ಕೆಕೆಆರ್ ಗೆಲುವಿನ ಬಳಿಕ ಸುರೇಶ್ ರೈನಾಗೆ ಕೈ ಮುಗಿದು ಕ್ಷಮೆ ಕೇಳಿದ ಶಾರುಖ್ ಖಾನ್

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೆಕೆಆರ್ ಹಾಗೂ ಎಸ್​ಆರ್​ಎಚ್​ ನಡುವೆ ಪಂದ್ಯ ನಡೆದಿದೆ. ಪಂದ್ಯ ಮುಗಿದ ಬಳಿಕ ಶಾರುಖ್ ಖಾನ್ ಅವರು ಮೈದಾನಕ್ಕೆ ಇಳಿದರು. ಅಷ್ಟೇ ಅಲ್ಲ ಅಭಿಮಾನಿಗಳತ್ತ ಕೈ ಬೀಸುತ್ತಾ ಬಂದರು. ಈ ವೇಳೆ ಅವರು ರೈನಾಗೆ ಕ್ಷಮೆ ಕೇಳಿದ್ದಾರೆ.

ಕೆಕೆಆರ್ ಗೆಲುವಿನ ಬಳಿಕ ಸುರೇಶ್ ರೈನಾಗೆ ಕೈ ಮುಗಿದು ಕ್ಷಮೆ ಕೇಳಿದ ಶಾರುಖ್ ಖಾನ್
ಶಾರುಖ್ - ರೈನಾ
Follow us
|

Updated on:May 22, 2024 | 9:07 AM

ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಒಡೆತನದ ‘ಕೋಲ್ಕತ್ತಾ ನೈಟ್ ರೈಡರ್ಸ್’ ತಂಡ ಸುಲಭದಲ್ಲಿ ಈ ವರ್ಷದ ಐಪಿಎಲ್ ಫಿನಾಲೆಗೆ ಏರಿದೆ. ಹೈದರಾಬಾದ್ ನೀಡಿದ 159 ರನ್​ಗಳ ಗುರಿಯನ್ನು ಕೇವಲ 13.4 ಓವರ್​ಗಳಲ್ಲಿ ತಲುಪಿ ಕೆಕೆಆರ್​ ಗೆಲುವಿನ ನಗೆ ಬೀರಿದೆ. ಇದನ್ನು ಶಾರುಖ್ ಖಾನ್ ಅವರು ಸಂಭ್ರಮಿಸಿದ್ದಾರೆ. ಈ ಮಧ್ಯೆ ತಮ್ಮಿಂದಾದ ಅಚಾತುರ್ಯಕ್ಕೆ ಅವರು ಮಾಜಿ ಕ್ರಿಕೆಟಿಗ ಸುರೇಶ್ ರೈನಾ, ಕಮೆಂಟೇಟರ್ ಆಕಾಶ್ ಚೋಪ್ರಾ ಬಳಿ ಅವರು ಕ್ಷಮೆ ಕೇಳಿದ್ದಾರೆ.

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೆಕೆಆರ್ ಹಾಗೂ ಎಸ್​ಆರ್​ಎಚ್​ ನಡುವೆ ಪಂದ್ಯ ನಡೆದಿದೆ. ಪಂದ್ಯ ಮುಗಿದ ಬಳಿಕ ಶಾರುಖ್ ಖಾನ್ ಅವರು ಮೈದಾನಕ್ಕೆ ಇಳಿದರು. ಅಷ್ಟೇ ಅಲ್ಲ ಅಭಿಮಾನಿಗಳತ್ತ ಕೈ ಬೀಸುತ್ತಾ ಬಂದರು. ಸುರೇಶ್ ರೈನಾ, ಆಕಾಶ್ ಚೋಪ್ರಾ ಲೈವ್​ನಲ್ಲಿ ಮಾತನಾಡುತ್ತಿರುವುದನ್ನು ಶಾರುಖ್ ಗಮನಿಸಲೇ ಇಲ್ಲ. ಅವರತ್ತ ನುಗ್ಗಿಯೇ ಬಿಟ್ಟರು.

ಇದನ್ನೂ ಓದಿ: ಕ್ಯಾಮರಾ ಮುಂದೆ ಮಕ್ಕಳು ಪರೀಕ್ಷೆ ಬರೆಯುವ ಹಾಗೆ ಮಾಡಿದ್ರು, ಇದೊಂದು ಕಪ್ಪುಚುಕ್ಕೆ: ಸುರೇಶ್ ಕುಮಾರ್

ಸುರೇಶ್ ಹಾಗೂ ಆಕಾಶ್ ಲೈವ್​ನಲ್ಲಿದ್ದಾರೆ ಅನ್ನೋ ವಿಚಾರ ಆ ಬಳಿಕ ಶಾರುಖ್​ಗೆ ಗೊತ್ತಾಗಿದೆ. ಹೀಗಾಗಿ, ಅವರು ಕ್ಷಮೆ ಕೇಳಿದ್ದಾರೆ. ಎಲ್ಲರಿಗೂ ಹಗ್ ಕೊಟ್ಟು ಆ ಬಳಿಕ ಕೈ ಮುಗಿದ ಅಲ್ಲಿಂದ ತೆರಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾರುಖ್ ಖಾನ್ ಅವರು ನಡೆದುಕೊಂಡ ರೀತಿ ಎಲ್ಲರಿಗೂ ಇಷ್ಟವಾಗಿದೆ. ಶಾರುಖ್ ಖಾನ್ ಸ್ಟಾರ್ ನಟ. ಕೆಕೆಆರ್ ಸಹ ಮಾಲೀಕ ಕೂಡ ಹೌದು. ಹೀಗಿರುವಾಗ ಅವರು ಕ್ಷಮೆ ಕೇಳುವ ಅಗತ್ಯವೇ ಇರಲಿಲ್ಲ. ಆದಾಗ್ಯೂ ತಮ್ಮ ತಪ್ಪಿಗೆ ಅವರು ಕ್ಷಮೆ ಕೇಳಿ ದೊಡ್ಡವರಾಗಿದ್ದಾರೆ.

ಹೈದರಾಬಾದ್ ವಿರುದ್ಧ ಗೆಲುವು ಕಾಣುವ ಮೂಲಕ ಕೆಕೆಆರ್ ನೇರವಾಗಿ ಫಿನಾಲೆಗೆ ಟಿಕೆಟ್ ಪಡೆದಿದೆ. ಭಾನುವಾರ (ಮೇ 26) ಚೆನ್ನೈನಲ್ಲಿ ಫಿನಾಲೆ ನಡೆಯಲಿದೆ. ಫಿನಾಲೆಗೆ ಕಾಲಿಡೋ ಮತ್ತೊಂದು ತಂಡ ಯಾವುದು ಎನ್ನುವ ಕುತೂಹಲ ಮೂಡಿದೆ. ಇಂದು ನಡೆಯೋ ಎಲಿಮಿನೇಟರ್ ಪಂದ್ಯದಲ್ಲಿ ಆರ್​​ಸಿಬಿ ಹಾಗೂ ರಾಜಸ್ಥಾನ್ ಮುಖಾಮುಖಿ ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:17 am, Wed, 22 May 24

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ