‘ಮಕ್ಕಳು ಬೇಕು ಎಂಬ ಕಾರಣಕ್ಕೆ ಸೈಫ್ ಜೊತೆ ಮದುವೆಯಾದೆ’: ಕರೀನಾ ಕಪೂರ್ ಖಾನ್
ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ತೈಮೂರ್ ಅಲಿ ಖಾನ್, ಜಹಂಗೀರ್ ಅಲಿ ಖಾನ್ ಎಂದು ಮಕ್ಕಳಿಗೆ ಹೆಸರು ಇಡಲಾಗಿದೆ. ಮಕ್ಕಳು ಮತ್ತು ಸಂಸಾರಕ್ಕೆ ಕರೀನಾ ಅವರು ಈಗ ಹೆಚ್ಚು ಸಮಯ ನೀಡುತ್ತಿದ್ದಾರೆ. ಮದುವೆ ಬಳಿಕ ಸಿನಿಮಾಗಳ ಆಯ್ಕೆಯಲ್ಲಿ ಅವರು ಬಹಳ ಚ್ಯೂಸಿ ಆಗಿದ್ದಾರೆ.
ನಟಿ ಕರೀನಾ ಕಪೂರ್ (Kareena Kapoor) ಅವರು ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದ್ದಾಗಲೇ ಮದುವೆ ಆದರು. ಅದಕ್ಕೂ ಮುನ್ನ ಅವರು ಶಾಹಿದ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಆ ಬಳಿಕ ಸೈಫ್ ಅಲಿ ಖಾನ್ (Saif Ali Khan) ಜೊತೆ ಅವರಿಗೆ ಪ್ರೀತಿ ಚಿಗುರಿತು. ಅದಾಗಲೇ ಸೈಫ್ ಅವರು ಅಮೃತಾ ಸಿಂಗ್ ಜೊತೆ ಮದುವೆಯಾಗಿ, ವಿಚ್ಛೇದನವನ್ನೂ ಪಡೆದಿದ್ದರು. ಸೈಫ್ ಅವರನ್ನು ತಾವು ಮದುವೆ ಆಗಿದ್ದು ಯಾಕೆ ಎಂಬ ಪ್ರಶ್ನೆಗೆ ಈಗ ಕರೀನಾ ಕಪೂರ್ ಖಾನ್ (Kareena Kapoor Khan) ಉತ್ತರ ನೀಡಿದ್ದಾರೆ. ಮಕ್ಕಳನ್ನು ಪಡೆಯುವ ಉದ್ದೇಶದಿಂದ ತಾವು ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವುದಾಗಿ ಅವರು ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
‘ಮಕ್ಕಳನ್ನು ಪಡೆಯಬೇಕು ಎಂಬ ಕಾರಣದಿಂದಲೇ ಮದುವೆ ಆಗುವುದು ಅಲ್ಲವೇ? ಆ ಉದ್ದೇಶ ಇಲ್ಲ ಎಂಬುದಾದರೆ ಈ ಕಾಲದಲ್ಲಿ ನೀವು ಲಿವಿಂಗ್ ಟುಗೆದರ್ನಲ್ಲಿ ಇರಬಹುದು. ನಾನು ಮತ್ತು ಸೈಫ್ ಅಲಿ ಖಾನ್ ಅವರು 5 ವರ್ಷ ಲಿವ್-ಇನ್-ರಿಲೇಷನ್ಶಿಪ್ನಲ್ಲಿ ಇದ್ದೆವು. ನಮಗೆ ಮಕ್ಕಳನ್ನು ಪಡೆಯಬೇಕು ಎಂದು ಎನಿಸಿದಾಗ ನಾವು ಮದುವೆ ಎಂಬ ಮುಂದಿನ ಹಂತಕ್ಕೆ ಕಾಲಿಟ್ಟೆವು’ ಎಂದು ಕರೀನಾ ಕಪೂರ್ ಖಾನ್ ಹೇಳಿದ್ದಾರೆ. 2012ರಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅವರು ಮದುವೆಯಾದರು.
ಇದನ್ನೂ ಓದಿ: ‘ಸಿಂಗ್ ಅಗೇನ್’ ಚಿತ್ರತಂಡದಿಂದ ಬಿಡುಗಡೆ ಆಯ್ತು ಕರೀನಾ ಕಪೂರ್ ಫಸ್ಟ್ ಲುಕ್ ಪೋಸ್ಟರ್
ಕರೀನಾ ಅವರು ತಾವು ಹೇಳಿದಂತೆಯೇ ಮಕ್ಕಳು ಮತ್ತು ಸಂಸಾರಕ್ಕೆ ಈಗ ಹೆಚ್ಚು ಸಮಯ ನೀಡುತ್ತಿದ್ದಾರೆ. ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ದಂಪತಿಗೆ ಇಬ್ಬರು ಗಂಡು ಮಕ್ಕಳು ಜನಿಸಿದ್ದಾರೆ. ತೈಮೂರ್ ಅಲಿ ಖಾನ್, ಜಹಂಗೀರ್ ಅಲಿ ಖಾನ್ ಎಂದು ಮಕ್ಕಳಿಗೆ ಹೆಸರು ಇಡಲಾಗಿದೆ. ಬೇರೆ ಸೆಲೆಬ್ರಿಟಿಗಳ ರೀತಿಯಲ್ಲಿ ಸೈಫ್ ಮತ್ತು ಕರೀನಾ ಅವರು ತಮ್ಮ ಮಕ್ಕಳನ್ನು ಗುಟ್ಟಾಗಿ ಬೆಳೆಸುತ್ತಿಲ್ಲ. ಆಗಾಗ ಮಾಧ್ಯಮಗಳ ಎದುರಿಗೆ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ತೈಮೂರ್ ಅಲಿ ಖಾನ್ ಸ್ಟಾರ್ ಆಗಿದ್ದಾನೆ ಎಂದರೂ ತಪ್ಪಿಲ್ಲ.
ಇದನ್ನೂ ಓದಿ: ಕರೀನಾ ಕಪೂರ್ ನಡೆದುಕೊಂಡ ರೀತಿಗೆ ನಾರಾಯಣಮೂರ್ತಿ ಬೇಸರ; ಸುಧಾಮೂರ್ತಿ ಉತ್ತರ ಏನು?
ಮದುವೆ ಬಳಿಕ ಕರೀನಾ ಕಪೂರ್ ಖಾನ್ ಅವರ ಆದ್ಯತೆಗಳಲ್ಲಿ ಬದಲಾವಣೆ ಆಗಿದೆ. ಮೊದಲು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದ ಅವರು ಈಗ ಕೊಂಚ ಚ್ಯೂಸಿ ಆಗಿದ್ದಾರೆ. ಮಕ್ಕಳ ಆರೈಕೆಗೆ ಅವರು ಹೆಚ್ಚು ಸಮಯ ನೀಡುತ್ತಿದ್ದಾರೆ. ತಮಗೆ ಸೂಕ್ತ ಎನಿಸುವಂತಹ ಸಿನಿಮಾಗಳನ್ನು ಮಾತ್ರ ಅವರು ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯ ಅವರು ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಗ್ ಅಗೇನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಹುತಾರಾಗಣದ ಈ ಸಿನಿಮಾದಲ್ಲಿ ಅಜಯ್ ದೇವಗನ್, ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಕೂಡ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರತಂಡದಿಂದ ಕರೀನಾ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.