Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಕೆಆರ್ ಫೈನಲ್​ಗೆ, ತಂಡದ ಮಾಲೀಕ ಶಾರುಖ್ ಖಾನ್​ ಆಸ್ಪತ್ರೆಗೆ

ಶಾರುಖ್ ಖಾನ್ ಒಡೆತನದ ಕೆಕೆಆರ್ ತಂಡ ನಿನ್ನೆ ನಡೆದ ಪಂದ್ಯದಲ್ಲಿ ಭರ್ಜರಿ ಜಯಗಳಿಸಿ ಫೈನಲ್ ಪ್ರವೇಶಿಸಿದೆ ಆದರೆ ಶಾರುಖ್ ಖಾನ್ ಪಾತ್ರ ಆಸ್ಪತ್ರೆ ಸೇರಿದ್ದಾರೆ.

ಕೆಕೆಆರ್ ಫೈನಲ್​ಗೆ, ತಂಡದ ಮಾಲೀಕ ಶಾರುಖ್ ಖಾನ್​ ಆಸ್ಪತ್ರೆಗೆ
Follow us
ಮಂಜುನಾಥ ಸಿ.
|

Updated on:May 22, 2024 | 8:09 PM

ನಿನ್ನೆ (ಮೇ 21) ಗುಜರಾತ್​ನ ಅಹ್ಮದಾಬಾದ್​ನ ನರೇಂದ್ರ ಮೋದಿ (Narendra Modi) ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಬಲಿಷ್ಠ ಹೈದರಾಬಾದ್ ತಂಡವನ್ನು ಸೋಲಿಸಿದ ಶಾರುಖ್ ಖಾನ್ (Shah Rukh Khan) ಒಡೆತನದ ಕೊಲ್ಕತ್ತ ತಂಡ ಫೈನಲ್​ನಲ್ಲಿ ಸ್ಥಾನ ಪಡೆದುಕೊಂಡಿದೆ. ಪಂದ್ಯ ನೋಡಲು ಆಗಮಿಸಿದ್ದ ಶಾರುಖ್ ಖಾನ್, ಖುಷಿಯಿಂದ ಪಂದ್ಯ ವೀಕ್ಷಿಸಿ, ಪಂದ್ಯ ಮುಗಿದ ಬಳಿಕ ಮೈದಾನದ ಸುತ್ತು ಹೊಡೆದು ನೆರೆದಿದ್ದ ಪ್ರೇಕ್ಷಕರಿಗೆ ಧನ್ಯವಾದ ಸಹ ಅರ್ಪಿಸಿದರು. ಆದರೆ ಇದಾದ ಬಳಿಕ ಶಾರುಖ್ ಖಾನ್ ಆಸ್ಪತ್ರೆ ಸೇರಿದ್ದಾರೆ!

ಗುಜರಾತ್​ನಲ್ಲಿ ವಿಪರೀತ ಬಿಸಿಲಿದ್ದು ಬಿಸಿಗಾಳಿ ಎಲ್ಲೆಡೆ ಬೀಸುತ್ತಿದೆ. ನಿನ್ನೆಯ ಪಂದ್ಯದ ವೇಳೆ ಸಹ ಬಿಸಿಗಾಳಿ ಹೆಚ್ಚಾಗಿಯೇ ಇತ್ತು. ಇದರಿಂದಾಗಿ ಹೀಟ್ ಸ್ಟ್ರೋಕ್​ಗೆ ಒಳಗಾದ ಶಾರುಖ್ ಖಾನ್ ಅಹ್ಮದಾಬಾದ್​ನ ಕೆಡಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಶಾರುಖ್ ಖಾನ್​ ಗೆ ಚಿಕಿತ್ಸೆ ನೀಡಿರುವ ವೈದ್ಯರು ಹೇಳಿರುವಂತೆ, ಶಾರುಖ್ ಖಾನ್ ಡಿಹೈಡ್ರೇಷನ್​ನಿಂದ ಬಳಲಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಿ, ಕೆಲ ಸಮಯ ನಿಗಾವಣೆಯಲ್ಲಿ ಇಡಲಾಗಿತ್ತು. ಇಂದು ಶಾರುಖ್ ಖಾನ್ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದು ಮುಂಬೈಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಕೆಕೆಆರ್ ಗೆಲುವಿನ ಬಳಿಕ ಸುರೇಶ್ ರೈನಾಗೆ ಕೈ ಮುಗಿದು ಕ್ಷಮೆ ಕೇಳಿದ ಶಾರುಖ್ ಖಾನ್

ಅಹ್ಮದಾಬಾದ್​ನಲ್ಲಿ ನಿನ್ನೆ (ಮೇ 21) 45 ಡಿಗ್ರಿ ಸೆಲ್ಷಿಯಸ್ ಬಿಸಿ ಇತ್ತು. ಗುಜರಾತ್​ನ ಹಲವೆಡೆ ಇದೇ ಪರಿಸ್ಥಿತಿ ಇದೆ. ಭಾರಿ ಬಿಸಿಲಿನಿಂದಾಗಿ ಬಿಸಿಗಾಳಿ ಹರಿದಾಡುತ್ತಿದ್ದು, ಹೀಟ್ ವೇವ್​ನಿಂದಾಗಿ ಹಲವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಶಾರುಖ್ ಖಾನ್ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಹರಿದಾಡುತ್ತಿದ್ದಂತೆ ಅವರ ಅಭಿಮಾನಿಗಳು ಆತಂಕಿತರಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದರು. ಆದರೆ ಶಾರುಖ್​ ಖಾನ್​ಗೆ ಯಾವುದೇ ಗಂಭೀರ ಸಮಸ್ಯೆ ಉಂಟಾಗಿಲ್ಲ.

ಇಂದು (ಮೇ 22) ಆರ್​ಸಿಬಿ ತಂಡ ಸಹ ಅದೇ ಕ್ರೀಡಾಂಗಣದಲ್ಲಿ ಪಂದ್ಯ ಆಡುತ್ತಿದೆ. ಆರ್​ಸಿಬಿ ತಂಡ ಸಹ ಹೀಟ್​ವೇವ್ ಭಯಕ್ಕೆ ಇಂದು (ಮೇ 22) ಬೆಳಿಗಿನಿಂದಲೂ ಅಭ್ಯಾಸ ಮಾಡಿಲ್ಲ. ಸಂಜೆ ಮೇಲೆ ಅಭ್ಯಾಸ ಮಾಡುವುದಾಗಿ ಹೇಳಿತ್ತಾದರೂ ಹೀಟ್ ವೇವ್ ಕಡಿಮೆ ಆಗದ ಕಾರಣ ಆರ್​ಸಿಬಿ ತಂಡದ ಸದಸ್ಯರು ಇಂದು ಅಭ್ಯಾಸವನ್ನೇ ಮಾಡಿಲ್ಲ. ಹಾಗೆಯೇ ನೇರವಾಗಿ ಅಂಗಳಕ್ಕೆ ಇಳಿದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:08 pm, Wed, 22 May 24

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..