AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಖಾನ್ ಬಗ್ಗೆ ಕೀಳು ಮಾತು; ‘ಡಂಕಿ’ ರಿಲೀಸ್ ಬಳಿಕ ವೈರಲ್ ಆಯ್ತು ಆಮಿರ್ ಹಳೆಯ ವಿಡಿಯೋ

ಬಹುತೇಕ ಸೆಲೆಬ್ರಿಟಿಗಳಿಗೆ ಪಿಆರ್ ತಂಡ ಇರುತ್ತದೆ. ನಟನ ಬಗ್ಗೆ ಮಾಧ್ಯಮದಲ್ಲಿ ಪಾಸಿಟಿವ್ ಆಗಿ ಸುದ್ದಿಗಳು ಪಬ್ಲಿಶ್ ಆಗುವಂತೆ ನೋಡಿಕೊಳ್ಳೋದು ಈ ತಂಡದ ಕೆಲಸ.

ಶಾರುಖ್ ಖಾನ್ ಬಗ್ಗೆ ಕೀಳು ಮಾತು; ‘ಡಂಕಿ’ ರಿಲೀಸ್ ಬಳಿಕ ವೈರಲ್ ಆಯ್ತು ಆಮಿರ್ ಹಳೆಯ ವಿಡಿಯೋ
ಆಮಿರ್-ಶಾರುಖ್
TV9 Web
| Edited By: |

Updated on:Dec 23, 2023 | 2:35 PM

Share

ಶಾರುಖ್ ಖಾನ್, ಆಮಿರ್ ಖಾನ್ ಹಾಗೂ ಸಲ್ಮಾನ್ ಖಾನ್ (Salman Khan) ಈಗ ಒಳ್ಳೆಯ ಗೆಳೆಯುರು. ಇವರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿದೆ. ಆದರೆ ಈ ಮೊದಲು ಈ ರೀತಿ ಇರಲಿಲ್ಲ. ಶಾರುಖ್ ಖಾನ್ ಅವರನ್ನು ಕಂಡರೆ ಆಮಿರ್ ಖಾನ್​ಗೆ ಆಗುತ್ತಿರಲಿಲ್ಲ. ಈಗ ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ರಿಲೀಸ್ ಆಗಿದೆ. ಈ ಸಂದರ್ಭದಲ್ಲಿ ಆಮಿರ್ ಖಾನ್ ಅವರ ಹಳೆಯ ಸಂದರ್ಶನದ ತುಣುಕು ವೈರಲ್ ಆಗಿದೆ ‘ಶಾರುಖ್ ಖಾನ್​ಗೆ ಒಳ್ಳೆಯ ಪಿಆರ್ ಟೀಂ ಸಿಕ್ಕಿದೆ’ ಎಂದು ಅವರು ಹೇಳಿದ್ದರು.

ಬಹುತೇಕ ಸೆಲೆಬ್ರಿಟಿಗಳಿಗೆ ಪಿಆರ್ ತಂಡ ಇರುತ್ತದೆ. ನಟನ ಬಗ್ಗೆ ಮಾಧ್ಯಮದಲ್ಲಿ ಪಾಸಿಟಿವ್ ಆಗಿ ಸುದ್ದಿಗಳು ಪಬ್ಲಿಶ್ ಆಗುವಂತೆ ನೋಡಿಕೊಳ್ಳೋದು ಈ ತಂಡದ ಕೆಲಸ. ಹೋದಲ್ಲಿ ಬಂದಲ್ಲಿ ಅವರಿಗೆ ಪ್ರಚಾರ ಸಿಗುವಂತೆ ನೋಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಹೀರೋನ ಹೆಸರು ಸದಾ ಪ್ರಚಲಿತದಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ. ಈ ಬಗ್ಗೆ ಆಮಿರ್ ಖಾನ್ ಅವರು ಮಾತನಾಡಿದ್ದರು. ಈ ವಿಡಿಯೋನ ವೈರಲ್ ಮಾಡಲಾಗುತ್ತಿದೆ.

‘ಶಾರುಖ್ ಖಾನ್ ಅವರ ಶಕ್ತಿ ಎಂದರೆ ಅವರಿಗೆ ಒಳ್ಳೆಯ ಪ್ರಚಾರ ತಂಡ ಸಿಕ್ಕಿದೆ. ಮಾಧ್ಯಮದವರನ್ನು ಸರಿಯಾಗಿ ನಿರ್ವಹಿಸುವ ಮತ್ತು ಅವರನ್ನು ಖುಷಿಯಾಗಿಡುವ ಗುಣ ಅವರಲ್ಲಿ ಇದೆ. ಎಲ್ಲರಲ್ಲೂ ಆ ಕಲೆ ಇಲ್ಲ. ಇದನ್ನು ಅವರು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ’ ಎಂದು ಆಮಿರ್ ಖಾನ್ ಹೇಳಿದ್ದರು.

ಆಮಿರ್ ಖಾನ್ ಹೇಳಿದ ಮಾತನ್ನು ಅನೇಕರು ಈಗಲೂ ಒಪ್ಪುತ್ತಾರೆ. ಶಾರುಖ್ ಖಾನ್ ಅವರು ಸಿನಿಮಾ ರಿಲೀಸ್ ಸಂದರ್ಭದಲ್ಲಿ ಅಭಿಮಾನಿಗಳ ಟ್ವೀಟ್​ಗಳನ್ನು ರೀಟ್ವೀಟ್ ಮಾಡುತ್ತಾರೆ. ಈ ಟ್ವೀಟ್​ಗಳನ್ನು ಮಾಡೋದು ಶಾರುಖ್ ಖಾನ್ ಅವರ ಪಿಆರ್ ತಂಡ ಅನ್ನೋದು ಅನೇಕರ ಅಭಿಪ್ರಾಯ. ಆದರೆ, ಈ ಬಗ್ಗೆ ಶಾರುಖ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Aamir Khan talking about SRK’s PR and how good he is at manipulating media. Nepo Daddy was always an insecure superstar. byu/Siyaah_ inBollyBlindsNGossip

ಇದನ್ನೂ ಓದಿ: ಶಾರುಖ್ ಖಾನ್, ಅಜಯ್, ಅಕ್ಷಯ್​ ಕುಮಾರ್​ಗೆ ನೊಟೀಸ್

ಶಾರುಖ್ ಖಾನ್ ಅವರು ಸದ್ಯ ‘ಡಂಕಿ’ ಸಿನಿಮಾ ರಿಲೀಸ್ ಆದ ಖುಷಿಯಲ್ಲಿದ್ದಾರೆ. ಎರಡು ದಿನಕ್ಕೆ ಈ ಸಿನಿಮಾ ಭಾರತದಲ್ಲಿ 50 ಕೋಟಿ ರೂಪಾಯಿ ಗಳಿಕೆ ಮಾಡಿದೆ.  ಆಮಿರ್ ಖಾನ್ ಅವರು ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಈ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:52 pm, Sat, 23 December 23

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್