ಪುಟ್ಟ ಪುಟ್ಟ ಹೆಜ್ಜೆ ಇಟ್ಟ ವಮಿಕಾ; ಎಷ್ಟು ಕ್ಯೂಟ್ ನೋಡಿ ವಿರಾಟ್-ಅನುಷ್ಕಾ ಮಗಳು
ಅನುಷ್ಕಾ ಶರ್ಮಾ ಹಲವು ಕಡೆ ಕರೆದುಕೊಂಡು ಹೋಗುತ್ತಾರೆ. ಇತ್ತೀಚೆಗೆ ಒಂದು ಪಾರ್ಟಿಗೆ ಎಲ್ಲರೂ ಅಟೆಂಡ್ ಆಗಿದ್ದರು. ಈ ವೇಳೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಸಾಗಿದ್ದಾರೆ ವಮಿಕಾ.
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ (Virat Kohli) ತಮ್ಮ ಮಗಳು ವಮಿಕಾಳನ್ನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಿಂದ ದೂರ ಇಟ್ಟಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೂ ಮಗಳ ಫೋಟೋ ಕ್ಲಿಕ್ ಮಾಡದಂತೆ ಅವರು ಅನೇಕ ಬಾರಿ ಕೇಳಿಕೊಂಡಿದ್ದಿದೆ. ಈಗ ವಮಿಕಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಹೋಗುವ ವಿಡಿಯೋ ವೈರಲ್ ಆಗಿದೆ. ಇಲ್ಲಿಯೂ ಆಕೆಯ ಮುಖವನ್ನು ತೋರಿಸಿಲ್ಲ. ಇದು ಇತ್ತೀಚಿಗಿನ ವಿಡಿಯೋ ಎನ್ನಲಾಗುತ್ತಿದೆ.
ವಮಿಕಾ ಜನಿಸಿದ್ದು 2021ರ ಜನವರಿ 11ರಂದು. ಈ ವರ್ಷ ಅವಳು ಮೂರನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾಳೆ. ಅವಳನ್ನು ಅನುಷ್ಕಾ ಶರ್ಮಾ ಹಲವು ಕಡೆ ಕರೆದುಕೊಂಡು ಹೋಗುತ್ತಾರೆ. ಇತ್ತೀಚೆಗೆ ಒಂದು ಪಾರ್ಟಿಗೆ ಎಲ್ಲರೂ ಅಟೆಂಡ್ ಆಗಿದ್ದರು. ಈ ವೇಳೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಸಾಗಿದ್ದಾರೆ ವಮಿಕಾ. ಕರೀನಾ ಕಪೂರ್ ಹಾಗೂ ಅವರ ಮಕ್ಕಳಾದ ತೈಮೂರ್, ಜೇ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಅನುಷ್ಕಾ ಹಾಗೂ ವಿರಾಟ್ ಸಂಬಂಧಿಗಳ ಮಕ್ಕಳು ಕೂಡ ವಮಿಕಾ ಜೊತೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋದಲ್ಲಿ ವಮಿಕಾ ಮುಖಕ್ಕೆ ಹಾರ್ಟ್ ಎಮೋಜಿ ಹಾಕಲಾಗಿದೆ. ಈ ಮೂಲಕ ಮುಖವನ್ನು ರಿವೀಲ್ ಮಾಡಿಲ್ಲ. ಐಪಿಎಲ್ ಮ್ಯಾಚ್ ಸಂದರ್ಭದಲ್ಲಿ ವಮಿಕಾ ಮುಖ ರಿವೀಲ್ ಆಗಿತ್ತು. ಈ ಬಗ್ಗೆ ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ಬೇಸರ ಹೊರಹಾಕಿದ್ದರು.
Vamika Dancing ✨❤️ pic.twitter.com/cm2LB5PowI
— Virat Kohli Fan Club (@Trend_VKohli) December 31, 2023
Vamika with her cousins and Kareena🧿🤍 pic.twitter.com/DeiylrE3Hf
— Alaska (@alaskawhines) December 31, 2023
ಇದನ್ನೂ ಓದಿ: 2ನೇ ಬಾರಿ ಪ್ರೆಗ್ನೆಂಟ್ ಆದ ಅನುಷ್ಕಾ ಶರ್ಮಾ? ನೆಟ್ಟಿಗರಿಗೆ ಸಿಕ್ಕಿದೆ ವಿಡಿಯೋ ಸಾಕ್ಷಿ
ಅನುಷ್ಕಾ ಹಾಗೂ ವಿರಾಟ್ 2017ರಲ್ಲಿ ಮದುವೆ ಆದರು. 2021ರಲ್ಲಿ ವಮಿಕಾ ಜನಿಸಿದಳು. ಈಗ ಅನುಷ್ಕಾ ಮತ್ತೆ ಪ್ರೆಗ್ನೆಂಟ್ ಎನ್ನುವ ಸುದ್ದಿ ಹರಿದಾಡಿದೆ. ಇದಕ್ಕೆ ಪುಷ್ಟಿ ನೀಡುವ ರೀತಿಯಲ್ಲಿ ಪ್ರೆಗಾ ನ್ಯೂಸ್ನ ಪ್ರಚಾರ ರಾಯಭಾರಿ ಆಗಿ ಅನುಷ್ಕಾ ಸೇರಿಕೊಂಡಿದ್ದರು. ಅನುಷ್ಕಾ ಶರ್ಮಾ ಅವರು ಇತ್ತೀಚೆಗೆ ಸಿನಿಮಾ ಕೆಲಸಗಳಿಂದ ದೂರವೇ ಇದ್ದಾರೆ. ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಮಾಡುತ್ತಿರುವ ಸಿನಿಮಾ ಕೆಲಸಗಳು ವಿಳಂಬ ಆಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ