Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸುದೀಪ್ ಸರ್​ಗೆ ಹೇಗೆ ಮುಖ ತೋರಿಸಬೇಕೆಂಬುದೇ ತಿಳಿಯುತ್ತಿಲ್ಲ’; ವಿನಯ್​ಗೆ ಆತಂಕ

ಪ್ರತಿ ವೀಕೆಂಡ್​ನಲ್ಲಿ ಸುದೀಪ್ ಬರುತ್ತಾರೆ. ಮನೆಯವರು ತಪ್ಪು ಮಾಡಿದಾಗ ಅವರಿಗೆ ಬುದ್ಧಿ ಹೇಳುತ್ತಾರೆ. ಒಂದೊಮ್ಮೆ ತಪ್ಪು ದೊಡ್ಡದಾಗಿದ್ದರೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಇದೇ ಭಯ ವಿನಯ್​ಗೆ ಕಾಡಿದೆ.

‘ಸುದೀಪ್ ಸರ್​ಗೆ ಹೇಗೆ ಮುಖ ತೋರಿಸಬೇಕೆಂಬುದೇ ತಿಳಿಯುತ್ತಿಲ್ಲ’; ವಿನಯ್​ಗೆ ಆತಂಕ
ವಿನಯ್-ಸುದೀಪ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 06, 2024 | 1:23 PM

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ವಿನಯ್ ಗೌಡ (Vinay Gowda) ಅವರು ಗಮನ ಸೆಳೆಯುತ್ತಿದ್ದಾರೆ. ಆರಂಭದ ದಿನಗಳಲ್ಲಿ ಅವರು ಸಖತ್ ಅಗ್ರೆಸ್ ಆಗಿ ಆಡುತ್ತಿದ್ದರು. ಪ್ರತಿಯೊಂದಕ್ಕೂ ಕೋಪ ಮಾಡಿಕೊಳ್ಳುತ್ತಿದ್ದರು. ಸಂಗೀತಾ ಜೊತೆ ಅವರು ವೈರುತ್ವ ಬೆಳೆಸಿಕೊಂಡಿದ್ದರು. ಆದರೆ, ಈಗ ಅವರು ಬದಲಾಗಿದ್ದಾರೆ. ಶಾಂತ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಈ ಮಧ್ಯೆ ಅವರಿಗೆ ವೀಕೆಂಡ್ ಎಪಿಸೋಡ್​ನ ಭಯ ಕಾಡಿದೆ. ಸುದೀಪ್ ಅವರಿಗೆ ಹೇಗೆ ಮುಖ ತೋರಿಸಬೇಕು ಎಂದು ಚಿಂತೆ ಮಾಡಿಕೊಂಡಿದ್ದಾರೆ.

ಪ್ರತಿ ವೀಕೆಂಡ್​ನಲ್ಲಿ ಸುದೀಪ್ ಬರುತ್ತಾರೆ. ಮನೆಯವರು ತಪ್ಪು ಮಾಡಿದಾಗ ಅವರಿಗೆ ಬುದ್ಧಿ ಹೇಳುತ್ತಾರೆ. ಒಂದೊಮ್ಮೆ ತಪ್ಪು ದೊಡ್ಡದಾಗಿದ್ದರೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಇದನ್ನು ಎದುರಿಸುವುದು ಅಷ್ಟು ಸುಲಭ ಅಲ್ಲ. ಸುದೀಪ್ ಕೇಳುವ ಪ್ರಶ್ನೆಗೆ ಸರಿಯಾಗೆ ಉತ್ತರ ನೀಡಬೇಕು. ಈಗ ವಿನಯ್​ಗೆ ಇದೇ ಭಯ ಕಾಡಿದೆ. ಅದಕ್ಕೂ ಒಂದು ಕಾರಣ ಇದೆ.

ಪ್ರತಿ ಬಾರಿ ಲಕ್ಷುರಿ ಬಜೆಟ್ ನೀಡಿದಾಗ ಸ್ಪರ್ಧಿಗಳು ಎಡವುತ್ತಿದ್ದಾರೆ. ಇಡೀ ಸೀಸನ್​ನಲ್ಲಿ ಲಕ್ಷುರಿ ಬಜೆಟ್ ಬಂದಿದ್ದು ಕೇವಲ ಒಮ್ಮೆಯೋ ಅಥವಾ ಎರಡು ಬಾರಿಯೋ ಅಷ್ಟೇ. ಇದಕ್ಕೆ ಕಾರಣವೂ ಇದೆ. ಲಕ್ಷುರಿ ಬಜೆಟ್ ಬೇಕು ಎಂದರೆ ಲೆಕ್ಕಾಚಾರ ಸರಿಯಾಗಿ ಮಾಡಬೇಕು. ಅದು ತಪ್ಪಿದರೆ ಬಿಗ್ ಬಾಸ್ ಇದನ್ನು ನೀಡುವುದಿಲ್ಲ. ಎಲ್ಲಾ ವಸ್ತುಗಳನ್ನು ಮನೆ ಕಳೆದುಕೊಳ್ಳುತ್ತದೆ. ಹಲವು ಬಾರಿ ಈ ರೀತಿ ಆಗಿದೆ. ಈ ವಾರವೂ ಅದು ರಿಪೀಟ್ ಆಗಿದೆ.

ಕಾರ್ತಿಕ್ ಅವರು ಲೆಕ್ಕ ಬರೆಯಲು ನಿಂತಿದ್ದರು. ಆದರೆ, ಈ ಲೆಕ್ಕಾಚಾರವನ್ನು ಸರಿಯಾಗಿ ಬರೆದಿಲ್ಲ. ಹೀಗಾಗಿ, ಲಕ್ಷುರಿ ಬಜೆಟ್ ಮಿಸ್ ಆಯಿತು. ಈ ಬಗ್ಗೆ ವಿನಯ್ ಹಾಗೂ ಕಾರ್ತಿಕ್ ಚರ್ಚೆ ಮಾಡಿದ್ದಾರೆ. ‘ಮತ್ತೆ ಲಕ್ಷುರಿ ಬಜೆಟ್ ಕಳೆದುಕೊಂಡೆವು’ ಎಂದು ಕಾರ್ತಿಕ್ ಹೇಳಿದ್ದಾರೆ. ‘ಸುದೀಪ್ ಸರ್​ಗೆ ಹೇಗೆ ಮುಖ ತೋರಿಸಬೇಕು ಎಂಬುದೇ ತಿಳಿಯುತ್ತಿಲ್ಲ. ಅವರು ಈ ಬಾರಿ ಸರಿಯಾಗಿ ಉಗಿಯುತ್ತಾರೆ’ ಎಂದು ವಿನಯ್ ಆತಂಕ ಹೊರ ಹಾಕಿದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಮರಳಿದ ಬಳಿಕ ಮೌನಕ್ಕೆ ಶರಣಾದ ಪ್ರತಾಪ್; ಮೊದಲು ಮಾಡಿದ್ದೇನು?

ಲಕ್ಷುರಿ ಬಜೆಟ್ ಪಡೆಯಲು ಸ್ಪರ್ಧಿಗಳು ಮಾಡುತ್ತಿರುವ ಎಡವಟ್ಟು ನೋಡಿ ಬಿಗ್ ಬಾಸ್​ಗೂ ಅಚ್ಚರಿ ಆಗಿದೆ. ‘ನೀವು ಲಕ್ಷುರಿ ಬಜೆಟ್ ಪಡೆಯುತ್ತಿರುವ ರೀತಿ ನೋಡಿ ಈ ಹಿಂದಿನ ಸೀಸನ್​ಗಳ ಸ್ಪರ್ಧಿಗಳು ನಗುತ್ತಿದ್ದಾರೆ. ವೀಕ್ಷಕರು ಕೂಡ ಮನೆಯವರು ಲಕ್ಷರಿ ಬಜೆಟ್​ನ ಹೇಗೆ ಪಡೆಯುತ್ತಾರೆ ಎಂಬುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ’ ಎಂದು ಬಿಗ್ ಬಾಸ್ ಸ್ಪರ್ಧಿಗಳನ್ನು ಟೀಕಿಸಿದರು. ಇದನ್ನು ಕೇಳಿ ಮನೆ ಮಂದಿಗೆ ನಗಬೇಕೋ ಅಥವಾ ಅಳಬೇಕು ಎನ್ನುವುದೇ ತಿಳಿಯಲಿಲ್ಲ. ಕಲರ್ಸ್ ಕನ್ನಡ ಹಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡೋಕೆ ಅವಕಾಶ ಇದೆ. ಜನವರಿ 27 ಹಾಗೂ 28ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಫಿನಾಲೆ ನಡೆಯಲಿದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ