‘ಸಲಾರ್ ಪಾರ್ಟ್ 2’ಗೆ ಆಗಿಲ್ಲ ಶೂಟಿಂಗ್; ಈ ಸಿನಿಮಾ ಬಗೆಗಿನ ಸಾಧ್ಯಾಸಾಧ್ಯತೆಗಳೇನು?
ದೊಡ್ಡ ಟ್ವಿಸ್ಟ್ನೊಂದಿಗೆ ಮೊದಲ ಪಾರ್ಟ್ ಅಂತ್ಯಗೊಳಿಸಿದ್ದಾರೆ ಪ್ರಶಾಂತ್ ನೀಲ್. ಹೀಗಾಗಿ, ಎರಡನೇ ಪಾರ್ಟ್ ಬಗ್ಗೆ ಕುತೂಹಲ ಮೂಡಿದೆ. ಆದರೆ, ಸದ್ಯಕ್ಕಂತೂ ಈ ಸಿನಿಮಾದ ಕೆಲಸಗಳು ಆರಂಭ ಆಗುವ ಸಾಧ್ಯತೆ ಕಡಿಮೆ.

ಪ್ರಶಾಂತ್ ನೀಲ್ (Prashanth Neel) ಅವರ ಶ್ರಮಕ್ಕೆ ಉತ್ತಮ ಪ್ರತಿಫಲ ಸಿಗುತ್ತಿದೆ. ‘ಕೆಜಿಎಫ್’, ‘ಕೆಜಿಎಫ್ 2’ ಬಳಿಕ ‘ಸಲಾರ್’ ಸಿನಿಮಾ ಕೂಡ ಸೂಪರ್ ಹಿಟ್ ಆಗಿದೆ. ಈ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಮೊದಲ ದಿನ 175 ಕೋಟಿ ರೂಪಾಯಿ ಆಗಿದೆ. ಈ ಚಿತ್ರದಿಂದ ಪ್ರಶಾಂತ್ ನೀಲ್ ಖ್ಯಾತಿ ಹೆಚ್ಚಿದೆ. ಅವರ ಕಾಲ್ಶೀಟ್ ಪಡೆಯಲು ಬಾಲಿವುಡ್ ನಿರ್ಮಾಪಕರೂ ಪ್ರಯತ್ನಿಸುತ್ತಿದ್ದಾರೆ. ಸದ್ಯ ‘ಸಲಾರ್ ಪಾರ್ಟ್ 2’ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಿನಿಮಾಗೆ ಇನ್ನೂ ಶೂಟಿಂಗ್ ಆಗಿಲ್ಲ.
‘ಕೆಜಿಎಫ್’ ಎರಡು ಪಾರ್ಟ್ನಲ್ಲಿ ರಿಲೀಸ್ ಆಗಿತ್ತು. ಮೊದಲ ಪಾರ್ಟ್ ರಿಲೀಸ್ ಆಗಿ ಮೂರುವರೆ ವರ್ಷಗಳ ಬಳಿಕ ಎರಡನೇ ಪಾರ್ಟ್ ರಿಲೀಸ್ ಆಯಿತು. ಈಗ ‘ಸಲಾರ್’ ರಿಲೀಸ್ ಆಗಿ ಹಿಟ್ ಆಗಿದೆ. ಒಂದು ದೊಡ್ಡ ಟ್ವಿಸ್ಟ್ನೊಂದಿಗೆ ಮೊದಲ ಪಾರ್ಟ್ ಅಂತ್ಯಗೊಳಿಸಿದ್ದಾರೆ ಪ್ರಶಾಂತ್ ನೀಲ್. ಹೀಗಾಗಿ, ಎರಡನೇ ಪಾರ್ಟ್ ಬಗ್ಗೆ ಕುತೂಹಲ ಮೂಡಿದೆ. ಆದರೆ, ಸದ್ಯಕ್ಕಂತೂ ಈ ಸಿನಿಮಾದ ಕೆಲಸಗಳು ಆರಂಭ ಆಗುವ ಸಾಧ್ಯತೆ ಕಡಿಮೆ.
ಜೂನಿಯರ್ ಎನ್ಟಿಆರ್ ಜೊತೆಗಿನ ಸಿನಿಮಾ ಕೆಲಸಗಳಲ್ಲಿ ಪ್ರಶಾಂತ್ ನೀಲ್ ಬ್ಯುಸಿ ಆಗಲಿದ್ದಾರೆ. ಸದ್ಯ ಜೂನಿಯರ್ ಎನ್ಟಿಆರ್ ಅವರು ‘ದೇವರ’ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಆ ಬಳಿಕ ‘ವಾರ್ 2’ ಸಿನಿಮಾ ಕೆಲಸಗಳಲ್ಲಿ ಅವರು ತೊಡಗಿಕೊಳ್ಳಲಿದ್ದಾರೆ. ಇದಾದ ಬಳಿಕ ಅವರು ಪ್ರಶಾಂತ್ ನೀಲ್ ಸಿನಿಮಾ ಸೆಟ್ ಸೇರಲಿದ್ದಾರೆ. ಆ ಬಳಿಕ ಪ್ರಶಾಂತ್ ನೀಲ್ ಅವರು ಯಶ್ ಜೊತೆ ಮತ್ತೊಂದು ಸಿನಿಮಾ ಮಾಡಬೇಕಿದೆ.
ಇದನ್ನೂ ಓದಿ: ಪ್ರಭಾಸ್ ನಟನೆಯ ‘ಸಲಾರ್’ ಪೈರಸಿ ತಡೆಯಲು ‘ಹೊಂಬಾಳೆ ಫಿಲ್ಮ್ಸ್’ ತಂತ್ರ
ಪ್ರಭಾಸ್ ಅವರು ಸದ್ಯ ಬೇರೆ ಬೇರೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ, ಸದ್ಯಕ್ಕಂತೂ ‘ಸಲಾರ್ 2’ ಸಿನಿಮಾ ಕೆಲಸಗಳು ಆರಂಭ ಆಗುವುದಿಲ್ಲ. ‘ಸಲಾರ್’ ಹಿಟ್ ಆಗಿರುವುದರಿಂದ ಇಂದಲ್ಲ ನಾಳೆ ‘ಸಲಾರ್ 2’ ಸೆಟ್ಟೇರಲಿದೆ ಅನ್ನೋದು ಅಭಿಮಾನಿಗಳ ನಂಬಿಕೆ. ಕೆಲವು ವರದಿಗಳ ಪ್ರಕಾರ ‘ಸಲಾರ್ 2’ ಶೂಟ್ ಪೂರ್ಣಗೊಂಡಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಎರಡನೇ ಭಾಗಕ್ಕೆ ‘ಸಲಾರ್: ಶೌರ್ಯಂಗ ಪರ್ವಂ’ ಎಂದು ಶೀರ್ಷಿಕೆ ಇಡಲಾಗಿದೆ. ಮೊದಲ ಪಾರ್ಟ್ಗೆ ‘ಸಲಾರ್: ಸೀಸ್ಫೈರ್’ ಎನ್ನುವ ಶೀರ್ಷಿಕೆ ನೀಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:43 am, Sat, 23 December 23




