ಶಾರುಖ್ ಖಾನ್ ಆರೋಗ್ಯ ಹೇಗಿದೆ? ಅಪ್ಡೇಟ್ ಕೊಟ್ಟ ಜೂಹಿ ಚಾವ್ಲಾ
Shah Rukh Khan Health Update: ಇತ್ತೀಚೆಗೆ ಅಹಮದಾಬಾದ್ನಲ್ಲಿ ನಡೆದ ಎಸ್ಆರ್ಎಚ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಜಯ ಗಳಿಸಿತ್ತು. ಆಗ ಶಾರುಖ್ ಖಾನ್ ಅವರು ಇಡೀ ಗ್ರೌಂಡ್ ಸುತ್ತಾಡಿದ್ದರು. ಅಭಿಮಾನಿಗಳತ್ತ ಕೈ ಬೀಸಿದ್ದರು. ಆ ಬಳಿಕ ಅವರಿಗೆ ಅನಾರೋಗ್ಯ ಉಂಟಾಗಿದೆ. ಅವರು ಆಸ್ಪತ್ರೆಯಲ್ಲಿದ್ದಾರೆ.
ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ (Shah Rukh Khan) ಅವರಿಗೆ ಏಕಾಏಕಿ ಅನಾರೋಗ್ಯ ಉಂಟಾಗಿದೆ. ಅವರಿಗೆ ಹೀಟ್ ಸ್ಟ್ರೋಕ್ ಹಾಗೂ ನಿರ್ಜಲೀಕರಣ ಉಂಟಾಗಿದೆ. ಈ ಕಾರಣಕ್ಕೆ ಅವರನ್ನು ಅಹಮದಾಬಾದ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ಶಾರುಖ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಶೀಘ್ರವೇ ಅವರು ಡಿಸ್ಚಾರ್ಜ್ ಆಗಲಿದ್ದಾರೆ. ಚೆನ್ನೈನಲ್ಲಿ ನಡೆಯಲಿರುವ ಫಿನಾಲೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.
ಶಾರುಖ್ ಖಾನ್ ಒಡೆತನದ ಕೆಕೆಆರ್ ತಂಡ ಐಪಿಎಲ್ನಲ್ಲಿ ಫಿನಾಲೆ ತಲುಪಿದೆ. ಇತ್ತೀಚೆಗೆ ಅಹಮದಾಬಾದ್ನಲ್ಲಿ ನಡೆದ ಎಸ್ಆರ್ಎಚ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಜಯ ಗಳಿಸಿತ್ತು. ಆಗ ಶಾರುಖ್ ಖಾನ್ ಅವರು ಇಡೀ ಗ್ರೌಂಡ್ ಸುತ್ತಾಡಿದ್ದರು. ಅಭಿಮಾನಿಗಳತ್ತ ಕೈ ಬೀಸಿದ್ದರು. ಅಹಮದಾಬಾದ್ನಲ್ಲಿ ಸಾಕಷ್ಟು ಸೆಖೆ ಇದೆ. ಈ ಕಾರಣಕ್ಕೆ ಅವರಿಗೆ ಸನ್ ಸ್ಟ್ರೋಕ್ ಆಗಿರಬಹುದು ಎಂದು ಊಹಿಸಲಾಗಿದೆ.
ಅಹಮದಾಬಾದ್ನ ಕೆಡಿ ಆಸ್ಪತ್ರೆಯಲ್ಲಿ ಶಾರುಖ್ ಖಾನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟಿ ಹಾಗೂ ಕೆಕೆಆರ್ನ ಸಹ ಮಾಲೀಕರಾದ ಜೂಹಿ ಚಾವ್ಲಾ ಕೂಡ ಆಸ್ಪತ್ರೆಗೆ ತೆರಳಿ ಶಾರುಖ್ ಖಾನ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಜೂಹಿ ಜೊತೆ ಅವರ ಪತಿ ಜಯ್ ಮೆಹ್ತಾ ಕೂಡ ಇದ್ದರು. ನ್ಯೂಸ್18 ಇಂಗ್ಲಿಷ್ ಜೊತೆ ಮಾತನಾಡಿರುವ ಜೂಹಿ, ‘ಮೇ 21ರಂದು ಅವರಿಗೆ ಅನಾರೋಗ್ಯ ಕಾಡಿತ್ತು. ಆದಾಗ್ಯೂ ಅವರು ಮ್ಯಾಚ್ ವೀಕ್ಷಿಸಿದರು. ಈಗ ಅವರ ಆರೋಗ್ಯ ಸುಧಾರಿಸುತ್ತಿದೆ. ಅವರು ಶೀಘ್ರವೇ ಸಂಪೂರ್ಣ ಚೇತರಿಕೆ ಕಾಣಲಿದ್ದಾರೆ. ಫಿನಾಲೆ ವೀಕ್ಷಿಸಲಿದ್ದಾರೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಕೆಕೆಆರ್ ಫೈನಲ್ಗೆ, ತಂಡದ ಮಾಲೀಕ ಶಾರುಖ್ ಖಾನ್ ಆಸ್ಪತ್ರೆಗೆ
ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಕೂಡ ಕೆಡಿ ಆಸ್ಪತ್ರೆಗೆ ತೆರಳಿ ಶಾರುಖ್ ಆರೋಗ್ಯ ವಿಚಾರಿಸಿದ್ದಾರೆ. ಈ ಮಧ್ಯೆ ಸುಹಾನಾ ಖಾನ್ ಅವರು ಮುಂಬೈಗೆ ಮರಳಿದ್ದು, ಅನನ್ಯಾ ಪಾಂಡೆ, ಶನಾಯಾ ಕಪೂರ್, ನವ್ಯಾ ನಂದ ಜೊತೆ ಖಾಸಗಿ ವಿಮಾನ ನಿಲ್ದಾಣ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.