲ ಅವಾರ್ಡ್​ಗಳನ್ನು ಅವರು ಚೆನ್ನೈನ ಮನೆಯ ವಿಶೇಷ ರೂಂನಲ್ಲಿ ಇರಿಸಿದ್ದಾರೆ. ‘ಕೆಲವು ಅವಾರ್ಡ್​ಗಳು ನನ್ನ ಬಳಿ ಬಂದೇ ಇಲ್ಲ. ಬಹುಶಃ ನಿರ್ದೇಶಕರು ಅದನ್ನು ಸ್ಮರಣಿಕೆ ಎನ್ನುವ ಅರ್ಥದಲ್ಲಿ ಅದನ್ನು ಇಟ್ಟುಕೊಂಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ನಾನು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ದುಬೈನಲ್ಲಿ ಇಟ್ಟಿದ್ದೇನೆ. ನನ್ನ ತಾಯಿ ಟವೆಲ್​ನಲ್ಲಿ ಸುತ್ತಿ ದುಬೈ ಮನೆಯಲ್ಲಿ ಇಟ್ಟಿದ್ದರು. ಅವುಗಳು ಅಸಲಿ ಚಿನ್ನದಿಂದ ಮಾಡಿದ್ದು ಎಂದು ಅವರು ಭಾವಿಸಿದ್ದರು. ಅವರು ತೀರಿ ಹೋದ ನಂತರ ಆ ಅವಾರ್ಡ್​ಗಳನ್ನು ನಾನು ದುಬೈ ಫಿರ್ದೌಸ್ ಸ್ಟುಡಿಯೋಗೆ ನೀಡಿದ್ದೇನೆ. ಇದೊಂದು ಒಳ್ಳೆಯ ಶೋಕೇಸ್’ ಎಂದಿದ್ದಾರೆ ಅವರು.

ಭಾರತದ ಯಾವುದೇ ಮ್ಯೂಸಿಕ್ ಡೈರೆಕ್ಟರ್​ ಆಸ್ಕರ್ ಗೆದ್ದಿರಲಿಲ್ಲ. ಭಾರತದಲ್ಲಿ ಮೊದಲು ಆಸ್ಕರ್ ಗೆದ್ದ ಖ್ಯಾತಿ ಇವರಿಗೆ ಇದೆ. ‘ಸ್ಲಮ್​ಡಾಗ್ ಮಿಲಿಯನೇರ್’ ಚಿತ್ರದ ಹಾಡುಗಳಿಗೆ ಅವರಿಗೆ ಅವಾರ್ಡ್ ಸಿಕ್ಕಿದೆ. ಈ ಚಿತ್ರದ ‘ಜೈ ಹೋ’ ಹಾಡು ಸೂಪರ್ ಹಿಟ್ ಎನಿಸಿಕೊಂಡಿತ್ತು.

ಇದನ್ನೂ ಓದಿ: ಎಆರ್​ ರೆಹಮಾನ್ ಸಿನಿ ಜರ್ನಿ ಆರಂಭಿಸಿದ್ದು ಹೇಗೆ? ಅವರ ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ?

ಎಆರ್​ ರೆಹಮಾನ್ ಅವರು ಸದ್ಯ ಸಖತ್ ಬ್ಯುಸಿ ಇದ್ದಾರೆ. ಹಿಂದಿಯ ‘ರಾಮಾಯಣ’, ರಾಮ್ ಚರಣ್ ನಟನೆಯ 16ನೇ ಸಿನಿಮಾ ಸೇರಿ ಒಟ್ಟೂ 10ಕ್ಕೂ ಅಧಿಕ ಸಿನಿಮಾಗಳ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ಇದರ ಜೊತೆ ಮ್ಯೂಸಿಕ್ ಕಾನ್ಸರ್ಟ್​​ಗಳನ್ನು ಕೂಡ ಮಾಡುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:19 am, Wed, 22 May 24

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ