ಎಆರ್​ ರೆಹಮಾನ್ ಸಿನಿ ಜರ್ನಿ ಆರಂಭಿಸಿದ್ದು ಹೇಗೆ? ಅವರ ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ?

ರೆಹಮಾನ್ ಅವರ ಕುಟುಂಬ 1989ರಲ್ಲಿ ಇಸ್ಲಾಂಗೆ ಮತಾಂತರಗೊಂಡಿತು. ಅಂದಿನಿಂದ ದಿಲೀಪ್ ಕುಮಾರ್ ಹೆಸರು ರೆಹಮಾನ್ ಎಂದು ಬದಲಾಯಿತು.

ಎಆರ್​ ರೆಹಮಾನ್ ಸಿನಿ ಜರ್ನಿ ಆರಂಭಿಸಿದ್ದು ಹೇಗೆ? ಅವರ ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ?
ರೆಹಮಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jan 08, 2024 | 7:33 AM

ಎ.ಎಸ್. ದಿಲೀಪ್ ಕುಮಾರ್ ಎಂಬುದು ಯಾರಿಗೂ ಪರಿಚಯವಿಲ್ಲದ ಹೆಸರು. ಆದರೆ ಎಆರ್​ ರೆಹಮಾನ್ (Ar Rahman) ಎಂದರೆ ಎಲ್ಲರಿಗೂ ತಿಳಿಯುತ್ತದೆ. ಅವರು ತಮ್ಮ ಸಂಯೋಜನೆ ಮೂಲಕ ಅನೇಕ ಹಾಡುಗಳಿಗೆ ಜೀವ ತುಂಬಿದ್ದಾರೆ. ರೆಹಮಾನ್ ಅವರ ಸಂಗೀತಕ್ಕೆ ವಿಶಿಷ್ಟವಾದ ಮೋಡಿ ಇದೆ. ಹಲವು ಭಾಷೆಗಳಲ್ಲಿ ಅವರು ಕೆಲಸ ಮಾಡಿ ಸಂಗೀತ ಪ್ರೇಮಿಗಳನ್ನು ರಂಜಿಸಿದ್ದಾರೆ. ಅವರು ತಮ್ಮ ಮೊದಲ ಚಿತ್ರದಲ್ಲೇ ‘ಅತ್ಯುತ್ತಮ ಸಂಗೀತ ನಿರ್ದೇಶಕ’ ರಾಷ್ಟ್ರ ಪ್ರಶಸ್ತಿ ಪಡೆದರು. ಇಂದು (ಜನವರಿ 6) ರೆಹಮಾನ್​ ಅವರಿಗೆ ಬರ್ತ್​ಡೇ ಸಂಭ್ರಮ. ಎಲ್ಲರೂ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ.

1967ರ ಜನವರಿ 6ರಂದು ಮದ್ರಾಸಿನಲ್ಲಿ ಜನಿಸಿದರು ಎ.ಆರ್. ರೆಹಮಾನ್. ಅವರ ನಿಜವಾದ ಹೆಸರು ಎಎಸ್ ದಿಲೀಪ್ ಕುಮಾರ್. ತಂದೆ ಆರ್.ಕೆ.ಶೇಖರ್, ತಾಯಿ ಕಸ್ತೂರಿ. ತಂದೆ ಶೇಖರ್ ಸಂಗೀತ ನಿರ್ದೇಶಕರು. ತಮಿಳು ಮತ್ತು ಮಲಯಾಳಂ ಚಿತ್ರಗಳಿಗೆ ಚಲನಚಿತ್ರ ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದ್ದಾರೆ. ರೆಹಮಾನ್ ನಾಲ್ಕನೇ ವಯಸ್ಸಿನಲ್ಲಿ ಪಿಯಾನೋ ಕಲಿಯಲು ಪ್ರಾರಂಭಿಸಿದರು. ಸ್ಟುಡಿಯೋದಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದರು. ಒಂಬತ್ತನೇ ವಯಸ್ಸಿನಲ್ಲಿ ತಂದೆ ತೀರಿಕೊಂಡಾಗ ಕುಟುಂಬದ ಜವಾಬ್ದಾರಿ ಇವರ ಹೆಗಲಿಗೆ ಬಿತ್ತು. ಹಣಕಾಸಿನ ಸಮಸ್ಯೆಯಿಂದಾಗಿ ಅವರು ತಮ್ಮ ಶಿಕ್ಷಣವನ್ನು ಮಧ್ಯದಲ್ಲಿಯೇ ನಿಲ್ಲಿಸಿದರು.

11ನೇ ವಯಸ್ಸಿನಲ್ಲಿ ಅವರು ಇಳಯರಾಜ, ರಮೇಶ್ ನಾಯ್ಡು ಮತ್ತು ರಾಜ್ ಕೋಟಿಲ ಅವರ ಬಳಿ ಪಿಯಾನೋ ಮತ್ತು ಕೀಬೋರ್ಡ್ ಪ್ಲೇಯರ್ ಆಗಿ ಕೆಲಸ ಮಾಡಿದರು. ರೆಹಮಾನ್ ಅವರ ಕುಟುಂಬ 1989ರಲ್ಲಿ ಇಸ್ಲಾಂಗೆ ಮತಾಂತರಗೊಂಡಿತು. ಅಂದಿನಿಂದ ದಿಲೀಪ್ ಕುಮಾರ್ ಹೆಸರು ರೆಹಮಾನ್ ಎಂದು ಬದಲಾಯಿತು.

ರೆಹಮಾನ್ ಮಾಸ್ಟರ್ ಧನರಾಜ್ ಅವರೊಂದಿಗೆ ಸಂಗೀತ ತರಬೇತಿಯನ್ನು ಪ್ರಾರಂಭಿಸಿದರು. 1992ರಲ್ಲಿ ‘ರೋಜಾ’ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಆ ನಂತರ ನಿರ್ದೇಶಕ ಮಣಿರತ್ನಂ ನಿರ್ದೇಶನದ ಬಹುತೇಕ ಚಿತ್ರಗಳಿಗೆ ರೆಹಮಾನ್ ಸಂಗೀತ ನಿರ್ದೇಶಕರಾಗಿದ್ದರು. ಅವರು ತೆಲುಗು, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿ ಕೆಲಸ ಮಾಡಿದ್ದಾರೆ.

30 ವರ್ಷಗಳಿಗೂ ಹೆಚ್ಚು ಕಾಲ ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿರುವ ರೆಹಮಾನ್ ತಮ್ಮ ಮೊದಲ ಚಿತ್ರ ‘ರೋಜಾ’ಗೆ ಸಂಭಾವನೆಯಾಗಿ 25,000 ರೂ ಪಾಯಿ ಪಡೆದಿದ್ದರು. ಈಗ ಅವರ ಆಸ್ತಿ 1748 ಕೋಟಿ ರೂಪಾಯಿ. ಈಗ ಒಂದು ಚಿತ್ರಕ್ಕೆ ರೂ. 8ರಿಂದ 10 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ ಸ್ಟೇಜ್ ಪ್ರೋಗ್ರಾಂ ನೀಡಲು 1-2 ಕೋಟಿ ರೂ ಚಾರ್ಜ್ ಮಾಡುತ್ತಾರೆ.

ಇದನ್ನೂ ಓದಿ: ರೆಹಮಾನ್ ಹೆಸರು ನೀಡಿದ್ದು ಹಿಂದೂ ಜ್ಯೋತಿಷಿ; ಇಲ್ಲಿದೆ ಇವರ ಹೆಸರು, ಧರ್ಮ ಬದಲಾವಣೆಗೆ ಕಾರಣ

ರೆಹಮಾನ್ ಎರಡು ಆಸ್ಕರ್ ಅವಾರ್ಡ್, ಎರಡು ಗ್ರ್ಯಾಮಿ ಪ್ರಶಸ್ತಿ, ಗೋಲ್ಡನ್ ಗ್ಲೋಬ್ ಪ್ರಶಸ್ತಿ, ನಾಲ್ಕು ರಾಷ್ಟ್ರ ಪ್ರಶಸ್ತಿ, ಹದಿನೈದು ಫಿಲ್ಮ್‌ಫೇರ್ ಪ್ರಶಸ್ತಿ, ಹದಿಮೂರು ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಸೇರಿ ಅನೇಕ ಅವಾರ್ಡ್​ಗಳನ್ನು ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:55 pm, Sat, 6 January 24

ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?