‘ಯಾತ್ರಾ 2’ ಟೀಸರ್ ಬಿಡುಗಡೆ: ಚಂದ್ರಬಾಬು ನಾಯ್ಡು ಜೊತೆಗೆ ಸೋನಿಯಾ ಸಹ ವಿಲನ್

Cinema Politics: ಆಂಧ್ರ ಪ್ರದೇಶದಲ್ಲಿ ಚುನಾವಣೆ ಹತ್ತಿರ ಬಂದಿದ್ದು, ರಾಜಕಾರಣಿಗಳು ಜನರ ಅಭಿಪ್ರಾಯ ತಿದ್ದಲು ಸಿನಿಮಾಗಳನ್ನು ಅಸ್ತ್ರಗಳನ್ನಾಗಿ ಬಳಸುತ್ತಿದ್ದಾರೆ. ಇದೀಗ ಜಗನ್ ಜೀವನ ಆಧರಿಸಿದ ‘ಯಾತ್ರ 2’ ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.

‘ಯಾತ್ರಾ 2’ ಟೀಸರ್ ಬಿಡುಗಡೆ: ಚಂದ್ರಬಾಬು ನಾಯ್ಡು ಜೊತೆಗೆ ಸೋನಿಯಾ ಸಹ ವಿಲನ್
ಜಗನ್
Follow us
ಮಂಜುನಾಥ ಸಿ.
|

Updated on: Jan 06, 2024 | 5:44 PM

ಆಂಧ್ರ ಪ್ರದೇಶ (Andhra Pradesh) ಚುನಾವಣೆ ಸನಿಹ ಬಂದಿದ್ದು, ರಾಜಕೀಯದ ಜೊತೆಗೆ ಸಿನಿಮಾ ರಾಜಕೀಯವೂ ಜೋರಾಗಿ ನಡೆಯುತ್ತಿದೆ. ಒಂದು ಪಕ್ಷದವರು, ಎದುರಾಳಿ ಪಕ್ಷದವರನ್ನು ಹೀಗಳೆಯಲು, ಎದುರಾಳಿಗಳ ವಿರುದ್ಧ ಜನಾಭಿಪ್ರಾಯ ರೂಪಿಸಲು ಸಿನಿಮಾಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಆಂಧ್ರ ಸಿಎಂ ಜಗನ್ ಪರವಾಗಿ ಈ ಕಾರ್ಯ ಹೆಚ್ಚು ನಡೆಯುತ್ತಿದೆ. ಅದರ ಭಾಗವಾಗಿಯೇ ಈಗ ಜಗನ್ ಜೀವನ ಆಧರಿಸಿದ ‘ಯಾತ್ರ 2’ ಸಿನಿಮಾ ಬರುತ್ತಿದ್ದು, ಸಿನಿಮಾದ ಟೀಸರ್ ಇದೀಗ ಬಿಡುಗಡೆ ಆಗಿದೆ.

ಕಳೆದ ಆಂಧ್ರ ಪ್ರದೇಶ ಚುನಾವಣೆಗೆ ಮುನ್ನ ‘ಯಾತ್ರ’ ಸಿನಿಮಾ ಬಿಡುಗಡೆ ಆಗಿತ್ತು, ಆ ಸಿನಿಮಾದಲ್ಲಿ ಜಗನ್​ರ ತಂದೆ ರಾಜಶೇಖರ ರೆಡ್ಡಿಯ ಕುರಿತ ಕತೆ ಇತ್ತು. ಮಲಯಾಳಂ ಸ್ಟಾರ್ ನಟ ಮಮ್ಮುಟಿ, ರಾಜಶೇಖರ ರೆಡ್ಡಿ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ರಾಜಶೇಖರ ರೆಡ್ಡಿ ಪಾದಯಾತ್ರೆ ನಡೆಸಿ ಹೇಗೆ ಸಿಎಂ ಆದರು ಎಂದು ತೋರಿಸಲಾಗಿತ್ತು. ರಾಜಶೇಖರ ರೆಡ್ಡಿ ಭ್ರಷ್ಟಾಚಾರ ವಿರೋಧಿ, ದೂರದೃಷ್ಟಿ ಉಳ್ಳವರು, ಜನಗಳ ಬಗ್ಗೆ ಅಪಾರ ಪ್ರೇಮ ಉಳ್ಳವರು ಎಂದೆಲ್ಲ ಆ ಸಿನಿಮಾದಲ್ಲಿ ಗುಣಗಾನ ಮಾಡಲಾಗಿತ್ತು.

ಇದೀಗ ಮತ್ತೊಂದು ವಿಧಾನಸಭೆ ಚುನಾವಣೆ ಬರುತ್ತಿದ್ದು, ಅದಕ್ಕೆ ತಕ್ಕಂತೆ ‘ಯಾತ್ರ 2’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಜಗನ್, ತಂದೆ ರಾಜಶೇಖರ ರೆಡ್ಡಿ ಮರಣಾನಂತರ ರಾಜಕೀಯಕ್ಕೆ ಹೇಗೆ ಬಂದರು. ಅವರಿಗೆ ಎದುರಾದ ಅಡೆ-ತಡೆಗಳು, ಅವುಗಳನ್ನು ಮೀರಿ ಸಿಎಂ ಆದ ಕತೆಯನ್ನು ಒಳಗೊಂಡಿವೆ.

ಇದನ್ನೂ ಓದಿ:ಎರಡು ಭಾಗದಲ್ಲಿ ರಿಲೀಸ್ ಆಗಲಿದೆ ವೈಎಸ್​ ಜಗನ್ ಬಯೋಪಿಕ್; ಗಮನ ಸೆಳೆದ ಪೋಸ್ಟರ್

ಸಿನಿಮಾದ ಟೀಸರ್​ನಲ್ಲಿ ಜಗನ್ ಪಾತ್ರಕ್ಕೆ ಸಹಜವಾಗಿಯೇ ಒತ್ತು ನೀಡಲಾಗಿದೆ. ಜಗನ್ ಅನ್ನು ದೇವತಾ ಮನುಷ್ಯನ ರೀತಿ ಸಿನಿಮಾದಲ್ಲಿ ಚಿತ್ರಿಸಿರುವುದು ಟೀಸರ್​ನಿಂದಲೇ ಗೊತ್ತಾಗುತ್ತಿದೆ. ಜೊತೆಗೆ ಟೀಸರ್​ನಲ್ಲಿ ಚಂದ್ರಬಾಬು ನಾಯ್ಡು ಹಾಗೂ ಸೋನಿಯಾ ಗಾಂಧಿ ಅವರ ಪಾತ್ರಗಳು ಸಹ ಕಾಣಿಸಿಕೊಂಡಿದ್ದು, ಅವರನ್ನು ವಿಲನ್​ಗಳ ರೀತಿಯಲ್ಲಿ ಚಿತ್ರಿಸಲಾಗಿದೆ.

‘ಯಾತ್ರ 2’ ಸಿನಿಮಾದಲ್ಲಿ ಜಗನ್ ಪಾತ್ರವನ್ನು ತಮಿಳಿನ ಜನಪ್ರಿಯ ನಟ ಜೀವ ನಟಿಸಿದ್ದಾರೆ. ಜೀವರ ನಟನೆ ಟೀಸರ್​ನಲ್ಲಿ ಸಖತ್ ಗಮನ ಸೆಳೆಯುತ್ತಿದೆ. ಜಗನ್​ರ ಹಾವ-ಭಾವಗಳನ್ನು ಜೀವ ಬಹಳ ಚೆನ್ನಾಗಿ ನಕಲು ಮಾಡಿದ್ದಾರೆ. ಸಿನಿಮಾದಲ್ಲಿ ಜೀವಾ ಅವರ ದೇಹಭಾಷೆ ಥೇಟ್ ಜಗನ್ ದೇಹಭಾಷೆಯನ್ನೇ ಹೋಲುತ್ತಿದೆ. ಎದುರಾಳಿ ಚಂದ್ರಬಾಬು ನಾಯ್ಡು ಪಾತ್ರದಲ್ಲಿ ಮಹೇಶ್ ಮಂಜ್ರೇಕರ್ ನಟಿಸಿದ್ದಾರೆ. ‘ಯಾತ್ರ 2’ ಸಿನಿಮಾವನ್ನು ಮಹಿ ವಿ ರಾಘವ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಫೆಬ್ರವರಿ 8ರಂದು ತೆರೆಗೆ ಬರಲಿದೆ.

ರಾಮ್ ಗೋಪಾಲ್ ವರ್ಮಾ ಸಹ ಜಗನ್ ಜೀವನ ಆಧರಿಸಿ ‘ವ್ಯೂಹಂ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆದರೆ ಆ ಸಿನಿಮಾದ ವಿರುದ್ಧ ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್ ಸ್ಟೇ ತಂದಿದ್ದಾರೆ. ಇದೀಗ ‘ಯಾತ್ರ 2’ ಸಿನಿಮಾದ ವಿರುದ್ಧವೂ ಸ್ಟೇ ತರಲಾಗುತ್ತದೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ