ದಕ್ಷಿಣ ಭಾರತದವರ ಕೆಲಸ ಮೆಚ್ಚಿದ ‘ಕೆಜಿಎಫ್ 2’ ನಟಿ ರವೀನಾ ಟಂಡನ್
ಬಾಲಿವುಡ್ನಲ್ಲಿ ಸಿನಿಮಾ ಮಾಡುವ ವಿಧಾನ ಸರಿ ಇಲ್ಲ ಎಂಬುದು ಅನೇಕರ ಆರೋಪ. ಸಿನಿಮಾದ ಬಜೆಟ್ ಕೈ ಮೀರುವುದರಿಂದ ನಿರ್ಮಾಪಕರು ನಷ್ಟ ಅನುಭವಿಸುತ್ತಿದ್ದಾರೆ ಎಂಬುದು ಕೆಲವರ ಆರೋಪ. ಈ ಬಗ್ಗೆ ರವೀನಾ ಮಾತನಾಡಿದ್ದಾರೆ.
ರವೀನಾ ಟಂಡನ್ (Raveena Tandon) ಅವರು 90ರ ದಶಕದ ಖ್ಯಾತ ನಟಿಯರಲ್ಲಿ ಒಬ್ಬರು. ಸಿನಿಮಾಗಳ ಮೂಲಕ ಅವರು ಜನಮನ ಗೆದ್ದಿದ್ದಾರೆ. ಅವರಿಗೆ ಈಗಲೂ ಬೇಡಿಕೆ ಇದೆ. ಸೌತ್ ಮತ್ತು ಬಾಲಿವುಡ್ ಚಿತ್ರಗಳ ಮೂಲಕ ರವೀನಾ ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾರೆ. ರವೀನಾ ಟಂಡನ್ ಬಾಲಿವುಡ್ ಮಾತ್ರವಲ್ಲದೆ ಹಲವಾರು ಉದ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ತಮ್ಮ ಕೆಲಸದಿಂದ ಎಲ್ಲೆಡೆ ಮನ್ನಣೆ ಪಡೆದಿದ್ದಾರೆ. ಇತ್ತೀಚೆಗೆ ನಟಿ ಸೌತ್ ಇಂಡಸ್ಟ್ರಿ ಮತ್ತು ಬಾಲಿವುಡ್ ಇಂಡಸ್ಟ್ರಿ ನಡುವಿನ ದೊಡ್ಡ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ.
ಬಾಲಿವುಡ್ನಲ್ಲಿ ಸಿನಿಮಾ ಮಾಡುವ ವಿಧಾನ ಸರಿ ಇಲ್ಲ ಎಂಬುದು ಅನೇಕರ ಆರೋಪ. ಸಿನಿಮಾದ ಬಜೆಟ್ ಕೈ ಮೀರುವುದರಿಂದ ನಿರ್ಮಾಪಕರು ನಷ್ಟ ಅನುಭವಿಸುತ್ತಿದ್ದಾರೆ ಎಂಬುದು ಕೆಲವರ ಆರೋಪ. ಈ ಬಗ್ಗೆ ರವೀನಾ ಮಾತನಾಡಿದ್ದಾರೆ. ದಕ್ಷಿಣ ಭಾರತದಲ್ಲಿ ರೆಡಿ ಆಗುವ ಕಡಿಮೆ ಬಜೆಟ್ ಚಿತ್ರಗಳಲ್ಲಿ ಅವರಿಗೆ ಯಾವುದೇ ಕೊರತೆ ಕಂಡಿಲ್ಲ. ಕಡಿಮೆ ಬಜೆಟ್‌ನಲ್ಲಿಯೂ ಸೌತ್ ಇಂಡಸ್ಟ್ರಿ ಹೇಗೆ ಉತ್ತಮ ಕೆಲಸ ಮಾಡುತ್ತದೆ ಎಂಬುದನ್ನು ರವೀನಾ ತುಂಬಾನೇ ಹತ್ತಿರದಿಂದ ನೋಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
ನಾವು ಮಾರಿಷಸ್‌ನಲ್ಲಿ ಸಿನಿಮಾ ಒಂದರ ಐದು ಹಾಡುಗಳ ಶೂಟ್ಗೆ ತೆರಳಿದ್ದೆವು. ಕೇವಲ 9 ಜನರ ತಂಡದೊಂದಿಗೆ ಚಿತ್ರದ ಐದು ಹಾಡುಗಳನ್ನು ಅಲ್ಲಿ ಚಿತ್ರಿಕರಿಸಿದ್ದೇವೆ. ಲೈಟ್ ಮ್ಯಾನ್ ಇಲ್ಲ, ಜನರೇಟರ್ ಇಲ್ಲ, ಲೈಟ್‌ಗಳಿಲ್ಲ, ಏನೂ ಇಲ್ಲ. ಅವರು ಕಡಿಮೆ ವಸ್ತುಗಳನ್ನು ಬಳಸಿ ಹಾಡುಗಳನ್ನು ಚಿತ್ರೀಕರಿಸಿದರು. ಹೀಗೆ ಎಲ್ಲಾ ಹಾಡುಗಳನ್ನು ಚಿತ್ರೀಕರಿಸಲಾಗಿದೆ ಮತ್ತು ಆ ಹಾಡುಗಳ ಗುಣಮಟ್ಟ ಉತ್ತಮವಾಗಿತ್ತು’ ಎಂದಿದ್ದಾರೆ ರವೀನಾ.
ರವೀನಾ ಟಂಡನ್ ಹಿಂದಿ ಸಿನಿಮಾ ಹಾಡುಗಳ ಚಿತ್ರೀಕರಣದ ಬಗ್ಗೆಯೂ ಮಾತನಾಡಿದ್ದಾರೆ. ‘ನಾನು ಮುಂಬೈನಲ್ಲಿ ಶೂಟಿಂಗ್ ಮಾಡುವಾಗ ಇಲ್ಲಿಂದ ಸ್ವಿಟ್ಜರ್ಲೆಂಡ್ ಅಥವಾ ಬೇರೆ ಸ್ಥಳಕ್ಕೆ ಹೋಗುವಾಗ ನಮ್ಮೊಂದಿಗೆ 200 ಜನರು ಹೋಗುತ್ತಿದ್ದರು. ನಾವು 10 ಜನರೊಂದಿಗೆ ಈ ಎಲ್ಲಾ ಕೆಲಸಗಳನ್ನು ಮಾಡುವಾಗ ನಿಮಗೆ ಇಷ್ಟು ಜನರು ಏಕೆ ಬೇಕು’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಈ ವಾದವನ್ನು ಅನೇಕರು ಒಪ್ಪಿದ್ದಾರೆ. ಬಜೆಟ್ ಹೆಚ್ಚುತ್ತಾ ಹೋದಂತೆ ನಿರ್ಮಾಪಕರಿಗೆ ಹೊರೆ ಆಗುತ್ತದೆ. ಕಡಿಮೆ ಬಜೆಟ್ನಲ್ಲಿ ಸಿನಿಮಾ ಮಾಡಿದರೆ ನಿರ್ಮಾಪಕರು ಹೆಚ್ಚಿನ ಲಾಭ ಕಾಣಬಹುದು.
ಇದನ್ನೂ ಓದಿ: ರವೀನಾ ಟಂಡನ್ ಜನ್ಮದಿನ: ‘ಕೆಜಿಎಫ್ 2’ ರಮಿಕಾ ಆಸ್ತಿ ಎಷ್ಟು ಕೋಟಿ ರೂಪಾಯಿ?
ರವೀನಾ ಟಂಡನ್ ಅವರು ‘ಕೆಜಿಎಫ್ 2’ ಸಿನಿಮಾದಲ್ಲಿ ಪ್ರಧಾನ ಮಂತ್ರಿ ರಮಿಕಾ ಸೇನ್ ಪಾತ್ರ ಮಾಡಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅವರ ಮಗಳು ರಾಶಾ ತಡಾನಿ ಅವರು ಚಿತ್ರರಂಗಕ್ಕೆ ಕಾಲಿಡುತ್ತಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.