Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್ ನಟನೆಯ ‘ಸಲಾರ್’ ಪೈರಸಿ ತಡೆಯಲು ‘ಹೊಂಬಾಳೆ ಫಿಲ್ಮ್ಸ್’ ತಂತ್ರ

ಇತ್ತೀಚೆಗೆ ಪೈರಸಿ ಕಾಟ ಜೋರಾಗಿದೆ. ಬಿಗ್ ಬಜೆಟ್​ ಸಿನಿಮಾಗಳು ರಿಲೀಸ್ ಆದಾಗ ಅಭಿಮಾನಿಗಳು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದನ್ನು ತಡೆಯಲು ಹೊಂಬಾಳೆ ಮುಂದಾಗಿದೆ.

ಪ್ರಭಾಸ್ ನಟನೆಯ ‘ಸಲಾರ್’ ಪೈರಸಿ ತಡೆಯಲು ‘ಹೊಂಬಾಳೆ ಫಿಲ್ಮ್ಸ್’ ತಂತ್ರ
ಪ್ರಭಾಸ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Dec 22, 2023 | 1:28 PM

‘ಬಾಹುಬಲಿ 2’ ಬಳಿಕ ನಟ ಪ್ರಭಾಸ್ (Prabhas) ಅವರು ಒಂದು ಮಾಸ್ ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಈ ಸಿನಿಮಾ ಇಂದು (ಡಿಸೆಂಬರ್ 22) ಬಿಡುಗಡೆ ಆಗಿದೆ. ಕೆಲವರು ಚಿತ್ರಕ್ಕೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದರೆ, ಇನ್ನೂ ಕೆಲವರು ನೆಗೆಟಿವ್ ಆಗಿ ಪ್ರತಿಕ್ರಿಯಿಸಿದ್ದಾರೆ. ಮೇಕಿಂಗ್​ನಲ್ಲಿ ‘ಕೆಜಿಎಫ್ 2’ ಛಾಯೆ ಹಾಗೂ ‘ಉಗ್ರಂ’ ಕಥೆಯನ್ನು ಎರವಲು ಪಡೆದ ಬಗ್ಗೆ ಅನೇಕರು ಈ ಚಿತ್ರವನ್ನು ಟೀಕಿಸಿದ್ದಾರೆ. ಸಿನಿಮಾ ಪೈರಸಿ ಆಗದಂತೆ ನೋಡಿಕೊಳ್ಳಲು ಚಿತ್ರತಂಡ ಮುಂದಾಗಿದೆ. ಹೊಂಬಾಳೆ ಫಿಲ್ಮ್ಸ್ ಈ ಬಗ್ಗೆ ಟ್ವೀಟ್ ಮಾಡಿ ವಿಶೇಷ ಮನವಿ ಮಾಡಿದೆ.

ಕನ್ನಡದಲ್ಲಿ 2014ರಲ್ಲಿ ‘ಉಗ್ರಂ’ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರವನ್ನು ಜನರು ಥಿಯೇಟರ್​ನಲ್ಲಿ ಹೆಚ್ಚು ನೋಡಿರಲಿಲ್ಲ. ಈ ಸಿನಿಮಾದ ಪೈರಸಿ ಕಾಪಿ ಹೆಚ್ಚು ವೈರಲ್ ಆಯ್ತು. ಜನರು ಪೈರಸಿ ಕಾಪಿಯನ್ನೇ ನೋಡಿ ಮೆಚ್ಚಿಕೊಂಡರು. ಈ ಸಿನಿಮಾ ವಿಮರ್ಶೆಯಲ್ಲಿ ಗೆದ್ದಿತೇ ಹೊರತು ಗಳಿಕೆ ಮಾಡಲಿಲ್ಲ. ಈ ಬೇಸರ ಪ್ರಶಾಂತ್ ನೀಲ್ ಅವರಿಗೆ ಇದೆ. ಈ ಕಾರಣದಿಂದಲೇ ಪ್ರಶಾಂತ್ ನೀಲ್ ಅವರು ದೊಡ್ಡ ಸ್ಕೇಲ್​ನಲ್ಲಿ ‘ಸಲಾರ್’ ಮಾಡಿದರು. ಈ ಸಿನಿಮಾಗೆ ಪೈರಸಿಯ ಕಾಟ ಎದುರಾಗಬಹುದು ಎಂದು ತಂಡ ಮೊದಲೇ ಎಚ್ಚೆತ್ತುಕೊಂಡಿದೆ.

ಇತ್ತೀಚೆಗೆ ಪೈರಸಿ ಕಾಟ ಜೋರಾಗಿದೆ. ಬಿಗ್ ಬಜೆಟ್​ ಸಿನಿಮಾಗಳು ರಿಲೀಸ್ ಆದಾಗ ಅಭಿಮಾನಿಗಳು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇನ್ನೂ ಕೆಲವರು ಥಿಯೇಟರ್​ ಪ್ರಿಂಟ್​ನ ಪೈರಸಿ ಸೈಟ್​​ನಲ್ಲಿ ಅಪ್​ಲೋಡ್ ಮಾಡುತ್ತಾರೆ. ಈ ಕಾರಣದಿಂದ ಹೊಂಬಾಳೆ ಫಿಲ್ಮ್ಸ್ ವಿಶೇಷ ಮನವಿ ಮಾಡಿಕೊಂಡಿದೆ.

‘ಸಲಾರ್ ಚಿತ್ರವನ್ನು ನಿಮ್ಮ ಹತ್ತಿರದ ಚಿತ್ರಮಂದಿರದಲ್ಲೇ ನೋಡಿ. ಪೈರಸಿ ಲಿಂಕ್ ಕಂಡರೆ ಟ್ವಿಟರ್ ಖಾತೆ @blockxtechs ಅಥವಾ @blockxtech.com ಖಾತೆಗೆ ರಿಪೋರ್ಟ್ ಮಾಡಿ’ ಎಂದು ಹೊಂಬಾಳೆ ಫಿಲ್ಮ್ಸ್ ಮನವಿ ಮಾಡಿದೆ.  ಇದನ್ನು ಅಭಿಮಾನಿಗಳು ಬೆಂಬಲಿಸಿದ್ದಾರೆ. ಈ ರೀತಿಯ ದೃಶ್ಯ ಕಂಡರೆ ಮಾಹಿತಿ ನೀಡುವುದಾಗಿ ಅಭಿಮಾನಿಗಳು ಹೇಳಿದ್ದಾರೆ.

ಇದನ್ನೂ ಓದಿ: ‘ಉಗ್ರಂ’, ‘ಕೆಜಿಎಫ್​’ ಚಿತ್ರಗಳನ್ನು ನೆನಪಿಸಿದ ‘ಸಲಾರ್​’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

‘ಸಲಾರ್’ ಚಿತ್ರವನ್ನು ‘ಹೊಂಬಾಳೆ ಫಿಲ್ಮ್ಸ್’ ಅದ್ದೂರಿ ಬಜೆಟ್​​ನಲ್ಲಿ ಸಿನಿಮಾ ನಿರ್ಮಾಣ ಮಾಡಿದೆ. ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’, ‘ಸಾಹೋ’ ಮತ್ತು ‘ಆದಿಪುರುಷ್’ ಸಿನಿಮಾಗಳು ನಿರಾಶಾದಾಯಕವಾಗಿದ್ದವು. ಇದರಿಂದಾಗಿ ಅಭಿಮಾನಿಗಳು ‘ಸಲಾರ್’ ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಈ ನಿರೀಕ್ಷೆ ಹುಸಿ ಆಗಿಲ್ಲ ಎಂದು ಪ್ರಭಾಸ್ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ‘ಸಲಾರ್’ ಸಿನಿಮಾ ಸಖತ್ ಮಾಸ್ ಆಗಿದೆ. ಪ್ರಭಾಸ್ ಅವರು ಆ್ಯಕ್ಷನ್ ಅವತಾರದಲ್ಲಿ ಮೆರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ