‘ಕರ್ಮ ಬಿಡಲ್ಲ, ಈಗ ಅರ್ಥವಾಗಿರಬೇಕಲ್ಲ’; ಹೇಮಾ ವಿರುದ್ಧ ಹರಿಹಾಯ್ದ ನಟಿ

‘ಬೆಂಗಳೂರು ರೇವ್​ ಪಾರ್ಟಿಯಲ್ಲಿ ಹೇಮಕ್ಕ ಸಿಕ್ಕಿ ಬಿದ್ದಿದ್ದಾರೆ. ಅವರು ನಕಲಿ ಎಂದು ನಾನು ಈಗಾಗಲೇ ಹೇಳಿದ್ದೇನೆ. ನಾನು ಇಡೀ ಉದ್ಯಮವನ್ನು ಉಳಿಸುತ್ತಿದ್ದೇನೆ, ನಾನು ಮಹಾನ್ ಮಹಿಳೆ ಎನ್ನುತ್ತಿದ್ದರು. ಈಗ ಏನಾಯಿತು? ನೀವು ಇಂದು ಏನು ಮಾಡಿದ್ದೀರಿ’ ಎಂದು ಕಲ್ಯಾಣಿ ಅವರು ಪ್ರಶ್ನೆ ಮಾಡಿದ್ದಾರೆ.

‘ಕರ್ಮ ಬಿಡಲ್ಲ, ಈಗ ಅರ್ಥವಾಗಿರಬೇಕಲ್ಲ’; ಹೇಮಾ ವಿರುದ್ಧ ಹರಿಹಾಯ್ದ ನಟಿ
ಹೇಮಾ-ಕಲ್ಯಾಣಿ
Follow us
ರಾಜೇಶ್ ದುಗ್ಗುಮನೆ
|

Updated on:May 22, 2024 | 1:48 PM

ಬೆಂಗಳೂರಿನ ಎಲೆಕ್ಟ್ರಾನಿಕ್ ​ಸಿಟಿಯ ಫಾರ್ಮ್​​ಹೌಸ್​​ನಲ್ಲಿ ನಡೆದ ರೇವ್ ಪಾರ್ಟಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇದರಲ್ಲಿ ತೆಲುಗು ನಟಿ ಹೇಮಾ (Actress Hema) ಕೂಡ ಭಾಗಿ ಆಗಿದ್ದರು. ಅವರು ತಾವು ಪಾರ್ಟಿಯಲ್ಲಿ ಇರಲೇ ಇಲ್ಲ ಎನ್ನುವ ರೀತಿಯಲ್ಲಿ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಆರಾಮಾಗಿ ಅಡುಗೆ ಮಾಡುತ್ತಿರುವ ವಿಡಿಯೋಗಳನ್ನು ಅವರು ಪೋಸ್ಟ್ ಮಾಡುತ್ತಿದ್ದಾರೆ. ಈ ವೇಳೆ ಮತ್ತೋರ್ವ ನಟಿ ಕರಾಟೆ ಕಲ್ಯಾಣಿ ಅವರು ಹೇಮಾ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಹಾಕಿದ್ದಾರೆ. ಈ ಮೂಲಕ ಹಳೆಯ ಸೇಡನ್ನು ತೀರಿಸಿಕೊಂಡಿದ್ದಾರೆ.

‘ಬೆಂಗಳೂರು ರೇವ್​ ಪಾರ್ಟಿಯಲ್ಲಿ ಹೇಮಕ್ಕ ಸಿಕ್ಕಿ ಬಿದ್ದಿದ್ದಾರೆ. ಅವರು ನಕಲಿ ಎಂದು ನಾನು ಈಗಾಗಲೇ ಹೇಳಿದ್ದೇನೆ. ನಾನು ಇಡೀ ಉದ್ಯಮವನ್ನು ಉಳಿಸುತ್ತಿದ್ದೇನೆ, ನಾನು ಮಹಾನ್ ಮಹಿಳೆ ಎನ್ನುತ್ತಿದ್ದರು. ಈಗ ಏನಾಯಿತು? ನೀವು ಇಂದು ಏನು ಮಾಡಿದ್ದೀರಿ’ ಎಂದು ಕಲ್ಯಾಣಿ ಅವರು ಪ್ರಶ್ನೆ ಮಾಡಿದ್ದಾರೆ.

‘ಯಾರನ್ನೂ ಬಿಡದೇ ತೊಂದರೆ ನೀಡಿದ್ದನ್ನು ನೋಡಿದ್ದೇವೆ. ನನಗೂ ತೊಂದರೆ ಕೊಟ್ಟಿದ್ದೀರಿ. ನೀವಿದ್ದ ರೇವ್​ ಪಾರ್ಟಿಯಲ್ಲಿ ಡ್ರಗ್ಸ್​ ಸಿಕ್ಕಿದೆ. ಸ್ಯಾಂಪಲ್​ ಸಿಕ್ಕ ಬಳಿಕ ಬೆಂಗಳೂರು ಪೊಲೀಸರು ನಿಮಗೆ ಶಿಕ್ಷೆ ನೀಡಿಯೇ ನೀಡುತ್ತಾರೆ. ಶಿಕ್ಷೆ ಪಡೆಯಲು ರೆಡಿ ಆಗಿ. ನಾವು ಮಾಡಿದ್ದು ನಮಗೆ ತಿರುಗಿ ಬರುತ್ತದೆ. ಅದನ್ನು ಕರ್ಮ ಎನ್ನುತ್ತೇವೆ. ಇನ್ನುಮುಂದೆ ಜಾಗೃತರಾಗಿರಿ’ ಎಂದು ಕರಾಟೆ ಕಲ್ಯಾಣಿ ಹಳಿದ್ದಾರೆ.

ಕಲ್ಯಾಣಿ ಅವರು ಈ ವಿಡಿಯೋದಲ್ಲಿ ವಿಶೇಷ ಪ್ರಾರ್ಥನೆ ಒಂದನ್ನು ಕೂಡ ಮಾಡಿದ್ದಾರೆ. ‘ಈ ಪ್ರಕರಣಕ್ಕೂ ನಿಮಗೂ ಯಾವುದೇ ಸಂಬಂಧ ಇರದೆ ಇರಲಿ ಎಂದು ದೇವರ ಬಳಿ ಕೋರಿಕೊಳ್ಳುತ್ತೇನೆ. ಗುಡ್ ಲಕ್​. ಹೇಮಕ್ಕ ಈಗ ಅರ್ಥವಾಗಿರಬೇಕಲ್ಲ’ ಎಂದಿದ್ದಾರೆ ಕಲ್ಯಾಣಿ.

ಇದನ್ನೂ ಓದಿ: ನಟಿ ಹೇಮಾ ರೇವ್ ಪಾರ್ಟಿಯಲ್ಲಿದ್ದಿದ್ದು ನಿಜ, ಖಚಿತಪಡಿಸಿದ ಪೊಲೀಸ್ ಆಯುಕ್ತ, ಹಾಗಿದ್ದರೆ ವಿಡಿಯೋ ಮಾಡಿದ್ದು ಹೇಗೆ?

2021ರಲ್ಲಿ ಕಲ್ಯಾಣಿ ವಿರುದ್ಧ ಹೇಮಾ ದೂರು ದಾಖಲು ಮಾಡಿದ್ದರು. ‘ಕಲ್ಯಾಣಿ ಹಾಗೂ ನರೇಶ್ ತಮ್ಮ ಕ್ಯಾರೆಕ್ಟರ್​ಗೆ ಧಕ್ಕೆ ಆಗುವಂತೆ ಮಾತನಾಡಿದ್ದಾರೆ’ ಎಂದು ಹೇಮಾ ದೂರು ದಾಖಲು ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:48 pm, Wed, 22 May 24