‘ನಿಮಗೆ ಮತ್ತೊಂದು ಅವಕಾಶ ನೀಡಲ್ಲ’; ವಿನಯ್ಗೆ ಖಡಕ್ ಆಗಿ ಹೇಳಿದ ಸುದೀಪ್
ಎರಡನೇ ಚಾನ್ಸ್ ಕೇಳಿದ ವಿನಯ್ಗೆ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆ ಬಳಿಕ ವಿನಯ್ ಅವರು ಕ್ಷಮೆ ಕೇಳಿದ್ದಾರೆ. ಅಷ್ಟಕ್ಕೂ ಅಲ್ಲಿ ಆದ ತಪ್ಪೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ವಿನಯ್ ಗೌಡ (Vinay Gowda) ಅವರು ವೀಕೆಂಡ್ನಲ್ಲಿ ಸೈಲೆಂಟ್ ಆಗಿರುತ್ತಾರೆ. ‘ಸುದೀಪ್ ಎದುರು ವಾದ ಮಾಡೋಕೆ ನನಗೆ ಇಷ್ಟ ಇಲ್ಲ’ ಎಂದು ಅವರು ಈ ಮೊದಲು ಹೇಳಿದ್ದರು. ಈ ವಾರ ಅವರು ಸುದೀಪ್ ಅವರಿಂದ ಪಾಠ ಮಾಡಿಸಿಕೊಂಡಿದ್ದಾರೆ. ಎರಡನೇ ಚಾನ್ಸ್ ಕೇಳಿದ ವಿನಯ್ಗೆ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆ ಬಳಿಕ ವಿನಯ್ ಅವರು ಕ್ಷಮೆ ಕೇಳಿದ್ದಾರೆ. ಅಷ್ಟಕ್ಕೂ ಅಲ್ಲಿ ಆದ ತಪ್ಪೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.
ಬಿಗ್ ಬಾಸ್ ಜರ್ನಿಯನ್ನು ಗಮನದಲ್ಲಿ ಇಟ್ಟುಕೊಂಡು ಒಬ್ಬರಿಗೆ ಏಣಿ ಹಾಗೂ ಮತ್ತೊಬ್ಬರಿಗೆ ಹಾವಿನ ಸ್ಥಾನ ನೀಡಬೇಕು. ಏಣಿ ಎಂದರೆ ಮೇಲಕ್ಕೆ ಏರಲು ಸಹಾಯ ಮಾಡಿದವರು. ಹಾವು ಎಂದರೆ ಹಿನ್ನಡೆ ಉಂಟು ಮಾಡಿದವರು. ಈ ವೇಳೆ ವಿನಯ್ ಅವರು ನಮ್ರತಾ ಅವರನ್ನು ಏಣಿ ಆಗಿ ಆಯ್ಕೆ ಮಾಡಿದರು. ಆ ಬಳಿಕ ವಿನಯ್ ಅವರು ಹಾವಿಗೆ ಕಾರ್ತಿಕ್ ಹೆಸರನ್ನು ತೆಗೆದುಕೊಂಡರು. ಆದರೆ, ಪಾಸಿಟಿವ್ ವೇನಲ್ಲಿ ಎಂದು ವಿವರಣೆ ನೀಡಿದರು. ಇದು ಸುದೀಪ್ಗೆ ಇಷ್ಟ ಆಗಲೇ ಇಲ್ಲ.
‘ಹಾವು ಎಂದಾಗ ನೆಗೆಟಿವ್ ವಿಚಾರವನ್ನೇ ತೆಗೆದುಕೊಳ್ಳಬೇಕು. ಆ ಜಾಗಕ್ಕೆ ಕಾರ್ತಿಕ್ನ ತೆಗೆದುಕೊಳ್ಳಬೇಕು’ ಎಂದರು ಸುದೀಪ್. ಇದರಿಂದ ವಿನಯ್ ಗೊಂದಲಕ್ಕೆ ಒಳಗಾದರು. ಕಾರ್ತಿಕ್ ಅವರಲ್ಲಿ ನೆಗೆಟಿವ್ ವಿಚಾರ ಏನಿದೆ ಎಂದು ಹೇಳಲು ಪ್ರಯತ್ನಿಸಿದರು. ಆದರೆ, ಇದು ಸರಿ ಎನಿಸಲಿಲ್ಲ. ‘ಸರಿಯಾಗಿ ವಿವರಣೆ ನೀಡು ಗುರು’ ಎಂದು ಮೈಕಲ್ ಕೂಡ ವಿನಯ್ಗೆ ಕಿವಿ ಮಾತು ಹೇಳಿದರು.
ಇದನ್ನೂ ಓದಿ: ಶೈನ್ ಶೆಟ್ಟಿಯಿಂದಾಗಿ ಬದಲಾದ್ರು ವಿನಯ್, ಸಂಗೀತಾನೂ ಜಾಗೃತೆ
ವಿನಯ್ ಅವರ ಬಳಿ ಸುದೀಪ್ ಪದೇ ಪದೇ ಕೇಳಿದರೂ ಸರಿಯಾದ ಉತ್ತರ ಬರಲೇ ಇಲ್ಲ. ಇದರಿಂದ ಸುದೀಪ್ ಬೇಸರಗೊಂಡರು. ಆ ಬಳಿಕ ಮರಳಿ ಬರುವಂತೆ ಹೇಳಿದರು. ಆ ಬಳಿಕ ಸೀಟ್ಗೆ ಮರಳಿ ಬಂದು ಸ್ವಲ್ಪ ಹೊತ್ತು ಕುಳಿತರು. ನಂತರ ಮತ್ತೆ ವಿವರಣೆ ಕೊಡಲು ಅವಕಾಶ ಕೇಳಿದರು. ಆದರೆ, ಸುದೀಪ್ ಇದಕ್ಕೆ ಅವಕಾಶ ನೀಡಲೇ ಇಲ್ಲ. ‘ನಿಮಗೆ ಎರಡನೇ ಚಾನ್ಸ್ ನೀಡಲ್ಲ’ ಎಂದು ಸುದೀಪ್ ಹೇಳಿದರು. ಇದರಿಂದ ವಿನಯ್ಗೆ ಮುಖಭಂಗ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:46 am, Mon, 1 January 24