‘ಡಂಕಿ ಕಲೆಕ್ಷನ್ ಮಾಡಲ್ಲ ಅನ್ನೋದು ಶಾರುಖ್​ಗೂ ಗೊತ್ತಿತ್ತು’; ರಾಜ್​ಕುಮಾರ್ ಹಿರಾನಿ

‘ಡಂಕಿ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸಾಧಾರಣ ಗಳಿಕೆ ಮಾಡಿದೆ. ಈ ಬಗ್ಗೆ ರಾಜ್​ಕುಮಾರ್ ಹಿರಾನಿ ಮಾತನಾಡಿದ್ದಾರೆ. ಈ ಬಗ್ಗೆ ಮೊದಲೇ ತಿಳಿದಿತ್ತು ಎಂದು ಅವರು ಹೇಳಿದ್ದಾರೆ.  

‘ಡಂಕಿ ಕಲೆಕ್ಷನ್ ಮಾಡಲ್ಲ ಅನ್ನೋದು ಶಾರುಖ್​ಗೂ ಗೊತ್ತಿತ್ತು’; ರಾಜ್​ಕುಮಾರ್ ಹಿರಾನಿ
ಡಂಕಿ ಸಿನಿಮಾ
Follow us
|

Updated on:Jan 01, 2024 | 9:02 AM

ಶಾರುಖ್ ಖಾನ್  (Shah Rukh Khan)ನಟನೆಯ ‘ಪಠಾಣ್’ ಹಾಗೂ ‘ಜವಾನ್’ ಸಿನಿಮಾಗಳು ಸೂಪರ್ ಹಿಟ್ ಆದವು. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಬಂಗಾರದ ಬೆಳೆ ತೆಗೆದಿವೆ. ಈ ಕಾರಣಕ್ಕೆ ‘ಡಂಕಿ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಸೃಷ್ಟಿ ಆಗಿತ್ತು. ರಾಜ್​ಕುಮಾರ್ ಹಿರಾನಿ ಯಾವಾಗಲೂ ಆ್ಯಕ್ಷನ್ ಸಿನಿಮಾ ಮಾಡಿದವರಲ್ಲ. ಕ್ಲಾಸ್ ಕಥೆ ಹೇಳೋಕೆ ಅವರು ಫೇಮಸ್. ‘ಡಂಕಿ’ ಟ್ರೇಲರ್ ನೋಡಿದ ಅನೇಕರಿಗೆ ಇದು ಕ್ಲಾಸ್ ಸಿನಿಮಾ ಅನ್ನೋದು ಗೊತ್ತಾಗಿತ್ತು. ‘ಡಂಕಿ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸಾಧಾರಣ ಗಳಿಕೆ ಮಾಡಿದೆ. ಈ ಬಗ್ಗೆ ರಾಜ್​ಕುಮಾರ್ ಹಿರಾನಿ ಮಾತನಾಡಿದ್ದಾರೆ. ಈ ಬಗ್ಗೆ ಮೊದಲೇ ತಿಳಿದಿತ್ತು ಎಂದು ಅವರು ಹೇಳಿದ್ದಾರೆ.

‘ಡಂಕಿ’ ಸಿನಿಮಾ 150+ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಶಾರುಖ್ ಅವರಂಥ ಸ್ಟಾರ್ ಹೀರೋಗೆ ಈ ಕಲೆಕ್ಷನ್ ಕಡಿಮೆಯೇ. ಈ ಬಗ್ಗೆ ರಾಜ್​ಕುಮಾರ್ ಹಿರಾನಿಗೆ ‘ನ್ಯೂಸ್​ 18’ ನಡೆಸಿದ ಕಾರ್ಯಕ್ರಮ ಒಂದರಲ್ಲಿ ಪ್ರಶ್ನೆ ಮಾಡಲಾಗಿದೆ. ಶಾರುಖ್ ಖಾನ್ ಹಾಗೂ ರಾಜ್​ಕುಮಾರ್ ಹಿರಾನಿ ಮಧ್ಯೆ ಕಲೆಕ್ಷನ್ ವಿಚಾರದಲ್ಲಿ ಮಾತುಕತೆ ನಡೆದಿತ್ತಂತೆ.

‘ಎರಡು ಬ್ಯಾಕ್ ಟು ಬ್ಯಾಕ್ ಆ್ಯಕ್ಷನ್ ಸಿನಿಮಾ ಮಾಡಿದ ಬಳಿಕ ಶಾರುಖ್ ಖಾನ್ ಅವರು ಡಂಕಿ ಸಿನಿಮಾ ಮಾಡಬಯಸಿದರು. ಈ ರೀತಿಯ ಸಿನಿಮಾ ಮಾಡಲು ಅವರಿಗೆ ಖುಷಿ ಇತ್ತು. ಆ್ಯಕ್ಷನ್ ಸಿನಿಮಾಗಳು ಜನರಿಗೆ ಹೆಚ್ಚು ಇಷ್ಟ ಆಗುತ್ತವೆ ಅನ್ನೋದು ಶಾರುಖ್ ಖಾನ್​ಗೆ ಗೊತ್ತಿತ್ತು. ಹೀಗಾಗಿ, ಡಂಕಿ ಸಿನಿಮಾದಿಂದ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಗಳಿಕೆ ನಿರೀಕ್ಷಿಸಬೇಡಿ ಎಂದು ನನಗೆ ಅವರು ಹೇಳುತ್ತಲೇ ಇದ್ದರು. ನಿಧಾನವಾಗಿ ಸಿನಿಮಾ ಗಳಿಕೆ ಮಾಡುತ್ತದೆ ಅನ್ನೋದು ಅವರಿಗೆ ಗೊತ್ತಿತ್ತು. ಅವರು ಹೇಳಿದಂತೆ ಆಯಿತು. ಇಡೀ ಕುಟುಂಬ ಸಿನಿಮಾ ನೋಡಲು ಬರುತ್ತಿದೆ’ ಎಂದಿದ್ದಾರೆ ರಾಜ್​ಕುಮಾರ್ ಹಿರಾನಿ.

ಇದನ್ನೂ ಓದಿ: ‘ಧೂಮ್ 4’ನಲ್ಲಿ ಶಾರುಖ್ ಖಾನ್ ನಾಯಕ? ಜೊತೆಯಾಗಲಿದ್ದಾರೆ ದಕ್ಷಿಣದ ನಟ?

‘ಮುನ್ನಾ ಭಾಯ್ ಎಂಬಿಬಿಎಸ್’ ಸಿನಿಮಾಗೆ ಶಾರುಖ್ ಖಾನ್ ಅವರು ಮೊದಲ ಆಯ್ಕೆ ಆಗಿದ್ದರು. ಆದರೆ, ಒಟ್ಟಿಗೆ ಕೆಲಸ ಮಾಡಲು ಆಗಲಿಲ್ಲ. ಸಿನಿಮಾ ಮಾಡಲು ಒಪ್ಪದ ಹೊರತಾಗಿಯೂ ಚಿತ್ರದ ಸ್ಕ್ರಿಪ್ಟ್​ನಲ್ಲಿ ಕೆಲವು ಮುಖ್ಯ ಬದಲಾವಣೆ ಮಾಡಲು ಶಾರುಖ್ ಖಾನ್ ಸೂಚಿಸಿದ್ದರು. ಇದು ಚಿತ್ರಕ್ಕೆ ಸಹಕಾರಿ ಆಗಿತ್ತು ಎಂದು ರಾಜ್​ಕುಮಾರ್ ಹಿರಾನಿ ಹೇಳಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:35 am, Mon, 1 January 24

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ