AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್​ ಜೀವನದಲ್ಲಿ ಬರುವ ವಿಶೇಷ ವ್ಯಕ್ತಿ ಕೀರ್ತಿ ಸುರೇಶ್​? ಆಹಾ.. ಬೆಸ್ಟ್​ ಜೋಡಿ

ಪ್ರಭಾಸ್​ ಮದುವೆ ಯಾವಾಗ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಇದೆ. ‘ತುಂಬ ವಿಶೇಷವಾದ ವ್ಯಕ್ತಿಯೊಬ್ಬರು ಕಡೆಗೂ ನಮ್ಮ ಜೀವನದಲ್ಲಿ ಪ್ರವೇಶ ಪಡೆಯುತ್ತಿದ್ದಾರೆ’ ಎಂದು ಪ್ರಭಾಸ್​ ಅವರು ಅಭಿಮಾನಿಗಳಿಗೆ ತಿಳಿಸಿದ್ದರು. ಅದರ ಬೆನ್ನಲ್ಲೇ ಕೀರ್ತಿ ಸುರೇಶ್​ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ. ಅಷ್ಟೇ ಅಲ್ಲ, ಕೀರ್ತಿ ಸುರೇಶ್​ ಅವರ ಧ್ವನಿ ಕೂಡ ಕೇಳಿಸಿದೆ.

ಪ್ರಭಾಸ್​ ಜೀವನದಲ್ಲಿ ಬರುವ ವಿಶೇಷ ವ್ಯಕ್ತಿ ಕೀರ್ತಿ ಸುರೇಶ್​? ಆಹಾ.. ಬೆಸ್ಟ್​ ಜೋಡಿ
ಪ್ರಭಾಸ್​, ಕೀರ್ತಿ ಸುರೇಶ್​
Follow us
ಮದನ್​ ಕುಮಾರ್​
|

Updated on: May 19, 2024 | 8:34 AM

ಈಗಂತೂ ನಟ ಪ್ರಭಾಸ್​ (Prabhas) ಅವರು ದಿನದಿನವೂ ಸುದ್ದಿ ಆಗುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ. ಹೌದು, ಈ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರವಾಗಿದೆ. ಹಾಗಾಗಿ ಬಿರುಸಿನಿಂದ ಪ್ರಚಾರ ಮಾಡಲಾಗುತ್ತಿದೆ. ಹೊಸ ಹೊಸ ತಂತ್ರಗಳ ಮೂಲಕ ಸಿನಿಮಾತಂಡ ಪ್ರಚಾರ ಮಾಡುತ್ತಿದೆ. ಈ ನಡುವೆ ಪ್ರಭಾಸ್​ ಅವರ ಒಂದು ಇನ್​ಸ್ಟಾಗ್ರಾಮ್​ ಸ್ಟೋರಿ ಗಮನ ಸೆಳೆದಿತ್ತು. ತಮ್ಮ ಬದುಕಿನಲ್ಲಿ ಓರ್ವ ಸ್ಪೆಷಲ್​​ ವ್ಯಕ್ತಿ ಬರಲಿದ್ದಾರೆ ಎಂದು ಅವರು ಹೇಳಿದ್ದಾರೆ. ಆ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ ಕೀರ್ತಿ ಸುರೇಶ್​ (Keerthy Suresh) ಹೆಸರು ಕೇಳಿಬರುತ್ತಿದೆ!

ಅಂದಹಾಗೆ, ಇದು ಪ್ರಭಾಸ್​ ಅವರ ವೈಯಕ್ತಿಕ ಜೀವನದ ವಿಷಯ ಅಲ್ಲ. ಪಕ್ಕಾ ಸಿನಿಮಾದ ವಿಚಾರ. ‘ಕಲ್ಕಿ 2898 ಎಡಿ’ ಸಿನಿಮಾದ ಪ್ರಚಾರಕ್ಕಾಗಿಯೇ ಪ್ರಭಾಸ್​ ಅವರು ಆ ರೀತಿ ಪೋಸ್ಟ್​ ಮಾಡಿದ್ದರು. ಈ ಸಿನಿಮಾದಲ್ಲಿ ಒಂದು ವಿಶೇಷ ಕಾರು ಇರಲಿದೆ. ಅದನ್ನು ತುಂಬ ಸ್ಪೆಷಲ್​ ಆಗಿ ವಿನ್ಯಾಸ ಮಾಡಲಾಗಿದೆ. ಅದಕ್ಕೆ ಬುಜ್ಜಿ ಎಂದು ಹೆಸರು ಇಡಲಾಗಿದೆ. ಆ ಕಾರು ಸಿರಿ, ಅಲೆಕ್ಸಾ ರೀತಿ ಮಾತನಾಡಲಿದೆ. ಅದಕ್ಕೆ ನಟಿ ಕೀರ್ತಿ ಸುರೇಶ್​ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ಗೆ ಹೋಗಿ ಏಕಾಏಕಿ ಗ್ಲಾಮರ್​ ಅವತಾರ ತಾಳಿದ ನಟಿ ಕೀರ್ತಿ ಸುರೇಶ್​

‘ಕಲ್ಕಿ 2898 ಎಡಿ’ ಸಿನಿಮಾ ಸೈನ್ಸ್​ ಫಿಕ್ಷನ್​ ಮಾದರಿಯಲ್ಲಿ ಮೂಡಿಬರುತ್ತಿದೆ. ನಾಗ್​ ಅಶ್ವಿನ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ಕಥಾನಾಯಕ ಕಾಲಭೈರವ ಬಳಸುವ ವಿಶೇಷ ಕಾರಿನಲ್ಲಿ ಕೀರ್ತಿ ಸುರೇಶ್​ ಅವರ ಧ್ವನಿ ಇರಲಿದೆ. ಹೀರೋ ಏನು ಮಾಡಬೇಕು? ಎಲ್ಲಿಗೆ ಹೋಗಬೇಕು ಎಂಬುದನ್ನು ಬುಜ್ಜಿ ತಿಳಿಸುತ್ತದೆ. ಇದು ಕಥಾನಾಯಕನ ಬೆಸ್ಟ್​ ಫ್ರೆಂಡ್​ ಆಗಿರಲಿದೆ.

ಜೂನ್​ 27ರಂದು ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಲಿದೆ. ಮೇ 22ರಂದು ಬುಜ್ಜಿ ಕಾರಿನ ಸಂಪೂರ್ಣ ಪರಿಚಯ ಮಾಡಿಕೊಡಲಾಗುವುದು. ಸಿನಿಮಾದ ಪ್ರಚಾರದಲ್ಲಿ ಕೂಡ ಈ ಕಾರು ಪ್ರಮುಖ ಪಾತ್ರ ವಹಿಸಲಿದೆ. ಈ ಸಿನಿಮಾದಲ್ಲಿ ಕಮಲ್​ ಹಾಸನ್​, ದೀಪಿಕಾ ಪಡುಕೋಣೆ, ಅಮಿತಾಭ್​ ಬಚ್ಚನ್​, ದಿಶಾ ಪಟಾನಿ ಅವರಂತಹ ಸ್ಟಾರ್​ ಕಲಾವಿದರು ನಟಿಸಿದ್ದಾರೆ. ಅಲ್ಲದೇ, ರಾಮ್​ ಗೋಪಾಲ್​ ವರ್ಮಾ, ರಾಜಮೌಳಿ, ನಾನಿ, ದುಲ್ಕರ್​ ಸಲ್ಮಾನ್​, ವಿಜಯ್​ ದೇವರಕೊಂಡ ಮುಂತಾದವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!