ಸರಿಯಾಗಿ ಹಿಂದಿ ತಿಳಿಯದ ಸೈಫ್ಗೆ ತಾಯಿ ಶರ್ಮಿಳಾ ಕ್ಲಾಸ್; ವಿಡಿಯೋ ವೈರಲ್
‘ಎಕ್ಸ್ಕ್ಯೂಸ್ ಮೀ.. ನೀನು ಹಿಂದಿ ನಟ. ಪುತ್ರ ಎಂಬ ಪದದ ಅರ್ಥ ನಿನಗೆ ಗೊತ್ತಿಲ್ಲವೇ’ ಎಂದು ಶರ್ಮಿಳಾ ಪ್ರಶ್ನಿಸಿದ್ದಾರೆ. ಜನಪ್ರಿಯ ಕಾರ್ಯಕ್ರಮದ ವೇದಿಕೆಯಲ್ಲಿ ಯಾವ ಮುಲಾಜೂ ಇಲ್ಲದೇ ಮಗನಿಗೆ ಅವರು ಪಾಠ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಸೈಫ್ ಅಲಿ ಖಾನ್ ಅವರನ್ನು ಜನರು ಟ್ರೋಲ್ ಮಾಡುತ್ತಿದ್ದಾರೆ.
ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ (Koffee With Karan) ಕಾರ್ಯಕ್ರಮಕ್ಕೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಪ್ರತಿ ಎಪಿಸೋಡ್ನಲ್ಲಿ ಒಂದಲ್ಲ ಒಂದು ಕಾಂಟ್ರವರ್ಸಿ ಆಗುತ್ತದೆ. ಇತ್ತೀಚೆಗೆ ಈ ಶೋನಲ್ಲಿ ಭಾಗವಹಿಸಿದ್ದ ನಟ ಸೈಫ್ ಅಲಿ ಖಾನ್ (Saif Ali Khan) ಅವರು ಭಾರಿ ಟೀಕೆಗೆ ಒಳಗಾಗುತ್ತಿದ್ದಾರೆ. ಅವರಿಗೆ ಸರಿಯಾಗಿ ಹಿಂದಿ ಭಾಷೆಯ ಬಗ್ಗೆ ತಿಳಿವಳಿಕೆ ಇಲ್ಲ ಎಂಬುದು ಜಗಜ್ಜಾಹೀರಾಗಿದೆ. ಆ ಕಾರಣಕ್ಕಾಗಿ ಸೈಫ್ ಅಲಿ ಖಾನ್ ಮಾತ್ರವಲ್ಲದೇ ಕರಣ್ ಜೋಹರ್ ಕೂಡ ಟ್ರೋಲ್ ಆಗುತ್ತಿದ್ದಾರೆ. ಇಬ್ಬರಿಗೂ ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ (Sharmila Tagore) ಛಾಟಿ ಬೀಸಿದ್ದಾರೆ. ಆ ವಿಡಿಯೋ ವೈರಲ್ ಆಗುತ್ತಿದೆ.
ಸೈಫ್ ಅಲಿ ಖಾನ್ ಮತ್ತು ಅವರ ತಾಯಿ ಶರ್ಮಿಳಾ ಟ್ಯಾಗೋರ್ ಜೊತೆಯಾಗಿ ‘ಕಾಫಿ ವಿತ್ ಕರಣ್’ ಶೋನಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಸೈಫ್ ಜೊತೆ ತಮ್ಮ ಬಾಂಧವ್ಯ ಹೇಗಿದೆ ಎಂಬುದನ್ನು ತಿಳಿಸುವಾಗ ‘ಪುತ್ರ ಮೋಹ್’ ಎಂಬ ಹಿಂದಿ ಪದವನ್ನು ಶರ್ಮಿಳಾ ಬಳಸಿದ್ದಾರೆ. ಇದರ ಅರ್ಥ ಏನು ಎಂಬುದು ಸೈಫ್ ಮತ್ತು ಕರಣ್ ಜೋಹರ್ ಅವರಿಗೆ ತಿಳಿದಿಲ್ಲ! ಅದರಿಂದ ಶರ್ಮಿಳಾಗೆ ಅಚ್ಚರಿ ಆಗಿದೆ.
Bollywoodiyas don’t know Hindi and they are proud about it .. they don’t know what is putra moh pic.twitter.com/U3XPpXtTjn
— exsecular (@ExSecular) December 31, 2023
‘ಮೋಹ್’ ಎಂಬುದನ್ನು ಬೆಂಗಾಲಿ ಪದ ಇರಬಹುದು ಎಂದು ಸೈಫ್ ಊಹಿಸಿದ್ದಾರೆ. ಕರಣ್ ಜೋಹರ್ ಕೂಡ ಅದಕ್ಕೆ ಸಹಮತ ಸೂಚಿಸಿದ್ದಾರೆ. ‘ಎಕ್ಸ್ಕ್ಯೂಸ್ ಮೀ.. ನೀನು ಹಿಂದಿ ನಟ. ಪುತ್ರ ಎಂಬ ಪದದ ಅರ್ಥ ನಿನಗೆ ಗೊತ್ತಿಲ್ಲವೇ’ ಎಂದು ಶರ್ಮಿಳಾ ಖಡಕ್ ಆಗಿ ಪ್ರಶ್ನಿಸಿದ್ದಾರೆ. ಈ ಜನಪ್ರಿಯ ಕಾರ್ಯಕ್ರಮದ ವೇದಿಕೆಯಲ್ಲಿ ಯಾವ ಮುಲಾಜೂ ಇಲ್ಲದೇ ಮಗನಿಗೆ ಅವರು ಪಾಠ ಮಾಡಿದ್ದಾರೆ. ಪುತ್ರ ಮೋಹ್ ಎಂದರೆ ಮಗನ ಜೊತೆಗಿನ ಬಾಂಧವ್ಯ ಎಂದು ಅವರು ತಿಳಿಸಿ ಹೇಳಿದ್ದಾರೆ.
ಇದನ್ನೂ ಓದಿ: ತಾಯಿ ಎದುರಲ್ಲಿ ಹೆಂಡತಿ ಬಗ್ಗೆ ಪ್ರಶ್ನೆ ಕೇಳಿದ ಕರಣ್ ಜೋಹರ್; ಸೈಫ್ಗೆ ಮುಜುಗರ
ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡುವ ಬಹುತೇಕರು ಇಂಗ್ಲಿಷ್ ವ್ಯಾಮೋಹ ಹೊಂದಿದ್ದಾರೆ. ತಮಗೆ ಸರಿಯಾಗಿ ಹಿಂದಿ ಬರುವುದಿಲ್ಲ ಎಂಬುದನ್ನು ಅವರು ಕೂಲ್ ಆಗಿ ಪರಿಗಣಿಸಿದ್ದಾರೆ. ಇಂಥ ನಟ-ನಟಿಯರು ಮತ್ತು ತಂತ್ರಜ್ಞರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ‘ಜೀವನ ಕಟ್ಟಿಕೊಳ್ಳಲು ಹಿಂದಿ ಚಿತ್ರರಂಗ ಬೇಕು. ಆದರೆ ನಿಮಗೆ ಸರಿಯಾಗಿ ಹಿಂದಿ ಕಲಿಯಲು ಮನಸ್ಸು ಇಲ್ಲ’ ಎಂದು ಜನರು ಛಾಟಿ ಬೀಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:32 pm, Sun, 31 December 23