‘ಧೂಮ್ 4’ನಲ್ಲಿ ಶಾರುಖ್ ಖಾನ್ ನಾಯಕ? ಜೊತೆಯಾಗಲಿದ್ದಾರೆ ದಕ್ಷಿಣದ ನಟ?

Shah Rukh Khan: ಜಾನ್ ಅಬ್ರಹಾಂ, ಹೃತಿಕ್ ರೋಷನ್, ಆಮಿರ್ ಖಾನ್ ಬಳಿಕ ‘ಧೂಮ್’ ಬೈಕ್ ಹತ್ತಲಿದ್ದಾರೆಯೇ ಶಾರುಖ್ ಖಾನ್?

‘ಧೂಮ್ 4’ನಲ್ಲಿ ಶಾರುಖ್ ಖಾನ್ ನಾಯಕ? ಜೊತೆಯಾಗಲಿದ್ದಾರೆ ದಕ್ಷಿಣದ ನಟ?
ಶಾರುಖ್ ಖಾನ್
Follow us
ಮಂಜುನಾಥ ಸಿ.
|

Updated on: Dec 29, 2023 | 7:25 PM

ಶಾರುಖ್ ಖಾನ್​ಗೆ (Shah Rukh Khan) 2023 ವೃತ್ತಿ ಜೀವನದ ಅದೃಷ್ಟದ ವರ್ಷಗಳಲ್ಲಿ ಒಂದು. ಒಂದೇ ವರ್ಷದಲ್ಲಿ ಮೂರು ಹಿಟ್ ಸಿನಿಮಾಗಳನ್ನು ಶಾರುಖ್ ಖಾನ್ ನೀಡಿದ್ದಾರೆ. ಅವುಗಳಲ್ಲಿ ಎರಡು ಸಿನಿಮಾಗಳಂತೂ 1000 ಕೋಟಿಗೂ ಹೆಚ್ಚು ಗಳಿಸಿ ಬ್ಲಾಕ್ ಬಸ್ಟರ್ ಎನಿಸಿಕೊಂಡಿವೆ. ಒಂದರ ಹಿಂದೊಂದರಂತೆ ಮೂರು ಸೂಪರ್ ಹಿಟ್​ ಸಿನಿಮಾ ನೀಡಿರುವ ಶಾರುಖ್ ಖಾನ್​ ಮುಂದಿನ ಸಿನಿಮಾದ ಆಯ್ಕೆಯ ಬಗ್ಗೆ ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಇದರ ನಡುವೆ ಶಾರುಖ್ ಖಾನ್ ‘ಧೂಮ್’ ಸಿನಿಮಾ ಸರಣಿಯ ಮುಂದಿನ ಭಾಗದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಯಶ್ ರಾಜ್ ಬ್ಯಾನರ್​ನಿಂದ ನಿರ್ಮಾಣಗೊಳ್ಳುತ್ತಿರುವ ‘ಧೂಮ್’ ಸಿನಿಮಾ ಸರಣಿಗೆ ಅದರದ್ದೇ ಆದ ಅಭಿಮಾನಿ ವರ್ಗವಿದೆ. ವಿಲನ್ ಹಾಗೂ ಹೀರೋ ಎರಡಕ್ಕೂ ಪ್ರಧಾನ ಆದ್ಯತೆ ಇರುವ ಸಿನಿಮಾ ಸರಣಿ ಇದು. ಕಳ್ಳ-ಪೊಲೀಸ್ ನಡುವಿನ ಕತೆ ಒಳಗೊಂಡ ‘ಧೂಮ್’ ಸಿನಿಮಾ ಸರಣಿ ಆರಂಭವಾಗಿ 20 ವರ್ಷಗಳಾಗುತ್ತಿದೆ. ಇದೀಗ ‘ಧೂಮ್ 4’ ಅನ್ನು ನಿರ್ಮಿಸಲು ಯಶ್ ರಾಜ್ ನಿರ್ಮಾಣ ಸಂಸ್ಥೆ ಯೋಜಿಸಿದ್ದು, ಹೊಸ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಮೊದಲ ‘ಧೂಮ್’ ಸಿನಿಮಾನಲ್ಲಿ ಜಾನ್ ಅಬ್ರಹಾಂ ಪ್ರಮುಖ ವಿಲನ್ ಆಗಿದ್ದರು. ಅದಾದ ಬಳಿಕ ಹೃತಿಕ್ ರೋಷನ್, ‘ಧೂಮ್ 3’ನಲ್ಲಿ ಅಮೀರ್ ಖಾನ್ ಕಳ್ಳನಾದರು. ಇದೀಗ ‘ಧೂಮ್ 4’ನಲ್ಲಿ ಶಾರುಖ್ ಖಾನ್ ‘ಹಿರೋಯಿಕ್ ಕಳ್ಳ’ನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದು ವಿಶೇಷವೆಂದರೆ ಈ ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ರಾಮ್ ಚರಣ್ ಸಹ ಶಾರುಖ್ ಖಾನ್ ಜೊತೆಗಿರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ:ಶಾರುಖ್ ಖಾನ್ ಬಗ್ಗೆ ಕೀಳು ಮಾತು; ‘ಡಂಕಿ’ ರಿಲೀಸ್ ಬಳಿಕ ವೈರಲ್ ಆಯ್ತು ಆಮಿರ್ ಹಳೆಯ ವಿಡಿಯೋ

ಯಶ್ ರಾಜ್ ಫಿಲಮ್ಸ್​ಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ‘‘ಧೂಮ್ 4’ ನಿರ್ಮಿಸುವ ಆಲೋಚನೆ ಯಶ್ ರಾಜ್​ ಫಿಲಮ್ಸ್​ಗೆ ಇದೆ ಆದರೆ ಸಿನಿಮಾದ ಬಜೆಟ್ ಇನ್ನಿತರೆ ಅಂಶಗಳು ಅಂತಿಮವಾಗಿಲ್ಲ. ಹಾಗಾಗಿ ಈಗಲೇ ಶಾರುಖ್ ಖಾನ್ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಹೇಳಲಾಗದು’’ ಎಂದಿದ್ದಾರೆಂದು ಪಿಂಕ್​ವಿಲ್ಲಾ ವರದಿ ಮಾಡಿದೆ.

‘ಧೂಮ್’ ಸರಣಿಯ ಕಡೆಯ ಸಿನಿಮಾ ‘ಧೂಮ್ 3’ 2013ರಲ್ಲಿ ಬಿಡುಗಡೆ ಆಗಿತ್ತು. ‘ಧೂಮ್’ ಸಿನಿಮಾ ಸರಣಿಯ ಹೊಸ ಸಿನಿಮಾ ಬಂದು 10 ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಹಾಗಾಗಿ ಈಗ ಹೊಸದೊಂದು ‘ಧೂಮ್’ ಸಿನಿಮಾ ನಿರ್ಮಿಸಲು ಯಶ್ ರಾಜ್ ಫಿಲಮ್ಸ್​ ಉತ್ಸುಕವಾಗಿದೆ. ಭಾರಿ ಬಜೆಟ್​ನ ಸಿನಿಮಾವನ್ನೇ ನಿರ್ಮಿಸುವ ಯಶ್ ರಾಜ್​ಗೆ ಶಾರುಖ್ ಖಾನ್ ಅನ್ನು ಸಿನಿಮಾಕ್ಕೆ ಒಪ್ಪಿಸುವುದು ದೊಡ್ಡ ಕಷ್ಟವೇನೂ ಅಲ್ಲ. ಅಲ್ಲದೆ ಇದೇ ವರ್ಷ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆದ ಶಾರುಖ್ ಖಾನ್​ರ ‘ಪಠಾಣ್’ ಸಿನಿಮಾವನ್ನು ಯಶ್ ರಾಜ್ ಫಿಲಮ್ಸ್​ ನಿರ್ಮಾಣ ಮಾಡಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್