ಭಾನುವಾರವೂ ಭರ್ಜರಿ ಗಳಿಕೆ ಮಾಡಿದ ‘ಕಾಟೇರ’; ಮೂರು ದಿನಕ್ಕೆ 58ಕೋಟಿ ರೂಪಾಯಿ ಗಳಿಕೆ
Kaatera Movie Collection: ‘ಕಾಟೇರ’ ಸಿನಿಮಾ ಡಿಸೆಂಬರ್ 29ರಂದು ರಿಲೀಸ್ ಆಯಿತು. ಮೊದಲ ದಿನ ಈ ಚಿತ್ರ 19.79 ಕೋಟಿ ರೂಪಾಯಿ ಗಳಿಕೆ ಮಾಡಿತು. ಎರಡನೇ ದಿನ ಈ ಸಿನಿಮಾ 17.35 ಕೋಟಿ ರೂಪಾಯಿ ಬಾಚಿಕೊಂಡಿತು. ಮೂರನೇ ದಿನ ಈ ಚಿತ್ರ 20.94 ಕೋಟಿ ರೂಪಾಯಿ ಗಳಿಕೆ ಮಾಡಿದೆ.
‘ಕಾಟೇರ’ ಸಿನಿಮಾ (Kaatera Movie) ಕರ್ನಾಟಕದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದರ್ಶನ್ ಅವರ ವೃತ್ತಿ ಜೀವನದ ಅತ್ಯಂತ ಯಶಸ್ವಿ ಸಿನಿಮಾಗಳಲ್ಲಿ ಒಂದು ಎನ್ನುವ ಖ್ಯಾತಿ ‘ಕಾಟೇರ’ ಚಿತ್ರಕ್ಕೆ ಸಿಕ್ಕಿದೆ. ನಿರ್ದೇಶಕ ತರುಣ್ ಸುಧೀರ್ ಹಾಗೂ ದರ್ಶನ್ ಅವರದ್ದು ಹಿಟ್ ಕಾಂಬಿನೇಷನ್ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಈ ಚಿತ್ರ ಮೂರು ದಿನಗಳಲ್ಲಿ 58 ಕೋಟಿ ರೂಪಾಯಿ ಗಳಿಕೆ ಮಾಡಿ ಬೀಗಿದೆ. ಇದು ಅಭಿಮಾನಿಗಳು ಹಾಗೂ ತಂಡದ ಖುಷಿ ಹೆಚ್ಚಿಸಿದೆ.
‘ಕಾಟೇರ’ ಸಿನಿಮಾ ಡಿಸೆಂಬರ್ 29ರಂದು ರಿಲೀಸ್ ಆಯಿತು. ಮೊದಲ ದಿನ ಈ ಚಿತ್ರ 19.79 ಕೋಟಿ ರೂಪಾಯಿ ಗಳಿಕೆ ಮಾಡಿತು. ಎರಡನೇ ದಿನ ಈ ಸಿನಿಮಾ 17.35 ಕೋಟಿ ರೂಪಾಯಿ ಬಾಚಿಕೊಂಡಿತು. ಮೂರನೇ ದಿನ (ಡಿಸೆಂಬರ್ 31) ಈ ಚಿತ್ರ 20.94 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾದ ಒಟ್ಟಾರೆ ಗಳಿಕೆ 58.8 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ನೂರು ಕೋಟಿ ರೂಪಾಯಿ ಕ್ಲಬ್ ಸೇರಲಿದೆ.
2023ರಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳು ಬಂದವು. ಅನೇಕ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿವೆ. ಆದರೆ, ‘ಕಾಟೇರ’ ಸಿನಿಮಾ ಮಾತ್ರ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿ ಒಳ್ಳೆಯ ಗಳಿಕೆ ಮಾಡುತ್ತಿದೆ. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದ್ದರೆ ಮತ್ತಷ್ಟು ಕಲೆಕ್ಷನ್ ಆಗುತ್ತಿತ್ತು.
ಇದನ್ನೂ ಓದಿ: ‘ಕಾಟೇರ’ ಸಿನಿಮಾ ನೋಡಿ ಮೆಚ್ಚಿಕೊಂಡ ಪ್ರಲ್ಹಾದ್ ಜೋಶಿ; ಕೇಂದ್ರ ಸಚಿವರ ವಿಮರ್ಶೆ ಏನು?
‘ಕಾಟೇರ’ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಲು ಹಲವು ಕಾರಣಗಳಿದ್ದವು. ಈ ಸಿನಿಮಾದ ಟ್ರೇಲರ್ ನೋಡಿ ಜನರು ಮೆಚ್ಚಿಕೊಂಡಿದ್ದರು. ಈ ಚಿತ್ರದಲ್ಲಿ ದರ್ಶನ್ ಅವರು ಎರಡು ಶೇಡ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಳ್ಳಿ ಜೀವನ, ಜಾತಿ ಪದ್ಧತಿ ಮತ್ತಿತ್ಯಾದಿ ವಿಚಾರಗಳ ಬಗ್ಗೆ ಹೇಳಲಾಗಿದೆ. ರಾಕ್ಲೈನ್ ವೆಂಕಟೇಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ದರ್ಶನ್ಗೆ ಜೊತೆಯಾಗಿ ಆರಾಧನಾ ರಾಮ್ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:55 am, Mon, 1 January 24