ಕ್ಯಾಮರಾ ಮುಂದೆ ಮಕ್ಕಳು ಪರೀಕ್ಷೆ ಬರೆಯುವ ಹಾಗೆ ಮಾಡಿದ್ರು, ಇದೊಂದು ಕಪ್ಪುಚುಕ್ಕೆ: ಸುರೇಶ್ ಕುಮಾರ್
ಬೆಂಗಳೂರಿನಲ್ಲಿ ರಾಜಾಜಿನಗರದಲ್ಲಿ ಶಾಸಕ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾಮರಾ ಮುಂದೆ ಮಕ್ಕಳು ಪರೀಕ್ಷೆ ಬರೆಯುವ ಹಾಗೆ ಮಾಡಿದರು. ಶಿಕ್ಷಣದ ಇತಿಹಾಸದಲ್ಲೇ ಇದೊಂದು ಕಪ್ಪುಚುಕ್ಕೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಪ್ರತಿ ವರ್ಷವೂ ಮಾಡುತ್ತಿದ್ದಾರೆ. ಇವರ ಮೇಲಾಟದಿಂದ ಶಿಕ್ಷಣ ವ್ಯವಸ್ಥೆ ಮೇಲೆ ದೊಡ್ಡ ಏಟು ಬೀಳುತ್ತಿದೆ. ಇದು ಕಾಂಗ್ರೆಸ್ ಸರ್ಕಾರ ಎಸಗಿರುವ ಘನಂದಾರಿ ಅಪಚಾರ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು, ಮೇ 17: ಕ್ಯಾಮರಾ ಮುಂದೆ ಮಕ್ಕಳು ಪರೀಕ್ಷೆ ಬರೆಯುವ ಹಾಗೆ ಮಾಡಿದರು. ಶಿಕ್ಷಣದ ಇತಿಹಾಸದಲ್ಲೇ ಇದೊಂದು ಕಪ್ಪುಚುಕ್ಕೆ ಎಂದು ರಾಜ್ಯ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಕುಮಾರ್ (Suresh Kumar) ವಾಗ್ದಾಳಿ ಮಾಡಿದ್ದಾರೆ. ರಾಜಾಜಿನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ (students) ಭವಿಷ್ಯದ ಜೊತೆ ರಾಜ್ಯ ಸರ್ಕಾರ ಚೆಲ್ಲಾಟ ಆಡಿದೆ. ರಾಜ್ಯದಲ್ಲಿ ಪೂರ್ಣಾವಧಿ ಶಿಕ್ಷಣ ಮಂತ್ರಿ ಇಲ್ಲ. ಪಾಪ ತಮ್ಮ ಕುಟುಂಬದ ಯಾರನ್ನೋ ಗೆಲ್ಲಿಸಲು ಓಡಾಡುತ್ತಿದ್ದಾರೆ. 5-9ನೇ ತರಗತಿವರೆಗಿನ ಮಕ್ಕಳ ಭವಿಷ್ಯ ಕೋರ್ಟ್ವರೆಗೆ ಹೋಗಿದೆ. ಮಕ್ಕಳಿಗೆ ಮತದಾನದ ಹಕ್ಕಿಲ್ಲ ಅಂತಾ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ವಿದ್ಯಾರ್ಥಿಗಳ ಬಗ್ಗೆ ಗ್ಯಾರಂಟಿ ಸರ್ಕಾರಕ್ಕೆ ಕಾಳಜಿಯೇ ಇಲ್ಲ
ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಪ್ರತಿ ವರ್ಷವೂ ಮಾಡುತ್ತಿದ್ದಾರೆ. ಇವರ ಮೇಲಾಟದಿಂದ ಶಿಕ್ಷಣ ವ್ಯವಸ್ಥೆ ಮೇಲೆ ದೊಡ್ಡ ಏಟು ಬೀಳುತ್ತಿದೆ. ಇದು ಕಾಂಗ್ರೆಸ್ ಸರ್ಕಾರ ಎಸಗಿರುವ ಘನಂದಾರಿ ಅಪಚಾರ. ವಿದ್ಯಾರ್ಥಿಗಳ ಬಗ್ಗೆ ಗ್ಯಾರಂಟಿ ಸರ್ಕಾರಕ್ಕೆ ಕಾಳಜಿಯೇ ಇಲ್ಲ. ಒಂದು ವರ್ಷದ ಪರೀಕ್ಷೆಯಲ್ಲಿ ರಾಜ್ಯ ಸರ್ಕಾರ ಫೇಲ್ ಆಗಿದೆ. ಸಚಿವರಿಗೆ ತಮ್ಮ ಖಾತೆಗಿಂತ ತಮ್ಮ ಕ್ಯಾತೆಯೇ ಹೆಚ್ಚಾಗಿದೆ. ದುರದೃಷ್ಟವಶಾತ್ ಶಿಕ್ಷಣ ಸಚಿವರಲ್ಲಿ ಪೂರ್ಣಾವಧಿ ಮನಸ್ಥಿತಿ ಇಲ್ಲ. ತಮ್ಮ ಕೊರತೆಯನ್ನೇ ತಮ್ಮ ಹೆಗ್ಗಳಿಕೆ ಅಂತಾ ತಿಳಿದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: SSLC Grace Mark: ಎಸ್ಎಸ್ಎಲ್ಸಿ ಗ್ರೇಸ್ ಮಾರ್ಕ್ ರದ್ದತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ರಾಜ್ಯ ಸರ್ಕಾರಕ್ಕೆ ವಾರ್ಷಿಕೋತ್ಸವ ಮಾಡಲು ಸಾಧ್ಯವಾಗುತ್ತಿಲ್ಲ. ವೈಜ್ಞಾನಿಕವಾಗಿ ರೂಪುಗೊಂಡ ಎನ್ಇಪಿಗೆ ತಿಲಾಂಜಲಿ ಕೊಟ್ಟಿದೆ. ಎಸ್ಇಪ ತರುತ್ತೇವೆ ಎಂದು ಹೇಳಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸಿಇಟಿ ವ್ಯವಸ್ಥೆ ಹಾಳು ಮಾಡಿದ ಕೀರ್ತಿ ಕಾಂಗ್ರೆಸ್ ಸರ್ಕಾರದ್ದು ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಸಿಇಟಿ ಪರೀಕ್ಷೆಯಲ್ಲಿ ಸಾಲು ಸಾಲು ಎಡವಟ್ಟು, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ತಲೆದಂಡ
ಪಠ್ಯಕ್ಕೆ ಸಂಬಂಧಿಸದ ವಿಷಯಗಳೇ ಪರೀಕ್ಷೆಯಲ್ಲಿ ಕೇಳಿದ್ದರು. ಮಕ್ಕಳ ಕನಸ್ಸಿಗೆ ಕಲ್ಲು ಹಾಕುವ ಕೆಲಸ ಯಶಸ್ವಿಯಾಗಿ ಮಾಡಿದ್ದಾರೆ. ಜಿಲ್ಲೆಯ ಹೊರಗೆ ಹೋಗಿ ವಿದ್ಯಾರ್ಥಿಗಳು ಎಕ್ಸಾಂ ಬರೆಯಬೇಕಾಯಿತು. ಸಚಿವ ಪ್ರಿಯಾಂಕ್ ಖರ್ಗೆ ಗಲಾಟೆ ಮಾಡಿದ್ದಕ್ಕೆ ಅದೇ ಜಿಲ್ಲೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ಕೊಟ್ಟರು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:55 pm, Fri, 17 May 24